ಗಂಡನ ಜೊತೆ ಪಿಕ್‌ನಿಕ್ ತೆರಳಿದ್ದ ನವವಿವಾಹಿತೆ ಮೇಲೆ ಐವರಿಂದ ಗ್ಯಾಂಗ್‌ರೇಪ್; 100 ಜನರು ವಶಕ್ಕೆ

By Mahmad Rafik  |  First Published Oct 26, 2024, 3:09 PM IST

ಪತಿ ಜೊತೆ ಪಿಕ್‌ನಿಕ್ ತೆರಳಿದ್ದ ನವವಿವಾಹಿತೆಯ ಮೇಲೆ ಐವರು ಗ್ಯಾಂಗ್ ರೇಪ್ ನಡೆಸಿದ್ದಾರೆ. ಈ ಪ್ರಕರಣ ಸಂಬಂಧ ಪೊಲೀಸರು 100ಕ್ಕೂ ಅಧಿಕ ಜನರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.


ಭೋಪಾಲ್: ಪತಿ ಜೊತೆ ಪಿಕ್‌ನಿಕ್ ತೆರಳಿದ್ದ ನವವಿವಾಹಿತೆ ಮೇಲೆ ಐವರು ಗ್ಯಾಂಗ್ ರೇಪ್ ನಡೆಸಿದ್ದಾರೆ. ಈ ಪ್ರಕರಣ ಸಂಬಂಧ ಪೊಲೀಸರು 100ಕ್ಕೂ ಅಧಿಕ ಜನರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಘಟನೆ ಸೋಮವಾರ ಗುಢ್ ತಹಸೀಲ್‌ ಭಾಗದ ಪ್ರೇಕ್ಷಣಿಯ ಸ್ಥಳದಲ್ಲಿ ನಡೆದಿದೆ. ಸಂತ್ರಸ್ತೆಯ ಮದುವೆ ಕೆಲ ದಿನಗಳ ಹಿಂದೆಯಷ್ಟ ನಡೆದಿತ್ತು. ಸಂತ್ರಸ್ತೆಯ ವಯಸ್ಸು 19 ಮತ್ತು ಪತಿಯ ವಯಸ್ಸು 20ರ ಆಸುಪಾಸಿನಲ್ಲಿದೆ ಎಂದು ರೇವಾ ಜಿಲ್ಲೆಯ ಡಿಎಸ್‌ಪಿ ಹಿಮಾಲಿ ಪಾಠಕ್ ಮಾಹಿತಿ ನೀಡಿದ್ದಾರೆ.

ತನ್ನ ಮೇಲೆ ಅತ್ಯಾಚಾರ ಎಸಗಿದ ಐವರಲ್ಲಿ ಓರ್ವನ ಕೈ ಮತ್ತು ಎದೆ ಮೇಲೆ ಟ್ಯಾಟೂ ಇತ್ತು ಎಂದು ಸಂತ್ರಸ್ತೆ ಹೇಳಿಕೆ ನೀಡಿದ್ದಾರೆ. ನಾವು ಪ್ರಕರಣ ಸಂಬಂಧ 100ಕ್ಕೂ ಅಧಿಕ ಜನರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಸಾಮೂಹಿಕ ಅತ್ಯಾಚಾರ ಸೂಕ್ಷ್ಮ ಪ್ರಕರಣವಾಗಿದ್ದು, ಸಂತ್ರಸ್ತೆಯ ಗುರುತು ಬಹಿರಂಗವಾಗದಂತೆ ಪೊಲೀಸರು ಮುನ್ನೆಚ್ಚರಿಕೆ ತೆಗೆದುಕೊಂಡು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಡಿಎಸ್‌ಪಿ ಹಿಮಾಲಿ ಪಾಠಕ್ ಹೇಳಿದ್ದಾರೆ.

Tap to resize

Latest Videos

undefined

ನಿಮ್ಮ ಹೆಂಡತಿ 'ಕರಿಮಣಿ ಮಾಲೀಕ ನೀನಲ್ಲ' ಎಂದು ರೀಲ್ಸ್ ಮಾಡಿದರೆ ಗಂಡಂದಿರೇ ಹುಷಾರ್!

ದಂಪತಿ ಮಂಗಳವಾರ ಮಧ್ಯಾಹ್ನ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಸಾಮೂಹಿಕ ಅತ್ಯಾಚಾರ ವಿಷಯ ತಿಳಿಯುತ್ತಿದ್ದಂತೆ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಆಗಮಿಸಿ, ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯ್ತು. ಅದೇ ದಿನ ಸಂಜೆ 7 ಗಂಟೆಗೆ ಪೊಲೀಸರು ಪ್ರಕರಣದ ಕುರಿತು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. 

ಮಹಿಳೆಯ ಹೇಳಿಕೆಯ ಪ್ರಕಾರ, ಗುಢ್ ಕೈಗಾರಿಕಾ ಪ್ರದೇಶದ ಪ್ರಸಿದ್ಧ ದೇವಾಲಯದಿಂದ ಸುಮಾರು ಎರಡು ಕಿಲೋ ಮೀಟರ್ ದೂರದಲ್ಲಿರುವ ಕಾರಂಜಿ ಬಳಿ ಗಂಡ-ಹೆಂಡತಿ ನಡುವೆ ಜಗಳ ನಡೆದಿದೆ. ಇದೇ ಪ್ರದೇಶದಲ್ಲಿ ಆಕೆ ಮೇಲೆ ಐವರು ಅತ್ಯಾಚಾರ ಎಸಗಿದ್ದಾರೆ. ಇದುವರೆಗೂ ಯಾರನ್ನೂ ಸಹ ಬಂಧನ ಮಾಡಿಲ್ಲ. 100ಕ್ಕೂ ಅಧಿಕ ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಅಪರಿಚಿತ ಐವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಅಕ್ಕನ ಗಂಡನೊಂದಿಗೆ ಅಕ್ರಮ ಸಂಬಂಧಕ್ಕೆ ಗಂಡನಿಗೆ ಗುಂಡಿ ತೋಡಿದ ಸುಪನಾತಿ ಹೆಂಡತಿ!

click me!