
ಗದಗ (ಜು.30): ಮಾನಸಿಕ ಅಸ್ವಸ್ಥ ಮಗನೋರ್ವ ಹೆತ್ತ ತಾಯಿಯ ಮೇಲೆಯೇ ಕೊಡಲಿಯಿಂದ ಹಲ್ಲೆ ನಡೆಸಿದ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ ಬೆಳವಣಕಿ ಗ್ರಾಮದ ಕುರುಬರ ಓಣಿಯಲ್ಲಿ ನಡೆದಿದ್ದು, ಹಲ್ಲೆಯಿಂದ ತಾಯಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಶಿವಪ್ಪ ತಟ್ಟಿ ಎಂಬಾತನಿಂದ ಹಲ್ಲೆ, ಗೌರವ್ವ, ಗಂಭೀರವಾಗಿ ಗಾಯಗೊಂಡಿರುವ ತಾಯಿ. ಏಕಾಏಕಿ ಕೊಡಲಿಯಿಂದ ಹಲ್ಲೆ ನಡೆಸಿದ್ದರಿಂದ ಗಂಭೀರವಾಗಿ ಗಾಯಗೊಂಡಿರುವ ಮಹಿಳೆ. ಮಗನಿಂದ ಹಲ್ಲೆಗೊಳಗಾದ ಗೌರವ್ವ ರೋಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿರುವ ವೈದ್ಯರು.
ಅಕ್ರಮ ಸಂಬಂಧಕ್ಕೆ ಮಕ್ಕಳ ಮುಂದೆ ಮಹಿಳೆ ಮರಕ್ಕೆ ಕಟ್ಟಿ ಕೂದಲು ಕತ್ತರಿಸಿ ಕ್ರೌರ್ಯ, ಇದು ಪಂಚಾಯತ್ ಆಜ್ಞೆ!
ಮಗ ಶಿವಪ್ಪ ಮಾನಸಿಕ ಅಸ್ವಸ್ಥನಾಗಿದ್ದು ಈ ಹಿಂದೆ ತಂದೆಯ ಮೇಲೆಯೂ ಹಲ್ಲೆ ನಡೆಸಿದ್ದ. ಬಿಡಿಸಲು ಬಂದವರ ಮೇಲೆಯೂ ಹಲ್ಲೆಗೆ ಮುಂದಾಗಿದ್ದ. ಇದೀಗ ಮತ್ತೆ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಸ್ಥಳೀಯರು 112 ಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಗಂಡ ಅಕ್ರಮ ಸಂಬಂಧ ಹೊಂದಿದ್ದಾನೆಂದು ಲೈವ್ ವೀಡಿಯೊ ಮಾಡಿ ಮಹಿಳೆ ಆತ್ಮಹತ್ಯೆಗೆ ಶರಣು!
ಸೆರೆಹಿಡಿಯಲು ಪೊಲೀಸರು ಹರಸಾಹಸ:
ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಬಂದ 112 ವಾಹನ ಪೊಲೀಸರು. ಪುಂಡಾಟ ತೋರಿದ ಮಾನಸಿಕ ಅಸ್ವಸ್ಥನ ಹಿಡಿಯಲು ಹರಸಾಹಸಪಡುವಂತಾಯಿತು. ತಾಯಿಯ ಮೇಲೆ ಹಲ್ಲೆ ನಡೆಸಿದ ಬಳಿಕ ಮನೆಯಲ್ಲಿ ಕೊಡಲಿ ಹಿಡಿದು ಅಡಗಿ ಕುಳಿತಿದ್ದ ಶಿವಪ್ಪ. ಸ್ಥಳೀಯರ ಸಹಾಯದಿಂದ ಸತತ ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಕೊನೆ ಮಾನಸಿಕ ಅಸ್ವಸ್ಥನನ್ನು ಸೆರೆಹಿಡಿದು ನಂತರ ಪಾಲಕರೊಂದಿಗೆ ಧಾರವಾಡ ನಿಮ್ಹಾನ್ಸ್ ಆಸ್ಪತ್ರೆಗೆ ರವಾನಿಸಲಾಯಿತು. ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿ ಎಸ್‌ಡಿ ಗೌಡರ, ವೀರಪ್ಪ ದೊನ್ನೆಗೌಡ, ಎಚ್‌ಎಸ್ ದೊಣ್ಣೆಗುಡ್ಡ, ಮಹೇಶ್ ಚಕ್ರಸಾಲಿ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಈ ವೇಳೆ ಸಾರ್ವಜನಿಕರು ಪೊಲೀಸರಿಗೆ ಸಾಥ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ