
ಇದೊಂದು ಅಪರೂಪದ ಲವ್ ಸ್ಟೋರಿ, ಯಾವ ಫಿಲ್ಮ್ ಸ್ಟೋರಿಗೂ ಕಡಿಮೆ ಇಲ್ಲ. ಅವಳು ಅಗರ್ಭ ಶ್ರೀಮಂತೆ. ಕೋಟಿ ಕೋಟಿ ಆಸ್ತಿ ಅವಳ ಹೆಸರಲ್ಲಿದೆ. ಇನ್ನೂ ಅವನು ಎಲೆಕ್ಟ್ರಿಷಿಯನ್. ದಿನಗೂಲಿಗೆ ಕೆಲಸಕ್ಕೆ ಹೋಗ್ತಿದ್ದ. ಅವರಿಬ್ಬರ ಮಧ್ಯೆ ಲವ್ ಶುರುವಾಗಿತ್ತು. ಇನ್ನೂ ಅವರಿಬ್ಬರ ಪ್ರೀತಿಗೆ ಇನ್‌ಸ್ಟಾಗ್ರಾಮೇ ಸೇತುವೆ. ಸೋಷಿಯಲ್ ಮೀಡಿಯಾ, ಎಲ್ಲೋ ಇದ್ದ ಇಬ್ಬರನ್ನ ಒಂದು ಮಾಡಿತ್ತು. ಆದ್ರೆ ಅದೇ ಜೋಡಿಯನ್ನ ಬೇರೆ ಮಾಡಲು ಅಲ್ಲೊಬ್ಬ ಕಿರಾತಕ ರೆಡಿಯಾಗಿದ್ದ. ಅವಳ ಪ್ರೀತಿಯನ್ನು ಮುಗಿಸಲು ರಕ್ತಸಂಬಂಧಿಯೇ ಇಲ್ಲಿ ಕುತಂತ್ರ ನಡೆಸಿದ್ದ. ಅಷ್ಟಕ್ಕೂ ಆ ವಿಲನ್ ಯಾರು.? ಏನು ಈ ಲವ್ ಸ್ಟೋರಿ. ಒಂದು ಸಿನಿಮಾವನ್ನೇ ಮೀರಿಸೋ ಅಪರೂಪದ ಲವ್ ಕಹಾನಿ ಹೇಳ್ತೇವೆ ನೋಡಿ.
ಕೋಟಿ ಕೋಟಿಯ ಓಡತಿಗೆ ಮಾವನ ಮಗ ವಿಲನ್ ಆಗಿಬಿಟ್ಟಿದ್ದ. ಅವಳ ಕೋಟಿ ಕೋಟಿ ಆಸ್ತಿ ಹೊಡೆಯೋ ಹುನ್ನಾರ ಮಾಡಿದ್ದ ಆತ ಆಕೆ ಲವ್ ಮಾಡ್ತಿದ್ದೀನಿ ಅಂದಾಗ ಮತ್ತಷ್ಟು ಉಗ್ರನ್ನಾಗಿಬಿಟ್ಟ. ಹಾಗಾದ್ರೆ ಪ್ರಿಯಾಂಕ ಲವ್ ವಿಚಾರ ತಿಳಿದ ನಂತರ ಏನೇನಾಯ್ತು ಅನ್ನೊದೇ ಇಂಟ್ರೆಸ್ಟಿಂಗ್ ವಿಚಾರ.
ಮಕ್ಕಳಿಗೆ ಭಾರವಾಗಿ ಬದುಕಲು ಸಾಧ್ಯವಿಲ್ಲ ಎಂದು ಬದುಕು ಅಂತ್ಯಗೊಳಿಸಿದ ಹಿರಿಯ ಪೋಷಕರು!
ಹೆತ್ತವರು ಮೃತಪಟ್ಟ ಮೇಲೆ ಈ ಸುಧಾಕರನೇ ಪ್ರಿಯಾಂಕಳನ್ನ ಸಾಕಿ ಸಲುಹಿದ್ದ. ಆದ್ರೆ ಯಾವಾಗ ಈಕೆಗೆ 18 ವರ್ಷ ಆಯ್ತೋ ಆಕೆಯ ಆಸ್ತಿಯನ್ನೆಲ್ಲಾ ತಾನು ಪಡೆಯಬೇಕು ಅಂತ ಆಸೆಪಟ್ಟಿದ್ದ. ಅದಕ್ಕಾಗಿ ಪ್ರತಿ ನಿತ್ಯ ಟಾರ್ಚರ್ ಕೊಡೋದಕ್ಕೆ ಶುರು ಮಾಡಿದ್ದ. ಪ್ರೀತಿಗಾಗಿ ಹಂಬಲಿಸುತ್ತಿದ್ದ ಸಮಯದಲ್ಲೇ ಪ್ರಿಯಾಂಕಾಗೆ ಸಿಕ್ಕವನು ಒಬ್ಬ ದಿನಗೂಲಿ ಕಾರ್ಮಿಕ. ಇನ್ಸ್ಟಾಗ್ರಾಂನಲ್ಲಿ ಸಿಕ್ಕ ಆತನನ್ನ ಈಕೆ ತುಂಬಾನೇ ಪ್ರೀತಿಸಿಬಿಟ್ಟಳು. ಇಬ್ಬರ ಪ್ರೀತಿಗೆ ಜಾತಿಯಾಗಲಿ, ಅಂತಸ್ತಾಗಲಿ ಅಡ್ಡಿಯಾಗಲೇ ಇಲ್ಲ. ಅದ್ರೆ ಅಡ್ಡಿಯಾಗಿದ್ದು ಮತ್ತದೇ ಮಾವನ ಮಗ. ಅವಳ ಪ್ರೀತಿ ವಿಷಯ ತಿಳಿದು ಆ ಮಾವ ಇನ್ನಿಲ್ಲದ ಕಸರತ್ತು ಮಾಡಿದ್ದ. ಅಕೆಯನ್ನ ಬಂಧಿಯಾಗಿಸಿದ್ದ. ಆದ್ರೆ ಅದೆಲ್ಲವನ್ನ ದಾಟಿ ಇವತ್ತು ಆ ಹೆಣ್ಣುಮಗಳು ಪ್ರೀತಿಸಿದವಳನ್ನ ಮದುವೆಯಾಗಿದ್ದಾಳೆ
ಪ್ರಿಯಾಂಕ ಮತ್ತು ರೋಹಿತ್ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ ಅವರಿಗೆ ಒಳ್ಳೆಯದಾಗಲಿ. ಆದರೆ ಪ್ರಿಯಾಂಕಳ ಕೋಟಿ ಕೋಟಿ ಆಸ್ತಿಯ ಕಥೆ ಏನು..? ಇವರಿಗೆ ಇನ್ನಿಲ್ಲದ ಟಾರ್ಚರ್ ಕೊಟ್ಟಿದ್ದ ಸುಧಾಕರನ ಮುಂದಿನ ಪ್ಲಾನ್ ಏನು..? ರೋಹಿತ್ ಕುಟುಂಬದಿಂದ ಪ್ರಿಯಾಂಕಳಿಗೆ ಹೆತ್ತವರ ಪ್ರೀತಿ ಸಿಗುತ್ತಾ..? ಇದೆಲ್ಲಾ ಪ್ರಶ್ನೆಗಳಿಗೆ ಕಾಲವೇ ಉತ್ತರ ಕೊಡಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ