ಬಾಯ್‌ಫ್ರೆಂಡ್ ಜೊತೆ ಗಾಢ ಪ್ರೀತಿ, ರಾತ್ರೋರಾತ್ರಿ ಆತನ ಅಪ್ಪನ ಜೊತೆ ಓಡಿ ಹೋದ ಯುವತಿ!

Published : Apr 26, 2023, 05:14 PM IST
ಬಾಯ್‌ಫ್ರೆಂಡ್ ಜೊತೆ ಗಾಢ ಪ್ರೀತಿ, ರಾತ್ರೋರಾತ್ರಿ ಆತನ ಅಪ್ಪನ ಜೊತೆ ಓಡಿ ಹೋದ ಯುವತಿ!

ಸಾರಾಂಶ

ಪ್ರೀತಿ ಎಲ್ಲಿ, ಹೇಗೆಬೇಕಾದರು ಹುಟ್ಟಬಹುದು. ಇದಕ್ಕೆ ಮತ್ತೊಂದು ಸಾಲು ಸೇರಿಕೊಂಡಿದೆ. ಇದೇ ಪ್ರೀತಿ ಯಾವಾಗ ಬೇಕಾದರೂ ಕೊನೆಯಾಗಬಹುದು. ಇಷ್ಟೇ ಅಲ್ಲ ಹಲವು ಅಚ್ಚರಿಯನ್ನು ನೀಡಬಹುದು. ಬಾಯ್‌ಫ್ರೆಂಡ್ ಜೊತೆ ಗಾಢವಾದ ಪ್ರೀತಿ, ರಾತ್ರಿ ಫೋನ್ ಮಾಡಿ ಮಾತನಾಡಿದ್ದಾನೆ. ಬೆಳಗ್ಗೆ ಎದ್ದಾಗ ತನ್ನ ಅಪ್ಪನ ಜೊತೆಗೆ ಗೆಳತಿ ಓಡಿ ಹೋದ ಘಟನೆ ನಡೆದಿದೆ. 

ಕಾನ್ಪುರ(ಏ.26): ಈಗಿನ ಕಾಲದಲ್ಲಿ ಹುಡುಗಿ ಅಥವಾ ಹುಡುಗ ತನ್ನ ಪ್ರೀತಿ ಉಳಿಸಿಕೊಂಡು ಮದುವೆಯಾಗುವುದು ಹರಸಾಹಸವೇ ಸರಿ. ಕಾರಣ ಪ್ರೀತಿ ಯಾವಾಗ ಕೊನೆಯಾಗುತ್ತೆ, ಮತ್ತೊಂದು ಪ್ರೀತಿ ಯಾವಾಗು ಶುರುವಾಗುತ್ತೆ ಅನ್ನೋದು ಊಹಿಸಲು ಅಸಾಧ್ಯ. ಹೀಗಾದರೆ ಇದರಲ್ಲಿ ಅಚ್ಚರಿ ಇಲ್ಲ ಬಿಡಿ. ಆದರೆ ಇಲ್ಲೊಬ್ಬನಿಗೆ ಶಾಕ್ ಮೇಲ ಶಾಕ್ ಎದುರಾಗಿದೆ. 20ಹರೆಯದ ಯುವತಿಯನ್ನು ಗಾಢವಾಗಿ ಪ್ರೀತಿಸುತ್ತಿದ್ದ. ಆಕೆ ಕೂಡ ಈತನ ಮನಗೆ ಬರುತ್ತಿದ್ದಳು. ರಾತ್ರಿ ಫೋನ್, ಬೈಕಲ್ಲಿ ಒಂದು ರೌಂಡ್ ಸುತ್ತಾಟ ಎಲ್ಲವೂ ಇತ್ತು. ಹೀಗೆ ಒಂದು ರಾತ್ರಿ ಫೋನ್ ಸವಿಮಾತನಾಡಿ ಮಲಗಿದ್ದಾನೆ. ಬೆಳಗ್ಗೆ ಎದ್ದಾಗ ಆಘಾತ. ಕಾರಣ ತಾನು ಪ್ರೀತಿಸಿದ ಹುಡುಗಿ, ತನ್ನ ಅಪ್ಪನ ಜೊತೆ ಓಡಿ ಹೋಗಿದ ಘಟನೆ ಕಾನ್ಪುರದಲ್ಲಿ ನಡೆದಿದೆ.

ಕಾನ್ಪುರದ ನಿವಾಸಿ 20 ವರ್ಷದ ಅಮಿತ್ ಯುವತಿಯನ್ನು ಕಳೆದ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದ. ಕಮಲೇಶ್ ತನ್ನ ಪ್ರೀತಿಯನ್ನು ಮನೆಯವರಿಗೂ ಹೇಳಿದ್ದ. ಹುಡುಗನ ವಯಸ್ಸು ಚಿಕ್ಕದು ಇನ್ನೊಂದು ವರ್ಷ ಹೋದರೆ ಮದುವೆ ಎಂಬ ಮಾತು ಮನೆಯವರಿಂದಲೇ ಬಂದಿತ್ತು. ಹೀಗಾಗಿ ಮನೆಯಿಂದ ಗ್ರೀನ್ ಸಿಗ್ನಲ್ ಸಿಕ್ಕ ಮೇಲೆ ಇನ್ನೇನು ಬೇಕು ಹೇಳಿ. ಇವರಿಬ್ಬರ ಸುತ್ತಾಟ, ಹಾರಾಟ ಜೋರಾಗಿತ್ತು. ಇತ್ತ ಯುವತಿ ಕೂಡ ಪದೇ ಪದೇ ಅಮಿತ್ ಮನೆಗೆ ಬರುತ್ತಿದ್ದಳು. ಇವರ ಪ್ರೀತಿ ಯಾವುದೇ ಆತಂಕವಿಲ್ಲದೆ ಮುಂದುವರಿದಿತ್ತು.

ಬಾಯ್‌ಫ್ರೆಂಡನ್ನು ಮರಕ್ಕೆ ಕಟ್ಟಿ ಯುವತಿ ಮೇಲೆ ಇಬ್ಬರು ಕಾಮುಕರಿಂದ ರೇಪ್‌

ಪ್ರತಿ ದಿನ ಫೋನ್, ಭೇಟಿ ಇವೆಲ್ಲವೂ ಸಾಮಾನ್ಯವಾಗಿತ್ತು. ಹೀಗೆ 2022ರ ಮಾರ್ಚ್ ತಿಂಗಳಲ್ಲಿ ರಾತ್ರಿ ಫೋನ್ ಮೂಲಕ ಮಾತನಾಡಿ ಅಮಿತ್ ಮಲಗಿದ್ದಾನೆ. ಬೆಳಗ್ಗೆ ಎದ್ದಾಗ ಶಾಕಿಂಗ್ ನ್ಯೂಸ್. ತಾನು ಪ್ರೀತಿಸಿದ ಯುವತಿ ತನ್ನ ಅಪ್ಪ ಕಮಲೇಶ್ ಜೊತೆ ಓಡಿ ಹೋಗಿದ್ದಾಳೆ. ಅಪ್ಪನ ಫೋನ್ ಹಾಗೂ ಯುವತಿ ಫೋನ್ ಸ್ವಿಚ್ ಆಫ್. ಯುವತಿ ಕುಟುಂಬಸ್ಥರು ಹಾಗೂ ಅಮಿತ್ ಕುಟುಂಬಸ್ಥರು ದೂರು ದಾಖಲಿಸಿದ್ದರು. 

ಕಳೆದೊಂದು ವರ್ಷದಿಂದ ಹುಡುಕಾಟ ನಡೆಸಿದ ಪೊಲೀಸರು ಇದೀಗ ಕಮಲೇಶ್ ಹಾಗೂ ಯುವತಿಯನ್ನು ಪತ್ತೆ ಹಚ್ಚಿದ್ದಾರೆ. ದೆಹಲಿಯಲ್ಲಿ ಇವರಿಬ್ಬರು ಜೊತೆಯಾಗಿ ವಾಸವಿರುದನ್ನು ಪತ್ತೆ ಹಚ್ಚಿದ ಪೊಲೀಸರ ಕಮಲೇಶನ್‌ನ್ನು ವಶಕ್ಕೆ ಪಡೆದಿದ್ದಾರೆ. ಯುವತಿಯ ವೈದ್ಯಕೀಯ ಪರೀಕ್ಷೆಗೆ ಸೂಚಿಸಲಾಗಿದೆ. ಯವತಿ ಕುಟುಂಬಸ್ಥರು, ಕಿಡ್ನಾಪ್ ಕೇಸ್ ದಾಖಲಿಸಿದ್ದರು. ಹೀಗಾಗಿ ಕಮಲೇಶ್ ಇದೀಗ ಪೊಲೀಸ್ ಕಸ್ಟಡಿ ಗತಿಯಾಗಿದೆ.

Trending : ಛೀ..! ಒಳ ಉಡುಪು ಬದಲಿಸಲ್ವಂತೆ ಈಕೆ ಬಾಯ್ ಫ್ರೆಂಡ್, ಏನ್ಮಾಡ್ಲೀ ಕೇಳಿದ್ದಾಳೆ

ಪ್ರಕಣದ ತನಿಖೆ ನಡೆಸಿದ ಪೊಲೀಸರೇ ಒಂದು ಕ್ಷಣ ದಂಗಾಗಿದ್ದಾರೆ. ಮಗನ ಹುಡುಗಿಯನ್ನು ತಂದೆ ಪ್ರೀತಿಸಿ ಮದುವೆಯಾದ ಈ ಘಟನೆ ಯಾವ ಸಿನಿಮಾಗೂ ಕಡಿಮೆ ಇಲ್ಲ. ಅಮಿತ್ ಪ್ರೀತಿಸಿದ ಯುವತಿ ಮನೆಗೆ ಬರುತ್ತಿದ್ದಳು. ಈ ವೇಳೆ ಅಮಿತ್ ತಂದೆ ಕಮಲೇಶ್ ಸಹಜವಾಗಿ ಮಾತನಾಡಿದ್ದಾರೆ. ಇವರ ಮಾತು ಪ್ರೀತಿಗೆ ತಿರುಗಿದೆ. ಇತ್ತ ಬಾಯ್‌ಫ್ರೆಂಡ್ ಅಮಿತ್ ಜೊತೆಗೆ ನಾಮಕವಾಸ್ತೆಗೆ ಮಾತನಾಡುತ್ತಿದ್ದಳು. ನಿಜವಾದ ಪ್ರೀತಿ ಅಮಿತ್ ತಂದೆ ಜೊತೆ ಶುರುವಾಗಿದೆ. ಹೀಗೆ ಪ್ರೀತಿಸಿದ ಕಮಲೇಶ್ ಹಾಗೂ ಯುವತಿ ರಾತ್ರೋರಾತ್ರೋ ದೆಹಲಿಗೆ ಓಡಿ ಹೋಗಿ ಜೊತೆಯಾಗಿ ನಲೆಸಿದ್ದಾರೆ. ಇವರಿಬ್ಬರು ಮದುವೆಯಾಗಿದೆಯಾ? ಅನ್ನೋ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ