Koppal crime: ಮದುವೆ ಮಾಡಿಸುತ್ತಿಲ್ಲವೆಂದು ಅಣ್ಣನನ್ನೇ ಕೊಂದ ಭೂಪ

By Kannadaprabha News  |  First Published Feb 4, 2023, 8:59 AM IST

ತನ್ನ ಮದುವೆ ಮಾಡಿಸುತ್ತಿಲ್ಲ ಹಾಗೂ ಆಸ್ತಿ ಹಂಚಿಕೆ ಮಾಡುತ್ತಿಲ್ಲ ಎಂಬ ಕಾರಣಕ್ಕಾಗಿ ತಮ್ಮನೊಬ್ಬ ಸ್ವಂತ ಅಣ್ಣನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ತಾಲೂಕಿನ ಪಟ್ಟಲಚಿಂತಿ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.


ಕುಷ್ಟಗಿ (ಫೆ.4) :ತನ್ನ ಮದುವೆ ಮಾಡಿಸುತ್ತಿಲ್ಲ ಹಾಗೂ ಆಸ್ತಿ ಹಂಚಿಕೆ ಮಾಡುತ್ತಿಲ್ಲ ಎಂಬ ಕಾರಣಕ್ಕಾಗಿ ತಮ್ಮನೊಬ್ಬ ಸ್ವಂತ ಅಣ್ಣನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ತಾಲೂಕಿನ ಪಟ್ಟಲಚಿಂತಿ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.

ಯಮನೂರಪ್ಪ ಕಡಿವಾಲ (37) ಕೊಲೆಗೀಡಾದ ವ್ಯಕ್ತಿ. ಮಲ್ಲಪ್ಪ ಕಡಿವಾಳ ಕೊಲೆ ಮಾಡಿದ ಆರೋಪಿ. ತಾಲೂಕಿನ ಹನುಮಸಾಗರದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tap to resize

Latest Videos

undefined

ಆಗಿದ್ದೇನು?:

ಮಲ್ಲಪ್ಪನು ತನಗೆ ಮದುವೆ ಮಾಡಿಸುವಂತೆ ಹಾಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ನೀಡುವಂತೆ ಹಿರಿಯ ಸಹೋದರ ಯಮನೂರಪ್ಪನಿಗೆ ದುಂಬಾಲು ಬಿದ್ದಿದ್ದ. ಆದರೆ ಮಲ್ಲಪ್ಪ ಎಲ್ಲರೂ ಸೇರಿ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳೊಣ ಎಂದು ವಿಷಯವನ್ನು ಮುಂದೆ ಹಾಕುತ್ತ ಬಂದಿದ್ದ. ಇದರಿಂದ ಇಬ್ಬರ ಮಧ್ಯೆ ದ್ವೇಷ ಬೆಳೆದಿತ್ತು.

ಯಮನೂರಪ್ಪ ಗುರುವಾರ ರಾತ್ರಿ ಕೆಲಸದಿಂದ ಮನೆಗೆ ಬಂದು ಮನೆಯ ಬಚ್ಚಲಿನಲ್ಲಿ ಮುಖ ತೊಳೆಯುತ್ತಿದ್ದಾಗ ಏಕಾಯೇಕಿ ಆತನ ಮೇಲೆ ದಾಳಿ ಮಾಡಿದ ಮಲ್ಲಪ್ಪ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಕಾರ್ಯಾಚರಣೆಗೆ ಇಳಿದ ಪೊಲೀಸರು ಆರೋಪಿಯನ್ನು ಹನುಮನಾಳ ಗ್ರಾಮದಲ್ಲಿ ಶುಕ್ರವಾರ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಮೃತ ಯಮನೂರಪ್ಪನ ಪತ್ನಿ ನೀಡಿದ ದೂರಿನ ಅನ್ವಯ ಹನುಮಸಾಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಗೆಳೆಯನೊಂದಿಗೆ ಸೇರಿ ಅಪ್ಪನ ಕೊಂದ ಅಮ್ಮನ ವಿರುದ್ಧ ಸಾಕ್ಷಿ ಹೇಳಿದ 6 ವರ್ಷದ ಕಂದ

ಪಟ್ಟಲಚಿಂತಿ ಗ್ರಾಮದಲ್ಲಿ ಮದುವೆ ಹಾಗೂ ಆಸ್ತಿ ಹಂಚಿಕೆ ಮತ್ತು ಇನ್ನಿತರ ವಿಚಾರದಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಆರೋಪಿಯನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು.

ಅರುಣಾಂಗ್ಷು ಗಿರಿ ಎಸ್ಪಿ

click me!