ಕ್ಲಾಸ್ ಅರ್ಧಕ್ಕೆ ಬಿಟ್ಟು ಹಾಸ್ಟೆಲ್‌ಗೆ ಬಂದು ಫ್ಯಾನ್‌ಗೆ ನೇಣು ಹಾಕಿಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರು ಜಿಲ್ಲೆ ಲಿಂಗಸೂಗೂರು ಪಟ್ಟಣದ ವಿಸಿಬಿ ಕಾಲೇಜು ಹಾಸ್ಟೆಲ್‌ನಲ್ಲಿ ನಡೆದಿದೆ.
ರಾಯಚೂರು (ಫೆ.04): ಕ್ಲಾಸ್ ಅರ್ಧಕ್ಕೆ ಬಿಟ್ಟು ಹಾಸ್ಟೆಲ್‌ಗೆ ಬಂದು ಫ್ಯಾನ್‌ಗೆ ನೇಣು ಹಾಕಿಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರು ಜಿಲ್ಲೆ ಲಿಂಗಸೂಗೂರು ಪಟ್ಟಣದ ವಿಸಿಬಿ ಕಾಲೇಜು ಹಾಸ್ಟೆಲ್‌ನಲ್ಲಿ ನಡೆದಿದೆ. ಐಶ್ವರ್ಯ (18) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಲಿಂಗಸೂಗೂರು ತಾಲೂಕಿನ ಗೋನವಾಟ್ಲ ತಾಂಡಾದ ವಿದ್ಯಾರ್ಥಿನಿ ಐಶ್ವರ್ಯ ವಿಸಿಬಿ ಕಾಲೇಜಿನ ಫಸ್ಟ್ ಪಿಯು ಸೈನ್ಸ್‌ನಲ್ಲಿ ಅಭ್ಯಾಸ ಮಾಡುತ್ತಿದ್ದಳು. ಸದ್ಯ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಲಿಂಗಸೂಗೂರು ಪೊಲೀಸರು ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿ ಕಾಲೇಜು ಆಡಳಿತ ಮಂಡಳಿ ಜೊತೆಗೆ ಚರ್ಚೆ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಲಿಂಗಸೂಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆಗೆ ಪ್ರಾಂಶುಪಾಲರೇ ಕಾರಣ: ಲಿಂಗಸಗೂರಿನ ವಿಶ್ವೇಶ್ವರ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅಭ್ಯಾಸ ಮಾಡ್ತಿದ್ದ ಐಶ್ವರ್ಯ ಆತ್ಮಹತ್ಯೆಗೆ ಪ್ರಾಂಶುಪಾಲರೇ ಕಾರಣ ಅಂತಾ ವಿದ್ಯಾರ್ಥಿನಿ ಪೋಷಕರು ಆರೋಪ ಮಾಡಿದ್ದು, ವಿದ್ಯಾರ್ಥಿನಿ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ರೂ ಇದುವರೆಗೂ ಮೃತದೇಹ ತೆಗೆಯಲು ಪೋಷಕರು ಬಿಡದೆ ವಸತಿ ಶಾಲೆಗೆ ಮುತ್ತಿಗೆ ಹಾಕಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.ಅಲ್ಲದೇ ಪ್ರಾಂಶುಪಾಲರು ಬರೋ ತನಕ ಮೃತದೇಹ ತೆಗೆಯಲು ಬಿಡಲ್ಲ ಎಂದು ಪೋಷಕರು ಹಾಗೂ ಸಂಬಂಧಿಕರು ರಾತ್ರಿಯ ತನಕ ಪಟ್ಟು ಹಿಡಿದಿದ್ದಾರೆ. ಇದುವರೆಗೂ ಮೃತ ವಿದ್ಯಾರ್ಥಿನಿ ಪೋಷಕರು ದೂರು ಕೂಡ ದಾಖಲಿಸಿಲ್ಲ.
Bengaluru: ವೈದ್ಯರ ನಿರ್ಲಕ್ಷ್ಯ ಜ್ಯೂನಿಯರ್ ಆರ್ಟಿಸ್ಟ್ ಸಾವು: ಪೋಷಕರ ಆರೋಪ?
ಹಾಸನದ ಯುವಕ ಚೆನ್ನೈನಲ್ಲಿ ಆತ್ಮಹತ್ಯೆ: ಕಳೆದ ಮೂರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ಹುಡುಗಿ ಮೋಸ ಮಾಡಿದಳೆಂದು ಜಿಲ್ಲೆಯ ಯುವಕನೊಬ್ಬ ಚೆನ್ನೈನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 24 ವರ್ಷದ ಕಾರ್ತಿಕ್ ಎಂಬಾತ ಪ್ರೀತಿಸಿದ ಹುಡುಗಿ ಕರೆದಳು ಎಂದು ಚೆನ್ನೈಗೆ ಹೋಗಿ ನಂತರದ ಆಕೆ ತನಗೆ ಮೋಸ ಮಾಡಿದ್ದಾಳೆಂದು ಹತಾಶನಾಗಿ ಆತ್ಮಹತ್ಯೆ ಯತ್ನಿಸಿ ಪ್ರಾಣ ಕಳೆದುಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡಿರುವ ಕಾರ್ತಿಕ್ ಹಾಸನ ನಗರದಲ್ಲಿರುವ ಖಾಸಗಿ ಹೋಟೆಲೊಂದರಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ನಿರ್ವಹಿಸುತ್ತಿದ್ದನು.
ಕಾರ್ತಿಕ್‌ಗೆ ಹೊಳೆನರಸೀಪುರ ತಾಲೂಕಿನ ಯುವತಿಯೊಂದಿಗೆ ಸ್ನೇಹವಾಗಿ, ಕಳೆದ ಮೂರು ವರ್ಷಗಳಿಂದ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿ ಮಾಡುತ್ತಿದ್ದರು. ಕಾರ್ತಿಕ್ ಮನೆಗೆ ಹಲವಾರು ಬಾರಿ ಬಂದು ಹೋಗುತ್ತಿದ್ದಳು. ಮದುವೆ ಪ್ರಸ್ತಾಪಕ್ಕೂ ಒಪ್ಪಿದ್ದಳು. ಆದರೇ ಕೆಲ ದಿನಗಳಿಂದ ಇಬ್ಬರಲ್ಲೂ ಮನಸ್ತಾಪ ಕಾಣಿಸಿದ್ದು, ನಂತರದಲ್ಲಿ ಆಕೆ ಕಾರ್ತಿಕ್‌ನ ಪ್ರೀತಿಯನ್ನು ನಿರಾಕರಿಸಲು ಮುಂದಾಗಿದ್ದಾಳೆ. ಆದರೆ ಆಕೆಯನ್ನು ಬಿಡಲು ಸಿದ್ಧನಿಲ್ಲದ ಕಾರ್ತಿಕ್ ಆಕೆ ಹೇಳಿದಂತೆಲ್ಲಾ ಕೇಳಲು ಆರಂಭಿಸಿದ್ದಾನೆ.
ಬೆಂಗಳೂರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ: ಆರು ತಿಂಗಳ ಬಳಿಕ ಶವ ನೋಡಿ ಪೊಲೀಸರೇ ಶಾಕ್!
ಒಮ್ಮೆ ಕರೆ ಮಾಡಿದಾಗ ಆಕೆ ತಾನು ಚನೈನಲ್ಲಿ ಇರುವುದಾಗಿ ತಿಳಿಸಿದ್ದು, ಬರುವಂತೆ ತಿಳಿಸಿದ್ದಾಳೆ. ಅದರಂತೆ ಕಾರ್ತಿಕ್ ಜ.26 ರಂದು ಸಂಜೆ ಪ್ರಯಾಣ ಬೆಳೆಸಿ ಚೆನ್ನೈನ 100 ಅಡಿ ರಸ್ತೆಯಲ್ಲಿರುವ ಅರುಂ ಬಾಕಮ್‌ನ ಲಾಡ್ಜ್ ನಲ್ಲಿ ರೂಂ ಮಾಡಿದ್ದಾನೆ. ರೂಂ ನಂಬರ್ 101 ರಲ್ಲಿ ಇದ್ದ ಕಾರ್ತಿಕ್ ಒಂದು ದಿವಸ ಕಳೆದರು ಹೊರಗೆ ಬರಲಿಲ್ಲ. ಜ.27 ರಂದು ಬೆಳಿಗ್ಗೆ ರೂಂ ಬಾಯ್ ಬಾಗಿಲು ತಟ್ಟಿದಾಗ ತೆರೆಯಲಿಲ್ಲ. ಮಾರನೆ ದಿನ ಹೋದರೂ ಸುಳಿವು ಇಲ್ಲದ ಕಾರಣ ಹಿಂಬದಿಯ ಕಿಟಕಿಯಲ್ಲಿ ನೋಡಿದಾಗ ಸೀರೆಯಿಂದ ಫ್ಯಾನ್‌ಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿರುವುದು ಕಂಡುಬಂದಿದೆ.