* ಮುರುಘಾ ಶ್ರೀ ವಿರುದ್ದದ ಮೊದಲ ಪೋಕ್ಸೋ ಕೇಸ್ ಗೆ ಆಡಿಯೋ ಬಿಗ್ ಟ್ವಿಸ್ಟ್.
* ಸಂತ್ರಸ್ತ ಬಾಲಕಿ ಜೊತೆ ಮಾಜಿ ಆಡಳಿತಾಧಿಕಾರಿ ಪತ್ನಿ ಸೌಭಾಗ್ಯ ಸಂಭಾಷಣೆ ಆಡಿಯೋ ವೈರಲ್.
* ಈ ಹಿಂದೆ ಬಾಲಕಿಗೆ ಆಮಿಷವೊಡ್ಡಿದ ಆಡಿಯೋ ಪ್ರಕರಣದಿಂದಾಗಿ ಬಸವರಾಜನ್ ಬಂಧನವಾಗಿದೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗನ (ನ.26) : ಮುರುಘಾ ಶ್ರೀಗಳು ಪೋಕ್ಸೋ ಪ್ರಕರಣದಲ್ಲಿ ಬಂಧನವಾಗಿ ಮೂರು ತಿಂಗಳಾಗಿದ್ದರೂ ದಿನೇ ದಿನೆ ಅನೇಕ ತಿರುವುಗಳು ಪಡೆದುಕೊಳ್ಳುತ್ತಿವೆ. ಈ ಹಿಂದೆ ಎರಡನೇ ಪೋಕ್ಸೋ ಕೇಸ್ ಗೆ ಸಂಬಂಧಿಸಿದಂತೆ ಓರ್ವ ಸಂತ್ರಸ್ತ ಬಾಲಕಿಯ ಜೊತೆ ಆರೋಪಿ ಸಂಭಾಷಣೆ ನಡೆಸಿರುವ ಆಡಿಯೋ ವೈರಲ್ ಆಗಿತ್ತು. ಈಗ ಮೊದಲ ಪೊಕ್ಸೋ ಪ್ರಕರಣಕ್ಕೆ ಸಂಬಂಧಿಸಿದ ಸಂತ್ರಸ್ತ ಬಾಲಕಿಯೊಂದಿಗೆ ಆರೋಪಿ ಬಸವರಾಜನ್ ಅವರ ಪತ್ನಿ ಸೌಭಾಗ್ಯ ಆತ್ಮೀಯವಾಗಿ ಮಾತನಾಡಿರುವ ಆಡಿಯೋ ವೈರಲ್ ಆಗಿದೆ.
undefined
ಮೊದಲನೇ ಪೋಕ್ಸೋ ಪ್ರಕರಣದಡಿ ಈಗಾಗಲೇ ಮುರುಘಾ ಶ್ರೀ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಆದರೆ, ಪೋಕ್ಸೋ ಪ್ರಕರಣ ಸಂಬಂಧಿಸಿದಂತೆ ಮತ್ತೊಂದು ಆಡಿಯೋ ಬಾಂಬ್ ಹೊರಬಿದ್ದಿರುವುದು, ಕೇಸ್‌ನ ಕುರಿತು ಭಾರಿ ಅನುಮಾನ ಮೂಡಿಸಿದೆ. ಎರಡನೇ ಪೋಕ್ಸೋ ಕೇಸ್‌ನಲ್ಲಿ ಪಿತೂರಿ ಮಾಡಲು ಮುಂದಾಗಿ ಜೈಲು ಪಾಲಾಗಿರುವ ಆರೋಪಿ ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ ಬಸವರಾಜನ್ ಪತ್ನಿ ಸೌಭಾಗ್ಯ ಅವರು ಪೋಕ್ಸೋ ಪ್ರಕರಣದ ಸಂತ್ರಸ್ತ ಬಾಲಕಿಯೊಂದಿಗೆ ಸಲಿಗೆಯಿಂದ ಮಾತನಾಡಿರುವುದು ಕುತೂಹಲ ಮೂಡಿಸಿದೆ. ಮುರುಘಾ ಶ್ರೀ ವಿರುದ್ದದ ಕೇಸ್ ಗೆ ಬಸವರಾಜನ್ ಅವರೇ ಕಾರಣವಾ? ಸೌಭಾಗ್ಯ ಬಸವರಾಜನ್ ಸಂತ್ರಸ್ತ ಬಾಲಕಿಯೊಂದಿಗೆ ಯಾಗೆ ಮಾತನಾಡಿದ್ದಾರೆ? ಹೀಗೆ ಇನ್ನಿತ್ತರ ಅಂಶಗಳು ಜನರಲ್ಲಿ ಅನುಮಾನ ಮೂಡಿಸಿದೆ. ಸಂತ್ರಸ್ತ ಬಾಲಕಿಯ ಜೊತೆಗೆ ಸೌಭಾಗ್ಯ ಬಸವರಾಜನ್ ಮಾತನಾಡಿರುವ ಆಡಿಯೂ ವೈರಲ್ ಆಗಿದ್ದು, ಇದನ್ನು ಪೊಲೀಸರು ಪರಿಗಣಿಸ್ತಾರಾ? ಎಂಬುದು ಯಕ್ಷ ಪ್ರಶ್ನೆಯಾಗಿದೆ. ಇನ್ನು ಮಠದಿಂದ ಈ ಕುರಿತು ದೂರು ಕೊಡ್ತಾರ ಎಂಬುದನ್ನು ಕಾದು ನೋಡಬೇಕಿದೆ.
Chitradurga: ಎಡಿಜಿಪಿ ಅಲೋಕ್ ಕುಮಾರ್‌ಗೆ ಪತ್ರ ಬರೆದ ಸಾಮಾಜಿಕ ಕಾರ್ಯಕರ್ತ ಹಾಗೂ ಮುರುಘಾ ಶ್ರೀ ಆಪ್ತ ಜಿತೇಂದ್ರ
ಆಡಿಯೋ ಸಂಭಾಷಣೆಯಲ್ಲಿ ಏನಿದೆ?
Chitradurga: ವೀರಶೈವ ಮಹಾಸಭಾ ಅಧಿವೇಶನದಲ್ಲಿ ಮುರುಘಾ ಶ್ರೀ ಪೀಠ ತ್ಯಾಗ ವಿಚಾರ ಚರ್ಚೆ: ಅಣಬೇರು ರಾಜಣ್ಣ
ಪಿತೂರಿ ಮಾಡಿದ್ಮೂದ ಬಸವರಾಜೇಂದ್ರ ಆಡಿಯೋ: ಈ ಹಿಂದೆ ದೊರೆತಿದ್ದ ಆಡಿಯೋದಲ್ಲಿ ಮಠದ ಶಿಕ್ಷಕ ಬಸವರಾಜೇಂದ್ರ ಸಂತ್ರಸ್ತ ಬಾಲಕಿಗೆ ಆಮೀಷವೊಡ್ಡಿ ನೀನು ಮುರುಘಾ ಶ್ರೀ ವಿರುದ್ದ ಪ್ರಕರಣ ದಾಖಲಿಸಬೇಕು. ನಿಮಗೆ ನಾವು ಸಹಾಯ ಮಾಡ್ತೀವಿ ಎಂದೆಲ್ಲಾ ಮಾತನಾಡಿದ್ದರು. ಈ ಆಡಿಯೋ ಆಧಾರವಾಗಿ ಇಟ್ಟುಕೊಂಡು ಮುರುಘಾ ಶ್ರೀ ವಿರುದ್ದ ಪಿತೂರಿ ಮಾಡಲಾಗಿದೆ ಎಂದು ಮಠದ ಉಸ್ತುವಾರಿ ಶ್ರೀಗಳಾದ ಬಸವಪ್ರಭು ಶ್ರೀಗಳು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಆಧಾರದ ಮೇಲೆ ಆಡಿಯೋದಲ್ಲಿ ಮಾತನಾಡಿದ್ದ ಎ1 ಆರೋಪಿ ಬಸವರಾಜೇಂದ್ರ ಅವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಮತ್ತಷ್ಟು ಸ್ಪೋಟಕ ಮಾಹಿತಿ ಹೊರ ಬಂದಿತ್ತು. ಸಂತ್ರಸ್ತ ಬಾಲಕಿಗೆ ಅಮೀಷವೊಡ್ಡಲು ಪ್ರಚೋದನೆ ಮಾಡಿದ್ದ ಮಠದ ಮಾಜಿ ಆಡಳಿತಾಧಿಕಾರಿ ಆಗಿದ್ದ ಮಾಜಿ ಶಾಸಕ ಎಸ್.ಕೆ. ಬಸವರಾಜನ್ ಕುಮ್ಮಕ್ಕು ನೀಡಿದ್ದರು ಎಂದು ಮಾಹಿತಿ ಸಿಕ್ಕ ಕೂಡಲೇ ಪೊಲೀಸರು ಅವರನ್ನು ಬಂಧಿಸಿ ವಿಚಾರಣೆ ನಡೆಸಿದರು. ಬಳಿಕ ನ್ಯಾಯಾಲಯ ಮುಂದೆ ಹಾಜರು ಪಡಿಸಿ ಇಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದಾದ ಬೆನ್ನಲ್ಲೇ ಆರೋಪಿ ಬಸವರಾಜನ್ ಪತ್ನಿ ಸೌಭಾಗ್ಯ ಬಸವರಾಜನ್ ತಲೆ ಮರೆಸಿಕೊಂಡಿದ್ದು ಪೊಲೀಸರು ಹುಡುಕಾಟದಲ್ಲಿದ್ದಾರೆ.