ನಂಜನಗೂಡು: ತರಕಾರಿ ತುಂಬಿದ ಲಾರಿ ಪಲ್ಟಿ; ಮುಗಿಬಿದ್ದ ಸ್ಥಳೀಯರು!

By Ravi JanekalFirst Published Jul 5, 2024, 9:28 PM IST
Highlights

ರಸ್ತೆ ಡಿವೈಡರ್‌ಗೆ ಡಿಕ್ಕಿಯಾಗಿ ತರಕಾರಿ ತುಂಬಿದ್ದ ಲಾರಿ ಪಲ್ಟಿಯಾದ ಘಟನೆ ನಂಜನಗೂಡಿ ಗೋಳೂರು ಗ್ರಾಮದ ಬಳಿ ಘಟನೆ ನಡೆದಿದ್ದು, ಸ್ವಲ್ಪದರಲ್ಲೇ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೈಸೂರು (ಜು.5): ರಸ್ತೆ ಡಿವೈಡರ್‌ಗೆ ಡಿಕ್ಕಿಯಾಗಿ ತರಕಾರಿ ತುಂಬಿದ್ದ ಲಾರಿ ಪಲ್ಟಿಯಾದ ಘಟನೆ ನಂಜನಗೂಡಿ ಗೋಳೂರು ಗ್ರಾಮದ ಬಳಿ ಘಟನೆ ನಡೆದಿದ್ದು, ಸ್ವಲ್ಪದರಲ್ಲೇ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೈಸೂರಿನಿಂದ ಚಾಮರಾಜನಗರ ಕಡೆಗೆ ತರಕಾರಿ ತುಂಬಿಕೊಂಡು ಸಾಗುತ್ತಿದ್ದ ಲಾರಿ. ಗೋಳೂರು ಗ್ರಾಮ ಸಮೀಪಿಸುತ್ತಿದ್ದಂತೆ ತಿರುವು ಪಡೆದುಕೊಳ್ಳುವಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್‌ಗೆ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಸಂಪೂರ್ಣ ಜಖಂಗೊಂಡಿರುವ ಲಾರಿ ಪಲ್ಟಿಯೊಡೆದಿದೆ. ಪಲ್ಟಿ ಹೊಡೆಯುತ್ತಿದ್ದಂತೆ ಲೋಡ್ ಮಾಡಲಾಗಿದ್ದ ಅಷ್ಟೂ ತರಕಾರಿಗಳು ರಸ್ತೆಗೆ ಬಿದ್ದಿವೆ. 

ಮನೆ ಮೇಲೆ ಗುಡ್ಡದ ಮಣ್ಣು ಕುಸಿದು ಕೂಲಿ ಕಾರ್ಮಿಕ ಮಹಿಳೆ ದುರ್ಮರಣ!

ಲಕ್ಷಾಂತರ ರೂಪಾಯಿ ಮೌಲ್ಯದ ತರಕಾರಿ ಮಣ್ಣಪಾಲು ಆಗಿದೆ. ಈ ವೇಳೆ ಲಾರಿ ಮುಗುಚಿಬಿಳುತ್ತಿದ್ದಂತೆ ಸ್ಥಳೀಯರು ವಾಹನ ಸವಾರರು ತರಕಾರಿಗೆ ಮುಗಿಬಿದ್ದ ಘಟನೆ ನಡೆಯಿತು. ಸುತ್ತಮುತ್ತಲಿದ್ದ ಜನರು ಓಡಿಬಂದು ರಸ್ತೆಗೆ ಬಿದ್ದಿದ್ದ ತರಕಾರಿ ಚೀಲದಲ್ಲಿ ತುಂಬಿಕೊಂಡ ಹೊತ್ತೊಯ್ದ ಸ್ಥಳೀಯರು. 

ಸ್ಥಳಕ್ಕೆ ನಂಜನಗೂಡು ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

click me!