
ಹುಬ್ಬಳ್ಳಿ (ಜು.5): ಅಗ್ರೋ ಅಂಗಡಿ ಮಾಲೀಕನ ಮಾತನ್ನ ನಂಬಿ ನಕಲಿ ಕ್ರಿಮಿನಾಶಕ ಸಿಂಪಡಿಸಿ ರೈತನೋರ್ವ ಬೆಳೆ ಕಳೆದುಕೊಂಡ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ತಂಬೂರು ಗ್ರಾಮದಲ್ಲಿ ನಡೆದಿದೆ.
ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದಿದ್ದ ರೈತ. ಕಳೆದ ನಾಲ್ಕೈದು ದಿನಗಳ ಹಿಂದೆ ಗೋವಿನ ಜೋಳ ಬೆಳೆಯಲ್ಲಿ ಕಳೆರೋಗ ಕಾಣಿಸಿಕೊಂಡಿತ್ತು. ಕಳೆರೋಗವನ್ನ ಹೋಗಲಾಡಿಸಲು ಕಲಘಟಗಿ ಶ್ರೀ ವರಮಹಾಲಕ್ಷ್ಮಿ ಆಗ್ರೋ ಮಾಲೀಕನ ಸಲಹೆ ಕೇಳಿದ ರೈತರು. ಈ ವೇಳೆ ಸ್ಟ್ರೆಪ್ಟೊಪ್ಲಸ್ ಎಂಬ ಕ್ರಿಮಿನಾಶಕ ಸಿಂಪಡಿಸಲು ಸಲಹೆ ನೀಡಿದ್ದ ಮಾಲೀಕ.
ಹೆರಿಗೆ ವೇಳೆ ಶಿಶುವಿನ ಗುದದ್ವಾರ ಕತ್ತರಿಸಿದ ವೈದ್ಯ! ಎರಡು ದಿನ ಜೀವನ್ಮರಣ ಹೋರಾಟ ನಡೆಸಿ ಮಗು ಸಾವು!
ಮಾಲೀಕನ ಮಾತು ನಂಬಿದ ರೈತ ಕೈಗೆ ಬಂದಿದ್ದ ಬೆಳೆಗೆ ಅಗ್ರೋ ಮಾಲೀಕನ ಸಲಹೆಯಂತೆ ಸ್ಟ್ರೆಪ್ಟೊಪ್ಲಸ್ ಎಂಬ ಕ್ರಿಮಿನಾಶಕ ಖರೀದಿಸಿ ಬೆಳೆಗೆ ಸಿಂಪಡಿಸಿದ್ದಾರೆ. ಕ್ರಿಮಿನಾಶಕ ಸಿಂಪಡಿಸಿದ ಮಾರನೆಯ ದಿನವೇ ಒಣಗಿ ನಿಂತ ಗೋವಿನ ಜೋಳ. ಕಳೆರೋಗ ಹೋಗುವ ಬದಲು ಮಳೆಗಾಲದಲ್ಲೇ ಬೆಳೆಯೇ ಸಂಪೂರ್ಣವಾಗಿ ಒಣಗಿ ನಿಂತಿದೆ. ರೈತ ಕಂಗಾಲಾಗಿದ್ದಾನೆ. ಅಗ್ರೋ ಮಾಲೀಕನ ಮಾತು ನಂಬಿ ಮೋಸ ಹೋದೆ ಎಂದು ಕಣ್ಣೀರಿಟ್ಟಿರುವ ರೈತ. ಬೆಳೆ ಒಣಗಿದ ಕಾರಣ ದಿಕ್ಕು ತೋಚದಂತಾಗಿರುವ ಅನ್ನದಾತ. ಇದೇ ರೀತಿ ಆಗ್ರೋ ಅಂಗಡಿ ಮಾಲೀಕನಿಂದ ಸ್ಟ್ರೆಪ್ಟೊಪ್ಲಸ್ ಎಂಬ ಕ್ರಿಮಿನಾಶಕವನ್ನ ಹಲವು ರೈತರಿಗೆ ವಿತರಣೆ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ