ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ಗಂಡ-ಹೆಂಡತಿ ಹಾಗೂ ಮಗಳು ಮೂವರ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ಕರೀಬೀರನಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹೊಸಕೋಟೆ (ಮಾ.4) : ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ಗಂಡ-ಹೆಂಡತಿ ಹಾಗೂ ಮಗಳು ಮೂವರ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ಕರೀಬೀರನಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕರಿಬೀರನ ಹೊಸಹಳ್ಳಿಯ ಮರಿಯಪ್ಪ(65), ಮುನಿಯಮ್ಮ(60), ಭಾರತಿ(40) ಮೃತ ದುರ್ದೈವಿಗಳು. ಮಧ್ಯಾಹ್ನ ತೋಟದ ಬಳಿ ಊಟ ಮಾಡಿ ಕೈ ತೊಳೆಯಲು ಹೋದ ಮಗಳು ಭಾರತಿ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದಿದ್ದಾಳೆ. ಬಳಿಕ ಆಕೆಯನ್ನ ರಕ್ಷಣೆ ಮಾಡಲು ಹೋದ ಮರಿಯಪ್ಪ ಹಾಗೂ ಮುನಿಯಮ್ಮ ಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
undefined
ಘಟನಾ ಸ್ಥಳಕ್ಕೆ ಹೊಸಕೋಟೆ ಪೊಲೀಸರು ಭೇಟಿ ನೀಡಿದ್ದು ಮೃತ ದೇಹಗಳನ್ನ ಹೊರತೆಗೆದು ಹೊಸಕೋಟೆ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕರಿಬೀರನಹೊಸಹಳ್ಳಿ ಗ್ರಾಮಸ್ಥರು ಸ್ಥಳಕ್ಕಾಗಮಿಸಿ ಮೃತರಿಗಾಗಿ ಕಂಬನಿ ಮಿಡಿಯುತ್ತಿದ್ದ ದೃಶ್ಯಗಳು ಕಂಡುಬಂದವು.
ಮುಂದುವರಿದ ಬಲಿ; ಕಿಲ್ಲರ್ ಬಿಎಂಟಿಸಿ ಬಸ್‌ಗೆ ಮತ್ತೊಬ್ಬ ಬೈಕ್ ಸವಾರ ಸಾವು!