ಹಳ್ಳಿಗಳೇ ಇವ್ರ ಟಾರ್ಗೆಟ್‌: ಮೂವರು ಖತರ್ನಾಕ್‌ ಹೈವೇ ಕಳ್ಳರನ್ನ ಬಂಧಿಸಿದ ವಿಜಯಪುರ ಕೂಡಗಿ ಪೊಲೀಸರು!

By Govindaraj SFirst Published Mar 3, 2024, 8:25 PM IST
Highlights

ರಾಷ್ಟ್ರೀಯ ಹೆದ್ದಾರಿಗಳ ಬಳಿಯ ಗ್ರಾಮಗಳನ್ನೆ ಟಾರ್ಗೆಟ್‌ ಮಾಡಿ ಕಳ್ಳತನ ಮಾಡ್ತಿದ್ದ ಖತರ್ನಾಕ್‌ ಗ್ಯಾಂಗ್‌ ನ್ನ ವಿಜಯಪುರ ಜಿಲ್ಲೆಯ ಕೂಡಗಿ ಪೊಲೀಸರು ಬಂಧಿಸಿದ್ದಾರೆ. ಕಳೆದ ಒಂದು ವಾರದ ಹಿಂದೆ ವಿಜಯಪುರ ಜಿಲ್ಲೆಯ ಗೋಳಸಂಗಿ ಗ್ರಾಮದ ಬನಶಂಕರಿ ದೇಗುಲದಲ್ಲಿ ಕಳ್ಳರು ದೇವರ ಮೂರ್ತಿ ಮೇಲಿದ್ದ ಚಿನ್ನಾಭರಣ ಕದ್ದು ಪರಾರಿಯಾಗಿದ್ದರು. 
 

ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಮಾ.03): ರಾಷ್ಟ್ರೀಯ ಹೆದ್ದಾರಿಗಳ ಬಳಿಯ ಗ್ರಾಮಗಳನ್ನೆ ಟಾರ್ಗೆಟ್‌ ಮಾಡಿ ಕಳ್ಳತನ ಮಾಡ್ತಿದ್ದ ಖತರ್ನಾಕ್‌ ಗ್ಯಾಂಗ್‌ ನ್ನ ವಿಜಯಪುರ ಜಿಲ್ಲೆಯ ಕೂಡಗಿ ಪೊಲೀಸರು ಬಂಧಿಸಿದ್ದಾರೆ. ಕಳೆದ ಒಂದು ವಾರದ ಹಿಂದೆ ವಿಜಯಪುರ ಜಿಲ್ಲೆಯ ಗೋಳಸಂಗಿ ಗ್ರಾಮದ ಬನಶಂಕರಿ ದೇಗುಲದಲ್ಲಿ ಕಳ್ಳರು ದೇವರ ಮೂರ್ತಿ ಮೇಲಿದ್ದ ಚಿನ್ನಾಭರಣ ಕದ್ದು ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಕೂಡಗಿ ಎನ್‌ಟಿಪಿಸಿ ಪೊಲೀಸರು ರಾಜಸ್ತಾನ ಮೂಲದ ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ.

ಹೈವೇ ಪಕ್ಕದ ಹಳ್ಳಿಗಳೇ ಇವ್ರ ಟಾರ್ಗೆಟ್: ರಾಜಸ್ತಾನದ ಮೂಲಕ ಐದಾರು ಜನರ ಗ್ಯಾಂಗ್ ಹಾಕಿದ್ದ ಪ್ಲಾನ್ ಬಗ್ಗೆ ಕೇಳಿದ್ರೆ ನೀವು ಹಾಭರಿ ಬೀಳ್ತೀರಿ. ಈ ಖತರ್ನಾಕ್ ಗ್ಯಾಂಗ್ ಹೈವೇಗಳ ಪಕ್ಕದಲ್ಲಿನ ಹಳ್ಳಿಗಳ ದೇಗುಲಗಳನ್ನ ಟಾರ್ಗೆಟ್ ಮಾಡಿ ಕಳ್ಳತನ ಮಾಡ್ತಿದ್ರು‌. ರಾಷ್ಟ್ರೀಯ ಹೆದ್ದಾರಿಗಳ ಮೂಲಕ ಕಾರ್ ಸಮೇತ ಬರ್ತಿದ್ದ ಈ ಗ್ಯಾಂಗ್ ಹೈವೇ ಪಕ್ಕದ ಹಳ್ಳಿಹಳಿಗೆ ನುಗ್ತಿತ್ತು. ಅಲ್ಲಿನ ದೇಗುಲಗಳಿಗೆ ಭೇಟಿ ನೀಡುವ ನೆಪದಲ್ಲಿ ಹೋಗಿ ದೇವರ ಚಿನ್ನಾಭರಣ ಕದ್ದು ಪರಾರಿಯಾಗ್ತಿತ್ತು.

ರಾಜ್ಯ ಸರ್ಕಾರಿ ನೌಕರರಿಗೆ ನೀಡಿದ್ದ ಓಪಿಎಸ್‌ ಜಾರಿಗೆ ಬದ್ಧ: ಸಚಿವ ಸಂತೋಷ್‌ ಲಾಡ್‌

ಸೊಲ್ಲಾಪುರ-ಬೆಂಗಳೂರು ನಾಶನಲ್ ಹೈವೇಯಲ್ಲು ಕರಾಮತ್ತು: ಕಳೆದ 15 ದಿನಗಳ ಹಿಂದೆ ಮಹಾರಾಷ್ಟ್ರದ ಸೊಲ್ಲಾಪುರದ ಮೂಲಕ ಕರ್ನಾಟಕಕ್ಕೆ ಏಂಟ್ರಿ ಕೊಟ್ಟಿದ್ದ ಖತರ್ನಾಕ್ ಗ್ಯಾಂಗ್ ಸೊಲ್ಲಾಪುರ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೆ ಇರುವ ಗೊಳಸಂಗಿ ಗ್ರಾಮ ತಲುಪಿತ್ತು‌. ಅಲ್ಲಿನ ಬನಶಂಕರಿ ದೇವಿಯ ದರ್ಶನಕ್ಕೆ ಹೋದಂತೆ ನಾಟಕವಾಡಿದ್ದ ಈ ಗ್ಯಾಂಗ್ ದೇಗುಲದ ಪಕ್ಕ ಕಾರ್ ನಿಲ್ಲಿಸಿ ದೇವಿಯ ಮೂರ್ತಿ ಮೇಲಿದ್ದ‌ 30 ಗ್ರಾಮ ಚಿನ್ನಭರಣವನ್ನ ಕಳ್ಳತನ ಮಾಡಿ ಪರಾರಿಯಾಗಿತ್ತು..

ಖತರ್ನಾಕ್‌ ಖದೀಮರ ಬೆನ್ನು ಬಿದ್ದ ಕೂಡಗಿ ಪೊಲೀಸರು: ಗೊಳಸಂಗಿ ಗ್ರಾಮದ ಬನಶಂಕರಿ ದೇವಿ ದೇಗುಲದಲ್ಲಿ ಕಳ್ಳತನ ನಡೆದಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.‌ ದೇಗುಲದ ಗರ್ಭಗುಡಿಗೆ ನುಗ್ಗಿ ನಾಲ್ವರು ಕಳ್ಳರು ಕಳ್ತನ ಮಾಡ್ತಿದ್ದ ದೃಶ್ಯಗಳು ಸೆರೆಯಾಗಿದ್ವು. ಇದನ್ನ ಆಧರಿಸಿ ತನಿಖೆಗೆ ಇಳಿದ ಕೂಡಗಿ ಪಿಎಸ್‌ಐ ಯತೀಶ್ ಖದೀಮರ ಬೆನ್ನು ಬಿದ್ದರು..

ಸತತ 14 ದಿನಗಳ ಕಾರ್ಯಾಚರಣೆ: ಖದೀಮರು ಎಲ್ಲಿದ್ದಾರೆ ಎನ್ನುವ ನಿಖರ ಮಾಹಿತಿ ಪಡೆದ ಪಿಇಎಸ್ ಯತೀಶ್ ರಾಜಸ್ತಾನದಲ್ಲಿ ಸುಳಿವು ಪತ್ತೆ ಹಚ್ಚಿದ  ಮನೋಹರ್‌ ಸಿಂಗ್‌, ಸವಾಯ್‌ ಸಿಂಗ್‌, ಮಹೇಂದ್ರಕುಮಾರ್‌ ಎಂಬಾತರನ್ನ ಬಂಧಿಸಿ ಕರೆ ತಂದಿದ್ದಾರೆ.. ಬಂಧಿತರಿಂದ 35 ಗ್ರಾಂ ಚಿನ್ನಾಭರಣ, ಕಾರ್ ವಶಕ್ಕೆ ಪಡೆದಿದ್ದಾರೆ.‌

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಅಗತ್ಯ ಬಿದ್ದರೆ ಮಾತ್ರ ಎನ್‌ಐಎ ತನಿಖೆಗೆ: ಸಿಎಂ ಸಿದ್ದರಾಮಯ್ಯ

ಬಳ್ಳಾರಿ, ಸಿಂಧನೂರಿನ ಹೈವೇ ಪಕ್ಕದ ದೇಗುಗಳಲ್ಲು ಕಳ್ಳತನ: ಬಂಧಿತರನ್ನ ವಿಚಾರಿಸಿದಾಗ ಇವರು ರಾಷ್ಟ್ರೀಯ ಹೆದ್ದಾರಿಗಳ ಬಳಿ ಇರುವ ಗ್ರಾಮಗಳಲ್ಲಿ ಕಳ್ತನ ಮಾಡ್ತಿದ್ರ ಎನ್ನುವ ಆತಂಕಕಾರಿ ಮಾಹಿತಿ ಲಭ್ಯವಾಗಿದೆ. ಅಲ್ಲದೆ ಈಗಾಗಳೇ ಬಳ್ಳಾರಿ, ಸಿಂಧನೂರು ಬಳಿಯ ರಾಷ್ಟ್ರೀಯ ಹೆದ್ದಾರಿಗಳಲ್ಲು ಕಳ್ಳತನ ಮಾಡಿರೋದು ಬಯಲಾಗಿದೆ. ಎರಡು ವಾರಗಳ ಸತತ ಪ್ರಯತ್ನ ಮಾಡಿದ ಪೊಲೀಸರು ಖದೀಮರನ್ನ ಬಂಧಿಸಿದ್ದಾರೆ.

click me!