ಪ್ರಿಯಕರನ ಜೊತೆ ಕೃಷಿ ಹೊಂಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ!

Published : Jul 15, 2024, 10:22 AM IST
ಪ್ರಿಯಕರನ ಜೊತೆ ಕೃಷಿ ಹೊಂಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ!

ಸಾರಾಂಶ

ವಿವಾಹಿತೆ ಯುವತಿ ತನ್ನ ಮಾಜಿ ಪ್ರಿಯಕರನನ್ನು ತಬ್ಬಿಕೊಂಡು ಕೃಷಿ ಹೊಂಡದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಎಂ.ಮುದ್ದಲಹಳ್ಳಿಯಲ್ಲಿ ಶನಿವಾರ ನಡೆದಿದೆ.

ಚಿಂತಾಮಣಿ (ಜು.15) : ವಿವಾಹಿತೆ ಯುವತಿ ತನ್ನ ಮಾಜಿ ಪ್ರಿಯಕರನನ್ನು ತಬ್ಬಿಕೊಂಡು ಕೃಷಿ ಹೊಂಡದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಎಂ.ಮುದ್ದಲಹಳ್ಳಿಯಲ್ಲಿ ಶನಿವಾರ ನಡೆದಿದೆ.

ತಾಲೂಕಿನ ಕಾಚಹಳ್ಳಿಯ(Kachanahalli) ವಿವಾಹಿತೆ ಅನುಷಾ (19) ಹಾಗೂ ಎಂ.ಮುದ್ದಲಹಳ್ಳಿ ಗ್ರಾಮದ ವೇಣು (21) ಆತ್ಮಹತ್ಯೆಗೆ ಶರಣಾಗಿದ್ದು ಈ ಇಬ್ಬರೂ ಕಳೆದ 2 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರೆನ್ನಲಾಗಿದೆ. ಆದರೆ ಇವರಿಬ್ಬರು ಬೇರೆ ಬೇರೆ ಜಾತಿಗೆ ಸೇರಿದ ಕಾರಣ ಮದುವೆಗೆ ಮನೆಯರು ಒಪ್ಪಿರಲಿಲ್ಲ. 

ಚಿಕ್ಕಮಗಳೂರು: ಅನೈತಿಕ ಸಂಬಂಧ, ಗಂಡನಿಗೆ ವಿಷವಿಕ್ಕಿ, ಉಸಿರುಗಟ್ಟಿಸಿ ಕೊಲೆ ಮಾಡಿದ ಹೆಂಡ್ತಿ..!

ಬಳಿಕ ಅನುಷಾಳನ್ನು ಆಕೆಯ ಪೋಷಕರು ತಾಲೂಕಿನ ಕಾಚಹಳ್ಳಿಯ ಚೌಡರೆಡ್ಡಿ ಎಂಬ ಯುವಕನೊಂದಿಗೆ ಕಳೆದ ಮೇ ೨೬ ರಂದು ಮದುವೆ ಮಾಡಿದ್ದರು. ನೂತನ ದಂಪತಿ ದಾಬಸ್‌ಪೇಟೆಯಲ್ಲಿ ಸಂಸಾರ ನಡೆಸುತ್ತಿದ್ದರು. ಆಷಾಡ ಮಾಸದ ಸಲುವಾಗಿ ಅನುಷಾ ತವರೂರಿಗೆ ಬಂದಿದ್ದಳು.

ಆದರೆ ಮದುವೆಯಾದ ನಂತರವೂ ಪ್ರೇಮಿಗಳಿಬ್ಬರೂ ಮೊಬೈಲ್ ಮೂಲಕ ಪರಸ್ಪರ ಸಂಪರ್ಕದಲ್ಲಿದ್ದರು. ಮುಂದೆ ತಾವಿಬ್ಬರೂ ಒಂದಾಗಿ ಬದುಕಲು ಸಾಧ್ಯವಿಲ್ಲವೆಂದು ಆತ್ಮಹತ್ಯೆ(suicide)ಗೆ ನಿರ್ಧರಿಸಿ ಕೃಷಿಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರೀತಿ ನೆಪದಲ್ಲಿ ದೈಹಿಕ ಸಂಪರ್ಕ ಬೆಳೆಸಿ ಪ್ರಿಯಕರನಿಂದ ವಂಚನೆ

ಸಾರ್ವಜನಿಕರು ಕೃಷಿ ಹೊಂಡದ ಮಾಲೀಕ ಚಲಪತಿ ಮೊಬೈಲ್, ಚಪ್ಪಲಿ ಮತ್ತು ಪರ್ಸ್‌ ಕಂಡು ಕೆಂಚಾರ್ಲಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕೃಷಿ ಹೊಂಡದಿಂದ ಇಬ್ಬರ ಶವಗಳನ್ನು ಹೊರತೆಗೆದಿದ್ದಾರೆ.

ಪೊಲೀಸರು ಅನುಷಾ ಗಂಡ ಚೌಡರೆಡ್ಡಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ರಾತ್ರಿ ಎರಡು ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಕೆಂಚಾರ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ