ಬೈಕ್ ಕೊಡಿಸದ್ದಕ್ಕೆ ಮಗ ಆತ್ಮಹತ್ಯೆ, ಮಗನ ಸಾವಿಗೆ ನೊಂದು ರೈಲಿಗೆ ತಲೆ‌ ಕೊಟ್ಟ ತಾಯಿ: ಹಾವೇರಿಯಲ್ಲಿ ಹೃದಯ ವಿದ್ರಾವಕ ಘಟನೆ

By Govindaraj S  |  First Published Jul 13, 2024, 7:49 PM IST

ಬೈಕ್ ಕೊಡಿಸದ್ದಕ್ಕೆ ಮಗ ಆತ್ಮಹತ್ಯೆ, ಇತ್ತ ಮಗನ ಸಾವಿಗೆ ನೊಂದು ರೈಲಿಗೆ ತಲೆ‌ ಕೊಟ್ಟ ತಾಯಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ರಾಣೆಬೆನ್ನೂರ ತಾಲೂಕಿನ ಕರೂರು ಗ್ರಾಮದಲ್ಲಿ ನಡೆದಿದೆ. 


ಹಾವೇರಿ (ಜು.13): ಬೈಕ್ ಕೊಡಿಸದ್ದಕ್ಕೆ ಮಗ ಆತ್ಮಹತ್ಯೆ, ಇತ್ತ ಮಗನ ಸಾವಿಗೆ ನೊಂದು ರೈಲಿಗೆ ತಲೆ‌ ಕೊಟ್ಟ ತಾಯಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ರಾಣೆಬೆನ್ನೂರ ತಾಲೂಕಿನ ಕರೂರು ಗ್ರಾಮದಲ್ಲಿ ನಡೆದಿದೆ. ಕರೂರು ಗ್ರಾಮದ ಧನರಾಜ್ ಸುರೇಶ್ ನಾಯಕ್( 18) ಸೂಸೈಡ್ ಮಾಡಿಕೊಂಡು ಯುವಕ. ಧನರಾಜ ಸುರೇಶ ನಾಯಕ ಬೈಕ್ ಕೊಡಿಸಿ ಎಂದು ಹಠ ಹಿಡಿದಿದ್ದ. ಅಲ್ಲದೇ ತಂದೆ-ತಾಯಿಯೊಂದಿಗೆ ಜಗಳವಾಡಿದ್ದ ಕೂಡಾ. ಅನಂತರ ಧನರಾಜ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.  

ಇದನ್ನು ಕಂಡ ಧನರಾಜ್ ತಾಯಿ ಭಾಗ್ಯಮ್ಮ ( 43) ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ದಾವಣಗೆರೆ ಜಿಲ್ಲೆ ಹರಿಹರದಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದ ಧನರಾಜ ತನಗೆ ಬೈಕ್ ತೆಗೆದುಕೊಳ್ಳಲು ಹಣ ಬೇಕೆಂದು ತಂದೆ- ತಾಯಿ ಬಳಿ ಬೆಳಗ್ಗೆ ಜಗಳ ತೆಗೆದಿದ್ದ. ಕೂಲಿ ಮಾಡಿಕೊಂಡಿರುವ ತಂದೆ ಸುರೇಶ್, ಧನರಾಜ್‌ಗೆ ಬೈಕ್ ಕೊಡಿಸೋ‌ ಭರವಸೆ ನೀಡಿದ್ದರು. ಆಯ್ತು ಹೇಗಾದರೂ ಮಾಡಿ ಕೊಡಿಸುತ್ತೇನೆ ಎಂದು ತಂದೆ ಸುರೇಶ್ ನಾಯಕ್ ಹೇಳಿ ಕೆಲಸಕ್ಕೆ ಹೋಗಿದ್ದರು. ಈ ವೇಳೆ ಧನರಾಜ್ ಕೂರಿಸಿಕೊಂಡು ತಾಯಿ ಭಾಗ್ಯಮ್ಮ ಬುದ್ದಿಮಾತು ಹೇಳಿದ್ದರು. 

Tap to resize

Latest Videos

ಬಿಡಿಎ ಕೇಸ್ ಕ್ಲೋಸ್ ಮಾಡಲು ಕೆಎಎಸ್ ಆಫೀಸರ್‌ನಿಂದ 55 ಲಕ್ಷ ಲಂಚ ಪಡೆದ ಆರೋಪ: ಸಿಸಿಬಿ ಸಿಬ್ಬಂದಿ ಅಮಾನತು

ತಾಯಿ ಪಕ್ಕದ ಮನೆಗೆ ಹೋಗಿದ್ದ ವೇಳೆ ಮಧ್ಯಾಹ್ನ ಧನರಾಜ ಅಡುಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಗೆ ಬರುತ್ತಿದ್ದಂತೆ ಮಗನ ಸ್ಥಿತಿ ಕಂಡು ದಂಗಾಗಿದ್ದ ತಾಯಿ ಭಾಗ್ಯಮ್ಮ, ಬಳಿಕ ಕರೂರ ರೈಲು ನಿಲ್ದಾಣದ ಬಳಿ ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಮಾರಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎರಡು ವರ್ಷದ ಹಿಂದೆ ಧನರಾಜ್ ತಂದೆ ಸುರೇಶ ಅವರ 14 ವರ್ಷದ ಇನ್ನೋರ್ವ ಪುತ್ರಿ ಅನಾರೋಗ್ಯದಿಂದ ಮೃತಪಟ್ಟಿದ್ರು. ಇದೀಗ ಪತ್ನಿ, ಪುತ್ರನನ್ನು ಕಳೆದುಕೊಂಡು ದುಖಃದ ಮಡುವಿನಲ್ಲಿ ಸುರೇಶ್ ನಾಯಕ್ ಮುಳುಗಿದ್ದಾರೆ.

click me!