ಸಂಬಳ ಕೇಳಿದ್ದಕ್ಕೆ ಕಾರ್ಮಿಕನಿಗೆ ಮನಬಂದಂತೆ ಥಳಿಸಿ ವಿಕೃತಿ ಮೆರೆದ ಹೋಟೆಲ್ ಮಾಲೀಕ!

By Ravi Janekal  |  First Published Feb 4, 2024, 10:39 AM IST

ಸಂಬಳದ ಹಣ ಕೇಳಿದ್ದಕ್ಕೆ ಬಡಪಾಯಿ ಹೋಟೆಲ್ ಮಾಲೀಕನೋರ್ವ ಕಾರ್ಮಿಕನಿಗೆ ಅಮಾನುಷವಾಗಿ ಹಲ್ಲೆ ನಡೆಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಸೋಮಲಾಪುರ ಗ್ರಾಮದ ನಿರ್ಜನ ಪ್ರದೇಶದಲ್ಲಿ ನಡೆದಿದೆ.


ಚಿಕ್ಕಮಗಳೂರು (ಫೆ.4): ಸಂಬಳದ ಹಣ ಕೇಳಿದ್ದಕ್ಕೆ ಬಡಪಾಯಿ ಹೋಟೆಲ್ ಮಾಲೀಕನೋರ್ವ ಕಾರ್ಮಿಕನಿಗೆ ಅಮಾನುಷವಾಗಿ ಹಲ್ಲೆ ನಡೆಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಸೋಮಲಾಪುರ ಗ್ರಾಮದ ನಿರ್ಜನ ಪ್ರದೇಶದಲ್ಲಿ ನಡೆದಿದೆ.

ಸತೀಶ್ ಹಲ್ಲೆಗೊಳಗಾದ ಹೋಟೆಲ್ ಕಾರ್ಮಿಕ. ಮಂಜು ಎಂಬಾತ ಹಲ್ಲೆ ನಡೆಸಿರುವ ಆರೋಪಿ. ಕೊಪ್ಪ ಮೂಲದವನಾಗಿರುವ ಮಂಜು ನಡೆಸುತ್ತಿದ್ದ ಹೋಟೆಲ್‌ನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಸತೀಶ್. ತಿಂಗಳ ಕಾಲ ದುಡಿದರೂ ಸಂಬಳ ಕೊಡದೇ ಸತಾಯಿಸುತ್ತಿದ್ದ ಮಾಲೀಕ. ಹೀಗಾಗಿ ಸಂಬಳದ ವಿಚಾರವಾಗಿ ಮಾಲೀಕರೊಡನೆ ಗಲಾಟೆ ಮಾಡಿ ಕೆಲಸ ಬಿಟ್ಟುಹೋಗಿದ್ದ ಸತೀಶ್. ಆದರೆ ಬರಬೇಕಿದ್ದ ಸಂಬಳದ ಹಣದ ವಿಚಾರವಾಗಿ ಹೋಟೆಲ್‌ ಮಾಲೀಕ ಮಂಜುಗೆ ಫೋನ್ ಮಾಡಿ ಕೇಳುತ್ತಿದ್ದ ಕಾರ್ಮಿಕ. 

Tap to resize

Latest Videos

ಯಾದಗಿರಿ: ಬಡವರ ಅಕ್ಕಿ ಕಾಳಸಂತೆಯ ಪಾಲು; ಪಡಿತರ ಕಳ್ಳಸಾಗಣೆ ತಡೆಯುವಲ್ಲಿ ಪೊಲೀಸ್ ಇಲಾಖೆ ವಿಫಲ

ಹೋಟೆಲ್ ಬಿಟ್ಟು ಸಂಬಳ ಕೇಳುತ್ತಿದ್ದನೆಂದು ಮಂಜು ಸಹೋದರ ಹಾಗೂ ಆತನ ಸ್ನೇಹಿತರು ಸೇರಿಕೊಂಡು ಹಣ ಕೊಡುತ್ತೇವೆ ಕಾರ್ಮಿಕನನ್ನು ಕರೆಸಿಕೊಂಡಿದ್ದಾರೆ. ಸಂಬಳದ ಆಸೆಗೆ ಬಂದಿದ್ದ ಕಾರ್ಮಿಕನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕಾಡಿನಲ್ಲಿ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಮರಕ್ಕೆ ಕಟ್ಟಿಹಾಕಿ ಆರು ಜನರಿಂದ ಮನಸೋ ಇಚ್ಛೆ ಹಲ್ಲೆನಡೆಸಲಾಗಿದೆ. ಆರು ಜನರಿಂದ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಕಾರ್ಮಿಕ ಸತೀಶ್. ಹಲ್ಲೆ ಘಟನೆ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೇಲಿಯೇ ಎದ್ದು ಹೊಲ ಮೇಯ್ದ ಕತೆ; ಕಳ್ಳರೊಂದಿಗೆ ಶಾಮಿಲಾಗಿ ಪೊಲೀಸಪ್ಪ ಮಾಡಿದ್ದೇನು ನೋಡಿ!

click me!