ಭಜರಂಗದಳದ ಕಾರ್ಯಕರ್ತರ ಮೇಲೆ ಹಲ್ಲೆ, ಕೋಮು ಸಂಘರ್ಷದ ಶಂಕೆ

By Suvarna News  |  First Published Oct 19, 2021, 11:02 PM IST

* ಭಜರಂಗದಳದ ಕಾರ್ಯಕರ್ತರ ಮೇಲೆ ಹಲ್ಲೆ;
* ಕಾರು ಅಡ್ಡಗಟ್ಟಿ ಭಜರಂಗದಳದ ಕಾರ್ಯಕರ್ತರ ಮೇಲೆ ಯುವಕರ ಗುಂಪೊಂದು ದಾಳಿ
* ತುಮಕೂರಿನ ಗುಬ್ಬಿ ಗೇಟ್​ ಬಳಿ ನಡೆದ ಘಟನೆ


ತುಮಕೂರು, (ಅ.19): ಭಜರಂಗದಳದ ಕಾರ್ಯಕರ್ತರ ಮೇಲೆ ಯುವಕರ ಗುಂಪೊಂದು ದಾಳಿ ಮಾಡಿ ಹಲ್ಲೆ(Assault) ನಡೆಸಿರುವ ಘಟನೆ ತುಮಕೂರಿನ ಗುಬ್ಬಿ ಗೇಟ್​ ಬಳಿ ನಡೆದಿದೆ.

ಭಜರಂಗದಳದ (Bajrang Dal) ತುಮಕೂರು (Tumakuru) ಜಿಲ್ಲಾ ಸಂಚಾಲಕ ಮಂಜುಭಾರ್ಗವ ಹಾಗೂ ಇನ್ನೊಬ್ಬ ಕಾರ್ಯಕರ್ತ ಕಿರಣ್​ ಎಂಬವರ ಮೇಲೆ ಇಂದು (ಅ.19) ಹಲ್ಲೆ ನಡೆದಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.  ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಕೋಮು ಸಂಘರ್ಷದ ಶಂಕೆ ವ್ಯಕ್ತವಾಗಿದೆ.

Tap to resize

Latest Videos

ಗಂಡ-ಹೆಂಡಿರ ಜಗಳ ಮೊಬೈಲ್ ಸಿಗುವ ತನಕ.. ತುಟಿಯನ್ನೇ ಕತ್ತರಿಸಿದಳು!

ಇಬ್ಬರೂ ಕಾರಿನಲ್ಲಿ ಹೋಗುತ್ತಿದ್ದಾಗ ಅಡ್ಡಗಟ್ಟಿದ ದುಷ್ಕರ್ಮಿಗಳ ಗುಂಪು ರಾಡ್​ನಿಂದ ಹಲ್ಲೆ ನಡೆಸಿದೆ. ಹಲ್ಲೆ ಮಾಡಿದವರು ಅನ್ಯಕೋಮಿಗೆ ಸೇರಿದವರು ಎನ್ನಲಾಗಿದ್ದು, ಸ್ಥಳಕ್ಕೆ ತಿಲಕ್​ ಪಾರ್ಕ್​ ಪೊಲೀಸ್ ಠಾಣಾ ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

ಕರಾಟೆ ಮಾಸ್ಟರ್‌ಗೇ ಚೂರಿ ಇರಿತ
ಗಾಂಜಾ ವ್ಯಸನಿಗಳ ಕುರಿತಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದ ಕರಾಟೆ ಮಾಸ್ಟರೊಬ್ಬರಿಗೆ ಯುವಕನೊಬ್ಬ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಇಂದು (ಅ.19) ಮಂಗಳೂರಿನಲ್ಲಿ ನಡೆದಿದೆ.

ಕರಾಟೆ ಮಾಸ್ಟರ್ ಹರೀಶ್ ಗಾಣಿಗ (42) ಎಂಬವರಿಗೆ ಚೂರಿಯಿಂದ ಇರಿಯಲಾಗಿದೆ. ಹರೀಶ್ ಅವರ ಗ್ಯಾಸ್ ಆಯಕ್ಸೆಸರೀಸ್ ಅಂಗಡಿಗೆ ಬಂದು ವಿಶಾಲ್ ಎಂಬಾತ ಚಾಕುವಿನಿಂದ ಇರಿದಿದ್ದಾನೆ. ಎದೆ ಹಾಗೂ ಕೈ ಭಾಗಕ್ಕೆ ಇರಿಯಲಾಗಿದ್ದು, ಗಂಭೀರ ಗಾಯಗಳಾಗಿವೆ.

 ಹರೀಶ್​ ಗಾಣಿಗ ಅವರು ಗಾಂಜಾ ವ್ಯಸನಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆ ದ್ವೇಷದಿಂದಾಗಿ ಗಂಭೀರವಾಗಿ ಗಾಯಗೊಳಿಸಲಾಗಿದೆ ಎನ್ನಲಾಗಿದೆ. ಗಾಯಾಳು ಹರೀಶ್​ರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!