
ಬೆಂಗಳೂರು, (ಅ.19): ಭೂಗತ ಪಾತಕಿಗಳಾದ ಚೋಟಾ ರಾಜನ್, ರವಿ ಪೂಜಾರಿ (Ravi Poojari) ಸಹಚರನಾಗಿದ್ದ ಕುಖ್ಯಾತ ಗ್ಯಾಂಗ್ಸ್ಟರ್ ಸುರೇಶ್ ಪೂಜಾರಿಯನ್ನು ಬಂಧಿನವಾಗಿದೆ.
ಫಿಲಿಫೈನ್ಸ್‌ನಲ್ಲಿ (Philippines) ಇಂಟರ್ಪೋಲ್ ಪೊಲೀಸರು (Interpol Police) ಸುರೇಶ್ ಪೂಜಾರಿಯನ್ನು (Suresh Poojari) ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಮಂಗಳೂರು (Mangaluru) ಮೂಲದ ಡಾನ್ ಸುರೇಶ್ ಪೂಜಾರಿ, ಭೂಗತ ಪಾತಕಿ ಛೋಟಾ ರಾಜನ್, ರವಿ ಪೂಜಾರಿ ಸಹಚರನಾಗಿದ್ದ. ನಂತರ ತನ್ನದೇ ಗ್ಯಾಂಗ್ ಕಟ್ಟಿಕೊಂಡಿದ್ದ. ಬೆಂಗಳೂರಿನ ಕೆಲವು ಕೇಸ್ಗಳಲ್ಲೂ ಸುರೇಶ್ ಪೂಜಾರಿ ಪ್ರಮುಖ ಆರೋಪಿಯಾಗಿದ್ದಾನೆ.
ಭೂಗತ ಪಾತಕಿ ರವಿ ಪೂಜಾರಿ ಖಾಕಿ ಖೆಡ್ಡಾಕ್ಕೆ ಬಿದ್ದ ರೋಚಕ ಕಥೆ!
ಕಳೆದ 10 ವರ್ಷದಿಂದ ರವಿ ಪೂಜಾರಿ ಗ್ಯಾಂಗ್ನಿಂದ ಬೇರೆ ಆಗಿ, ಪ್ರತ್ಯೇಕ ಗ್ಯಾಂಗ್ ಮಾಡಿಕೊಂಡಿದ್ದ ಸುರೇಶ್ ಪೂಜಾರಿ, ಕಾಲ್ ಮಾಡಿ ಬೆದರಿಕೆ ಒಡ್ಡುತ್ತಿದ್ದ. ಈತನ ವಿರುದ್ಧ ಕರ್ನಾಟಕ, ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳಲ್ಲಿ ದೂರುಗಳಿವೆ.
ಹಲವು ಎಫ್ಐಆರ್ಗಳು ದಾಖಲಾದ ನಂತರ ಭಾರತ ಬಿಟ್ಟು ಪಲಾಯನ ಮಾಡಿ, ವಿವಿಧ ದೇಶಗಳಲ್ಲಿ ತಲೆಮರಿಸಿಕೊಂಡಿದ್ದ. ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಆತನನ್ನು ಹಸ್ತಾಂತರ ಮಾಡುವ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದುಬರಬೇಕಿದೆ.
ಇನ್ನು ಮತ್ತೊಬ್ಬ ಕುಖ್ಯಾತ ಡಾನ್ ರವಿ ಪೂಜಾರಿ ಈಗಾಗಲೇ ವಶದಲ್ಲಿರುವುದನ್ನು ಇಲ್ಲಿ ಸ್ಮರಿಸಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ