
ಚಿಕ್ಕಬಳ್ಳಾಪುರ, (ಜ.13): ಪ್ರೀತಿಸಿದ ಹುಡುಗಿಯ ಶೀಲದ ಬಗ್ಗೆ ಶಂಕೆಗೊಂಡ ಪ್ರಿಯತಮ ಆಕೆಗೆ ವಿಷ ಕುಡಿಸಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ಚಿಕ್ಕಬಳ್ಳಾಪುರದ ಕಮಲಾಪುರದಲ್ಲಿ ನಡೆದಿದೆ.
ವೆಂಕಟೇಶ್ ವಿಷ ಕುಡಿಸಿದ ಯುವಕ. ವಿಷ ಸೇವಿಸಿದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಈ ಘಟನೆ ಜ.8ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ವಿವಾಹಿತೆ ಗುಪ್ತಾಂಗಕ್ಕೆ ‘ಲವರ್’ ಆ್ಯಸಿಡ್ ದಾಳಿ!
ಘಟನೆ ಹಿನ್ನೆಲೆ:
ಗೌರಿಬಿದನೂರು ತಾಲೂಕಿನ ವೆಂಕಟೇಶ್, ಪಿಯುಸಿ ವ್ಯಾಸಾಂಗ ಮಾಡುತ್ತಿದ್ದ ಸ್ವಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದ. ವೆಂಕಟೇಶ್ ಇತ್ತೀಚೆಗೆ ಯುವತಿಯ ಶೀಲದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದ. ಇದೆ ವಿಚಾರವಾಗಿ ಜ.6ರಂದು ಇಬ್ಬರ ನಡುವೆ ಜಗಳ ನಡೆದಿತ್ತು.
ತಪ್ಪು ಮಾಡಿಲ್ಲ ಅಂದರೆ ವಿಷ ಕುಡಿದು ಸಾಬೀತುಪಡಿಸುವಂತೆ ವೆಂಕಟೇಶ್ ಯುವತಿಗೆ ಸವಾಲು ಹಾಕಿದ್ದ. ಪ್ರಿಯತಮನ ಮಾತಿಗೆ ಬದ್ಧಳಾದ ಯುವತಿ ವಿಷ ಕುಡಿದು ನೇರವಾಗಿ ಮನೆಗೆ ತೆರಳಿದ್ದಾಳೆ.
ಬಳಿಕ ಮನೆಯಲ್ಲಿ ಯುವತಿ ಕುಸಿದು ಬಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಜ.8ರಂದು ಮೃತಪಟ್ಟಿದ್ದಾಳೆ.
ಪಾಲಕರಿಗೆ ವೆಂಕಟೇಶ್ ಮೇಲೆ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದರು.ಕೇಸು ದಾಖಲಿಸಿದ ಪೊಲೀಸರು ವೆಂಕಟೇಶ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಒಪ್ಪಿಕೊಂಡಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ