
ಬೆಂಗಳೂರು [ಜ.13]: ತಾಯಿ ಬೈದಿದ್ದಕ್ಕೆ ನೊಂದು ಬಾಲಕನೋರ್ವ ಮನೆ ಬಿಟ್ಟು ಹೋದ ಘಟನೆ ಬೆಂಗಳೂರನಲ್ಲಿ ನಡೆದಿದೆ.
ಬೆಂಗಳೂರಿನ ಚೋಳರಪಾಳ್ಯದ 16 ವರ್ಷದ ಗಗನ್ ಮನೆ ಬಿಟ್ಟು ಹೋಗಿದ್ದಾನೆ. ಜನವರಿ 9 ರಂದು ಗಗನ್ ಬೈಕಿನಿಂದ ಬಿದ್ದಿದ್ದು, ಇದಕ್ಕೆ ತಾಯಿ ಬೈದು ಬುದ್ದಿ ಹೇಳಿದ್ದರಿಂದ ಮನೆ ಬಿಟ್ಟು ತೆರಳಿದ್ದಾನೆ.
ಬೈಕಲ್ಲಿ ಹೋಗಿ ಬಿದ್ದಿದ್ದ ಗಗನ್ ಗೆ ತಾಯಿ ಬೈದಿದ್ದರು, ಅಂದು ರಾತ್ರಿ ಕಸ ಎಸೆದು ಬರುವುದಾಗಿ ಹೇಳಿ ಹೋದವನು ಮರಳಿ ಬರಲಿಲ್ಲ.
ಪರೀಕ್ಷೆಯಲ್ಲಿ ಫೇಲ್: 300 ವಿದ್ಯಾರ್ಥಿಗಳ ಅಂಕಪಟ್ಟಿ ಕದಿಯಲು ಮುಂದಾದ ಭೂಪ!...
ಸ್ವಾಮಿ ವಿವೇಕಾನಂದ ಪ್ರೌಢಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡ್ತಾ ಇದ್ದ ಗಗನ್ ಜನವರಿ 9 ರಂದು ಮನೆ ಬಿಟ್ಟು ಹೋಗಿದ್ದು, ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಖಲಿಸ್ತಾನ್ ಪ್ರತ್ಯೇಕವಾದಿ ಹೆಡೆಮುರಿ ಕಟ್ಟಿದ ಖಾಕಿ!...
ಸದ್ಯ ಈ ಸಂಬಂಧ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ