ಬರ್ತಡೇ ಪಾರ್ಟಿ ವೇಳೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಕುದೂರು ಪೊಲೀಸ್ ಠಾಣೆ ವ್ಯಾಪ್ತಿಯ ತಿಮ್ಮೇಗೌಡನಪಾಳ್ಯದಲ್ಲಿ ನಡೆದಿದೆ. ಕುದೂರು ಹೋಬಳಿಯ ತಿಮ್ಮೇಗೌಡನಪಾಳ್ಯ ಮಂಜುನಾಥ್ ಬಾಬು ಅವರ ತೋಟದಲ್ಲಿ ಭಾನುವಾರ ರಾತ್ರಿ ಬೆಂಗಳೂರಿನ 25ಕ್ಕೂ ಸ್ನೇಹಿತರೆಲ್ಲರೂ ಸೇರಿ ಬರ್ತಡೇ ಮಾಡಿದ್ದು, ಪಾರ್ಟಿಯಲ್ಲಿ ಸ್ನೇಹಿತರಿಗೆ ಗಲಾಟೆ ನಡೆದಿದೆ.
ಕುದೂರು (ಜ.30): ಬರ್ತಡೇ ಪಾರ್ಟಿ ವೇಳೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಕುದೂರು ಪೊಲೀಸ್ ಠಾಣೆ ವ್ಯಾಪ್ತಿಯ ತಿಮ್ಮೇಗೌಡನಪಾಳ್ಯದಲ್ಲಿ ನಡೆದಿದೆ.
ಕುದೂರು ಹೋಬಳಿಯ ತಿಮ್ಮೇಗೌಡನಪಾಳ್ಯ ಮಂಜುನಾಥ್ ಬಾಬು ಅವರ ತೋಟದಲ್ಲಿ ಭಾನುವಾರ ರಾತ್ರಿ ಬೆಂಗಳೂರಿನ 25ಕ್ಕೂ ಸ್ನೇಹಿತರೆಲ್ಲರೂ ಸೇರಿ ಬರ್ತಡೇ ಮಾಡಿದ್ದು, ಪಾರ್ಟಿಯಲ್ಲಿ ಸ್ನೇಹಿತರಿಗೆ ಗಲಾಟೆ ನಡೆದಿದೆ.
ಈ ಸಂದರ್ಭದಲ್ಲಿ ಗೊರಗುಂಟೆಪಾಳ್ಯದ ಅಶೋಕ್ (೩೦) ಎಂಬಾತನನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಲಾಗಿದೆ. ಭಾನುವಾರ ದಿಲೀಪ್ ಎಂಬುವರ ಹುಟ್ಟುಹಬ್ಬ ಇತ್ತು. ಬೆಂಗಳೂರಿನಿಂದ ಸ್ನೇಹಿತರೆಲ್ಲರೂ ಬಂದು ಬರ್ತಡೆ ಮಾಡಿದ್ದಾರೆ. ಪಾರ್ಟಿ ವೇಳೆ ಕುಡಿದ ಮತ್ತಿನಿಂದ ಗಲಾಟೆ ನಡೆದಿದೆ. ಈ ವೇಳೆ ಅಶೋಕ್ ಎಂಬಾತನನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
16 ರ ಬಾಲಕಿಯ ಜತೆ 61 ರ ಮುದುಕನಿಗೆ ಅಕ್ರಮ ಸಂಬಂಧ? ಕೊಡಲಿಯಿಂದ ಕೊಚ್ಚಿ ಕೊಂದ ಯುವತಿ ತಂದೆ
ಸ್ಥಳಕ್ಕೆ ರಾಮನಗರ ಜಿಲ್ಲಾ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಅಪಾರ ಜಿಲ್ಲಾ ವರಿಷ್ಠಾಧಿಕಾರಿ ಸುರೇಶ್, ಡಿವೈಎಸ್‌ಪಿ ಪ್ರವೀಣ್, ಸಿಪಿಐ ನವೀನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.