ಹೆಂಡತಿಗೆ ಚುಡಾಯಿಸಿದ್ದನ್ನ ಪ್ರಶ್ನಿಸಿದ್ದಕ್ಕೇ ಪತಿಯ ಮೇಲೆಯೇ ದುರುಳರಿಂದ ಹಲ್ಲೆ!

By Ravi Janekal  |  First Published Jul 15, 2024, 1:25 PM IST

ಹೆಂಡತಿಗೆ ಚುಡಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ದುರುಳ ನಡುರಸ್ತೆಯಲ್ಲೇ ಗಂಡನ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಾರೋಗೇರಿಯಲ್ಲಿ ನಡೆದಿದೆ.


ಗದಗ (ಜು.15): ಹೆಂಡತಿಗೆ ಚುಡಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ದುರುಳ ನಡುರಸ್ತೆಯಲ್ಲೇ ಗಂಡನ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಾರೋಗೇರಿಯಲ್ಲಿ ನಡೆದಿದೆ.

ದೇವರಾಜ, ಭಾಗವ್ವ, ಚಂದ್ರವ್ವ, ಹಾಗೂ ದಾನಪ್ಪ ಹಲ್ಲೆಗೊಳಗಾದವರು, ಬಸವರಾಜ, ರವಿ, ಕೋಟೆಪ್ಪ ಹಾಗೂ ಮುತ್ತಪ್ಪ ಅನ್ನೋರಿಂದ ಹಲ್ಲೆ ನಡೆಸಿದ ದುರುಳರು.

Tap to resize

Latest Videos

undefined

ದೇವರಾಜ ಪತ್ನಿಗೆ ಚುಡಾಯಿಸಿದ್ದ ಕೊಟ್ರೆಪ್ಪ. ಹೆಂಡತಿಗೆ ಚುಡಾಯಿಸಿದ್ದಕ್ಕೆ ಪ್ರಶ್ನಿಸಿದ್ದ ಗಂಡ ದೇವರಾಜ್. ಪ್ರಶ್ನೆ ಮಾಡಿದ್ದ. ಮಾಡಿದ ತಪ್ಪಿಗೆ ತೆಪ್ಪಗೆ ಇರುವ ಬದಲು ಮಾರಕಾಸ್ತ್ರಗಳನ್ನ ಹಿಡಿದು ನಡುರಸ್ತೆಯಲ್ಲೇ ದೇವರಾಜ ಕುಟುಂಬಸ್ಥರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ದುರುಳ ಕೊಟ್ರೆಪ್ಪ

ಬಳ್ಳಾರಿ: ಕಾಂಗ್ರೆಸ್ ಪಾಲಿಕೆ ಸದಸ್ಯನಿಗೆ ಹಿಗ್ಗಾಮುಗ್ಗಾ ಥಳಿತ, ಕಾರಣ?

ಕುಟುಂಬದ ಆರು ಜನರು. ಏಕಾಏಕಿ ನಡೆದ ದಾಳಿಗೆ ತೀವ್ರ ಗಾಯಗೊಂಡು ರಸ್ತೆ ಮೇಲೆ ಬಿದ್ದು ಹೊರಳಾಡಿದ ದಲಿತ ಕುಟುಂಬ. ತೀವ್ರ ಗಾಯಗೊಂಡ ದಲಿತ ಕುಟುಂಬ. ಸದ್ಯ ಗಾಯಾಳುಗಳನ್ನ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ಸಂಬಂಧ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!