ಪೊಲೀಸರ ಬಲೆಗೆ ಬಿದ್ದ ನಕಲಿ ಲೋಕಾಯುಕ್ತ ಅಧಿಕಾರಿ!

By Kannadaprabha NewsFirst Published Oct 1, 2022, 1:26 PM IST
Highlights
  • ಪೊಲೀಸರ ಬಲೆಗೆ ಬಿದ್ದ ನಕಲಿ ಲೋಕಾಯುಕ್ತ ಅಧಿಕಾರಿ
  • ಬಂಧಿತ ಜ್ಞಾನೇಶ್‌ ಹಾಸನದಲ್ಲಿ ಸಿವಿಲ್‌ ಗುತ್ತಿಗೆದಾರ
  • ಲೋಕಾಯುಕ್ತ ಅಧಿಕಾರಿಯೆಂದು  ಚಿಕ್ಕಬಳ್ಳಾಪುರ ತಾಲೂಕು ಕಚೇರಿಗೆ ಭೇಟಿ
  • ಮಹತ್ವದ ಕಂದಾಯ ದಾಖಲೆಗಳ ಪರಿಶೀಲನೆಗೆ ಯತ್ನ

ಚಿಕ್ಕಬಳ್ಳಾಪುರ (ಅ.1) : ನಾನು ಲೋಕಾಯುಕ್ತ ಅಧಿಕಾರಿಯೆಂದು ಹೇಳಿಕೊಂಡು ಚಿಕ್ಕಬಳ್ಳಾಪುರ ತಾಲೂಕು ಕಚೇರಿಗೆ ಭæೕಟಿ ನೀಡಿ ಮಹತ್ವದ ಕಂದಾಯ ದಾಖಲೆಗಳ ಪರಿಶೀಲನೆಗೆ ಯತ್ನಿಸಿದ್ದ ನಕಲಿ ಲೋಕಾಯುಕ್ತ ಅಧಿಕಾರಿಯನ್ನು ಕೊನೆಗೂ ಪೊಲೀಸರು ಬಲೆಗೆ ಕೆಡವಿದ್ದಾರೆ. ಬಂಧಿತ ಆರೋಪಿಯನ್ನು ಹಾಸನದ ರವೀಂದ್ರ ನಗರದ ಚುಂಚನಗಿರಿ ಕಲ್ಯಾಣ ಮಂಟಪದ ಹಿಂಭಾಗ ವಾಸವವಿರುವ ಎಚ್‌.ಟಿ.ಜ್ಞಾನೇಶ್‌(52) ಎಂದು ಗುರುತಿಸಲಾಗಿದæ. ಈತ ವೃತ್ತಿಯಲ್ಲಿ ಸಿವಿಲ್‌ ಗುತ್ತಿಗೆದಾರ ಎಂದು ಪೊಲೀಸರು ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ ತಹಶೀಲ್ದಾರ್ ಕಚೇರಿಗೆ ನಕಲಿ‌ ಲೋಕಾಯುಕ್ತ ದಾಳಿ, ಐಡಿಕಾರ್ಡ್ ಕೇಳಿದ್ದೇ ಕಾಲ್ಕಿತ್ತ!

ಸೆ.22 ರಂದು ಎಚ್‌.ಟಿ.ಜ್ಞಾನೇಶ್‌, ತನ್ನ ಹೆಸರನ್ನು ಪ್ರಣವ್‌ ಅಂತ ಹೇಳಿಕೊಂಡು ಚಿಕ್ಕಬಳ್ಳಾಪುರ ತಾಲೂಕು ಕಚೇರಿಯಲ್ಲಿ ತಹÜಸೀಲ್ದಾರ್‌ ಗಣಪತಿಶಾಸ್ತ್ರಿ ಅವರ್ನು ಭೇಟಿ ಮಾಡಿದ್ದ. ಬಳಿಕ ತಮ್ಮ ಐಡಿ ಕಾರ್ಡ್‌ ಕೊಡಿಯೆಂದು ಕೇಳಿದ ತಕ್ಷಣವೇ ಆಸಾಮಿ ಅಲ್ಲಿಂದ ಪರಾರಿ ಆಗಿದ್ದ. ಈ ಬಗ್ಗೆ ತಹಶೀಲ್ದಾರ್‌ ಗಣಪತಿಶಾಸ್ತ್ರೀ, ಲೋಕಾಯುಕ್ತ ಅಧಿಕಾರಿಯ ಸೋಗಿನಲ್ಲಿ ಕಚೇರಿಗೆ ಬಂದ ವ್ಯಕ್ತಿಯ ಪತ್ತೆಗೆ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರಿಗೆ ಸಿಸಿ ದೃಶ್ಯವಾಳಿಗಳ ಸಮೇತ ದೂರು ನೀಡಿದ್ದರು.

ಆಸ್ತಿ ದಾಖಲೆ ಪರಿಶೀಲನೆಗೆ ಬಂದಿದ್ದ

ಸೆ.22 ರಂದು ಬಂಧಿತ ಆರೋಪಿ ಜ್ಞಾನೇಶ್‌, ತಮಗೆ ಪರಿಚಯ ಇರುವ ರಾಜೇಶ್‌ ಹಾಗೂ ದೃಶ್ಯಂತ್‌ ಅವರೊಂದಿಗೆ ಚಿಕ್ಕಬಳ್ಳಾಪುರ ತಾಲೂಕಿನ ಸೊಪ್ಪಹಳ್ಳಿ ಗ್ರಾಮದ ಸರ್ವೆ ನಂ.103 ರಲ್ಲಿನ 12.31 ಎಕರೆ ಪಿತ್ರಾರ್ಜಿತ ಜಮೀನಿನ ದಾಖಲೆಗಳನ್ನು ಸಂಗ್ರಹಿಸುವ ನೆಪದಲ್ಲಿ ಲೋಕಾಯುಕ್ತ ಅಧಿಕಾರಿಗಳ ಸೋಗಿನಲ್ಲಿ ಚಿಕ್ಕಬಳ್ಳಾಪುರ ತಹಶೀಲ್ದಾರ್‌ ಕಚೇರಿಗೆ ಬಂದಿದ್ದಾಗಿ ವಿಚಾರಣೆ ವೇಳೆ ಅಸಾಮಿ ಬಾಯಿ ಬಿಟ್ಟಿದ್ದಾನೆಂದು ಚಿಕ್ಕಬಳ್ಳಾಪುರ ಡಿವೈಎಸ್‌ಪಿ ವಿ.ಕೆ.ವಾಸುದೇವ್‌ ತಿಳಿಸಿದ್ದಾರೆ.

ಪ್ರಕರಣದ ಬೆನ್ನತ್ತಿದ್ದ ಚಿಕ್ಕಬಳ್ಳಾಪುರ ನಗರ ಪೊಲೀಸರು ಎಸ್ಪಿ ಡಿ.ಎಲ್‌.ನಾಗೇಶ್‌, ಡಿವೈಎಸ್‌ಪಿ ವಿ.ಕೆ.ವಾಸುದೇವ್‌ ಮಾರ್ಗದರ್ಶನದಲ್ಲಿ ಸಿಪಿಐ ಬಿ.ರಾಜು, ಪಿಎಸ್‌ಐ ಶಿವಣ್ಣ, ಎಂ.ಕೆ.ಸಂಗಮೇಶ್‌ ಹಾಗೂ ಸಿಬ್ಬಂದಿ ಪೆಂಚಲಪ್ಪ ಕಾರ್ಯಾಚರಣೆ ನಡೆಸಿ ನಕಲಿ ಲೋಕಾಯುಕ್ತ ಅಧಿಕಾರಿಯನ್ನು ಪತ್ತæ್ತ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಲೋಕಾಯುಕ್ತ ದಾಳಿ: ಲಂಚ ಸಮೇತ ಪೊಲೀಸ್‌ ಪೇದೆ, ಸಿಪಿಐ ವಾಹನ ಚಾಲಕನ ಬಂಧನ

click me!