ಹುಚ್ಚುನಾಯಿ ಕಡಿತ ಸಾವು ಬದುಕಿನ ಮಧ್ಯೆ ನರಳಾಡುತ್ತಿದ್ದ ಬಾಲಕಿ ಸಾವು!

By Gowthami K  |  First Published Feb 26, 2023, 10:07 PM IST

ಕಳೆದ ಎರಡು ವಾರದ ಹಿಂದೆ ಹುಚ್ಚುನಾಯಿ ಕಡಿದು ತೀವ್ರವಾಗಿ ಗಾಯಗೊಂಡಿದ್ದ ನಗರದ ವಟ್ಟಪ್ಪಗೇರಿ ಪ್ರದೇಶದ ನಾಲ್ಕು ವರ್ಷದ ತಯ್ಯಬಾ, ಶನಿವಾರ ರಾತ್ರಿ ಮೃತಪಟ್ಟಿದ್ದಾಳೆ. ಫೆ.7ರಂದು ವಟ್ಟಪ್ಪಗೆರೆ ಪ್ರದೇಶದ 30 ಜನರ ಮೇಲೆ ಹುಚ್ಚು ನಾಯಿ ದಾಳಿ ಮಾಡಿತ್ತು.


ಬಳ್ಳಾರಿ (ಫೆ.26): ಕಳೆದ ಎರಡು ವಾರದ ಹಿಂದೆ ಹುಚ್ಚುನಾಯಿ ಕಡಿದು ತೀವ್ರವಾಗಿ ಗಾಯಗೊಂಡಿದ್ದ ನಗರದ ವಟ್ಟಪ್ಪಗೇರಿ ಪ್ರದೇಶದ ನಾಲ್ಕು ವರ್ಷದ ತಯ್ಯಬಾ, ಶನಿವಾರ ರಾತ್ರಿ ಮೃತಪಟ್ಟಿದ್ದಾಳೆ. ಫೆ.7ರಂದು ವಟ್ಟಪ್ಪಗೆರೆ ಪ್ರದೇಶದ 30 ಜನರ ಮೇಲೆ ಹುಚ್ಚು ನಾಯಿ ದಾಳಿ ಮಾಡಿತ್ತು. ಇದರಿಂದ ಅನೇಕರು ಗಾಯಗೊಂಡಿದ್ದರು. ಈ ಪೈಕಿ ಬಾಲಕಿ ತಯ್ಯಬಾ ತೀವ್ರವಾಗಿ ಗಾಯಗೊಂಡಿದ್ದು, ಇಲ್ಲಿನ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ, ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಸೇರಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮಗು ಮೃತಪಟ್ಟಿದೆ. ಕಳೆದ ಎರಡು ತಿಂಗಳ ಹಿಂದೆಯಷ್ಟೇ ಕುರುಗೋಡು ತಾಲೂಕಿನ ಬಾದನಹಟ್ಟಿಗ್ರಾಮದ ಎರಡು ಮಕ್ಕಳು ಹುಚ್ವು ನಾಯಿ ಕಡಿತಕ್ಕೆ ಬಲಿಯಾಗಿದ್ದರು. ಆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಮಗು ನಾಯಿ ಕಡಿತಕ್ಕೆ ಬಲಿಯಾಗಿದೆ.

ಜನಪ್ರಿಯ ರೂಪದರ್ಶಿಯ ಕಾಲುಗಳು ಫ್ರಿಡ್ಜ್‌ ನಲ್ಲಿ ಪತ್ತೆ, ಶ್ರದ್ಧಾ ವಾಲ್ಕರ್‌ ಹತ್ಯೆಯನ್ನು ಹೋಲುತ್ತೆ ಈ ಕೊಲೆ!

Tap to resize

Latest Videos

undefined

ನಾಯಿಗಳ ಸಂಖ್ಯೆ ಏರಿಕೆ:
ಬಳ್ಳಾರಿಯಲ್ಲಿ ನಾಯಿ ದಾಳಿ ಇದೇ ಮೊದಲಲ್ಲ. ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಪಾಲಿಕೆ ಗಮನ ನೀಡದ ಹಿನ್ನೆಲೆಯಲ್ಲಿ ನಾಯಿಗಳ ಸಂಖ್ಯೆ ವಿಪರೀತ ಏರಿಕೆಯಾಗಿದೆ. ಒಂದು ಅಂದಾಜಿನ ಪ್ರಕಾರ ಸುಮಾರು 20 ಸಾವಿರ ಬೀದಿನಾಯಿಗಳು ನಗರದಲ್ಲಿವೆ. ಹೀಗಾಗಿ ನಾಯಿ ದಾಳಿಯಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ಸಾರ್ವಜನಿಕರು ದೂರುತ್ತಾರೆ.

ಕಳ್ಳತನ ಮಾಡಿ ಎಸ್ಕೇಪ್ ಆದವ ಗಿರವಿ ಅಂಗಡಿಯಲ್ಲಿ ಸಿಕ್ಕಿ ಬಿದ್ದ, ಆರೋಪಿಗಾಗಿ 150 ಸಿಸಿಟಿವಿ ಚೆಕ್!

ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ಮೂರು ಕೋಟಿ ಟೆಂಡರ್‌ ಸಿದ್ಧಪಡಿಸಿದ್ದು, ಶೀಘ್ರವೇ ಕರೆಯಲಿದ್ದೇವೆ. ಸಂತಾನಹರಣ ಶಸ್ತ್ರಚಿಕಿತ್ಸೆಯಾದ ನಾಯಿಗಳನ್ನು ಪತ್ತೆ ಹಚ್ಚಲು ಟ್ಯಾಗ್‌ ಅಳವಡಿಸಲಾಗುವುದು ಎಂದು ಪಾಲಿಕೆ ಆಯುಕ್ತ ರುದ್ರೇಶ್‌ ತಿಳಿಸಿದ್ದಾರೆ. ನಾಯಿ ಕಚ್ಚಿದವರಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದ್ದು, ಯಾವುದೇ ಪ್ರಾಣಾಪಾಯವಿಲ್ಲ ಎಂದು ವಿಮ್ಸ್‌ ನಿರ್ದೇಶಕ ಡಾ.ಗಂಗಾಧರಗೌಡ ಹೇಳಿದ್ದಾರೆ.

click me!