Bengaluru: ಕಾರು ಹತ್ತಿಸಿ ಬೀದಿ ನಾಯಿಯ ಕೊಂದ: ನರಳಿ ನರಳಿ ಪ್ರಾಣ ಬಿಟ್ಟ ಮೂಕಜೀವ

Published : Apr 22, 2022, 03:03 AM IST
Bengaluru: ಕಾರು ಹತ್ತಿಸಿ ಬೀದಿ ನಾಯಿಯ ಕೊಂದ: ನರಳಿ ನರಳಿ ಪ್ರಾಣ ಬಿಟ್ಟ ಮೂಕಜೀವ

ಸಾರಾಂಶ

ರಾಜಧಾನಿಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ದುರುಳನೊಬ್ಬ ರಸ್ತೆಯಲ್ಲಿ ಹೋಗುತ್ತಿದ್ದ ಬೀದಿ ನಾಯಿ ಮೇಲೆ ಏಕಾಏಕಿ ಕಾರು ಹತ್ತಿಸಿ ಸಾಯಿಸಿ ವಿಕೃತಿ ಮೆರೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರು (ಏ.22): ರಾಜಧಾನಿಯಲ್ಲಿ (Bengaluru) ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ದುರುಳನೊಬ್ಬ ರಸ್ತೆಯಲ್ಲಿ ಹೋಗುತ್ತಿದ್ದ ಬೀದಿ ನಾಯಿ (Street Dog) ಮೇಲೆ ಏಕಾಏಕಿ ಕಾರು ಹತ್ತಿಸಿ ಸಾಯಿಸಿ ವಿಕೃತಿ ಮೆರೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 

ಸರ್‌ ಎಂ.ವಿಶ್ವೇಶ್ವರಯ್ಯ ಲೇಔಟ್‌ 1ನೇ ಬ್ಲಾಕ್‌ನ ನಾಗದೇವಹಳ್ಳಿಯಲ್ಲಿ ಏ.19ರಂದು ಬೆಳಗ್ಗೆ 8.50ರ ಸುಮಾರಿಗೆ ಈ ದುರ್ಘಟನೆ ನಡೆದಿದೆ. ವಿಕೃತ ಮನಸ್ಥಿಯ ವ್ಯಕ್ತಿ ನಾಯಿ ಮೇಲೆ ಕಾರು ಹತ್ತಿಸಿಕೊಂಡು ಹೋಗುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ (CCTV Camera) ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್‌ (Viral) ಆಗಿದೆ. ಈ ಸಂಬಂಧ ಕೆಂಗೇರಿ ನಿವಾಸಿ ರಾಮಚಂದ್ರ ಭಟ್ಟಎಂಬುವವರು ಜ್ಞಾನಭಾರತಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಅಪಘಾತ ಎಸಗಿರುವ ಕಾರು ಸತ್ಯನಾರಾಯಣ ಎಂಬುವವರ ಹೆಸರಿನಲ್ಲಿರುವುದು ಗೊತ್ತಾಗಿದೆ. ಇದರ ಆಧಾರದ ಮೇಲೆ ಪೊಲೀಸರು ಕಾರು ಚಾಲಕನನ್ನು ಬಂಧಿಸಲು ಬಲೆ ಬೀಸಿದ್ದಾರೆ.

ರಸ್ತೆಯಲ್ಲಿ ನಾಯಿ ತನ್ನಪಾಡಿಗೆ ತಾನು ಹೋಗುತ್ತಿದ್ದಾಗ ಹಿಂದಿನಿಂದ ಬಂದಿರುವ ಬಿಳಿ ಬಣ್ಣದ ಕಾರು ನಾಯಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ರಸ್ತೆಗೆ ಬಿದ್ದ ನಾಯಿಯ ಮೇಲೆ ಕಾರಿನ ಮುಂದಿನ ಬಲಚಕ್ರ ಹಾಗೂ ಹಿಂಬದಿಯ ಬಲಚಕ್ರ ಉರುಳಿದೆ. ಕಾರು ಚಾಲಕ ಕಾರನ್ನು ನಿಲ್ಲಿಸಿದೆ ಪರಾರಿಯಾಗಿದ್ದಾನೆ. ಈ ವೇಳೆ ತೀವ್ರ ಗಾಯಗೊಂಡಿದ್ದ ನಾಯಿ ಒದ್ದಾಡಿಕೊಂಡು ರಸ್ತೆ ಪಕ್ಕಕ್ಕೆ ಬಂದಿದ್ದು, ಬಳಿಕ ನರಳಾಡಿ ಕೆಲವೇ ನಿಮಿಷಗಳಲ್ಲಿ ಪ್ರಾಣ ಬಿಟ್ಟಿದೆ. ಈ ವೇಳೆ ಸ್ಥಳೀಯರು ನಾಯಿಗೆ ಬಾಯಿಗೆ ನೀರು ಬಿಟ್ಟಿದ್ದಾರೆ. ಇಡೀ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Animal Cruelty ಫ್ರೀಜರ್ ತೆರೆದ ಪೊಲೀಸರಿಗೆ ಅಚ್ಚರಿ, 183 ನಾಯಿ, ಹಲ್ಲಿ, ಹಾವು ಸೇರಿ ಹಲವು ಪ್ರಾಣಿಗಳು ಪತ್ತೆ,ಕೆಲವು ಜೀವಂತ!

ಘಟನೆ ಸಂಬಂಧ ದೂರು ನೀಡಿರುವ ರಾಮಚಂದ್ರ ಭಟ್ಟ, ನಾನು ವೃತ್ತಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದು, ಕೆಲ ವರ್ಷಗಳಿಂದ ಮನೆಯ ಸುತ್ತಮುತ್ತ ಇರುವ ಬೀದಿ ನಾಯಿಗಳನ್ನು ನೋಡಿಕೊಳ್ಳುತ್ತಿದ್ದೇನೆ. ಏ.19ರಂದು ಬಿಳಿ ಬಣ್ಣದ ಕಾರಿನ ಚಾಲಕ ಉದ್ದೇಶ ಪೂರ್ವಕವಾಗಿ ಬೀದಿ ನಾಯಿ ಮೇಲೆ ಕಾರು ಹತ್ತಿಸಿ ಸಾಯಿಸಿದ್ದಾನೆ. ಹೀಗಾಗಿ ನಾಯಿಯನ್ನು ಕೊಲೆ ಮಾಡಿದ ಕಾರು ಚಾಲಕನನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಕೋರಿದ್ದಾರೆ. ಇತ್ತೀಚೆಗೆ ದಿವಂಗತ ಉದ್ಯಮಿ ಆದಿಕೇಶವಲು ಮೊಮ್ಮಗ ಆದಿ ಎಂಬಾತ ಜಯನಗರ ರಸ್ತೆ ಬದಿ ಮಲಗಿದ್ದ ನಾಯಿ ಮೇಲೆ ಐಷಾರಾಮಿ ಹತ್ತಿಸಿ ಸಾಯಿಸಿದ್ದ ಘಟನೆಯನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಬೀದಿ ನಾಯಿ ಮೇಲೆ ಆಸಿಡ್ ಎರಚಿದ ಪುಂಡರು: ಈ ಕ್ರೂರಿಗಳಿಗೆ ಯಾವ ಶಿಕ್ಷೆ ಆದರು ಕಡಿಮೆಯೇ. ಬೀದಿ ನಾಯಿ (stray dog) ಮೇಲೆ, ಮೂಕ ಪ್ರಾಣೀ ಮೇಲೆ ಆಸಿಡ್ ದಾಳಿ ಮಾಡಿದ್ದಾರೆ.   ಬೀದಿ ನಾಯಿ ಮೇಲೆ ಆಸಿಡ್ (Acid attack) ಎರಚಿದ್ದು ಅಲ್ಲದೇ ವೃದ್ಧೆಗೆ ಬೆದರಿಕೆ ಹಾಕಿದ್ದಾರೆ. ಶ್ವಾನ  ರಕ್ಷಣಗೆ ಹೋದ ಹಿರಿಯ ನಾಗರಿಕರನ್ನು ಬೆದರಿಸಿದ್ದು ಬನಶಂಕರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇವರು ಒಂದು ತರಹ ಹುಚ್ಚು ಜನರೇ ಸರಿ. ಅಮಲಿನಲ್ಲಿ ಮಧ್ಯರಾತ್ರಿ ರಸ್ತೆಯಲ್ಲಿ ಓಡಾಡುವ ಪುಂಡರು ತಮ್ಮನ್ನು ನೋಡಿ ಬೊಗಳುವ ಬೀದಿ ನಾಯಿಗಳ ಶಬ್ದವನ್ನು ಎಂಜಾಯ್ ಮಾಡ್ತಿದ್ದರಂತೆ! ಪೊಲೀಸರು ತನಿಖೆ  ವೇಳೆ  ಈ ವಿಚಾರ ಪತ್ತೆ ಮಾಡಿದ್ದಾರೆ .

Kolar: ಪ್ರಾಣಿಗಳೇ ಗುಣದಲ್ಲಿ ಮೇಲು ಎಂದು ಬೀದಿ ಪ್ರಾಣಿಗಳಿಗೆ ಆಸರೆಯಾದ ವ್ಯಕ್ತಿ!

ಮಾರ್ಚ್  4 ರಂದು ನಾಲ್ಕರಿಂದ ಐದು ಜನ ಸೇರಿ  ಬೀದಿ ನಾಯಿಯನ್ನು ಕಟ್ಟಿ ಹಾಕಿ ಮನಸೋ ಇಚ್ಛೆ ಥಳಿಸಿದ್ದಾರೆ. ನಾಯಿ ಮೇಲೆ ಪೆಟ್ರೋಲ್ ಮತ್ತು ಆಸಿಡ್ ಸುರಿದಿದ್ದಾರೆ. ಇದೆಲ್ಲವನ್ನು ಗಮನಿಸಿದ ಐವತ್ತು ವರ್ಷದ ಮಹಿಳೆ ಮರುದಿನ ಹೋಗಿ ಯುವಕರನ್ನು ಪ್ರಶ್ನೆ ಮಾಡಿದ್ದಾರೆ. ಶ್ವಾನವನ್ನು ಅರ್ಧ ಜೀವ ಮಾಡಿದ್ದೇವೆ.. ಏನಾದರೂ ಮಾಡಿದರೆ ನಿಮ್ಮನ್ನು ಹತ್ಯೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಶ್ವಾನವನ್ನು ಆರೈಕೆ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಐಪಿಸಿ ಸೆಕ್ಷನ್ 34 (ಹಲವು ವ್ಯಕ್ತಿಗಳಿಂದ ಮಾಡಿದ ಕ್ರಿಮಿನಲ್ ಆಕ್ಟ್), 428 (ಯಾವುದೇ ಪ್ರಾಣಿಗಳನ್ನು ಕೊಲ್ಲುವುದು, ವಿಷಪೂರಿತಗೊಳಿಸುವುದು, ಅಂಗವಿಕಲಗೊಳಿಸುವುದು ಅಥವಾ ನಿಷ್ಪ್ರಯೋಜಕವಾಗಿಸುವ ಮೂಲಕ ದುಷ್ಕೃತ್ಯ ಎಸಗುವವರು), 429 (ಜಾನುವಾರುಗಳನ್ನು ಕೊಂದು ಅಥವಾ ಊನಗೊಳಿಸುವುದು ಇತ್ಯಾದಿ) ಮತ್ತು 354 (ಯಾವುದಾದರೂ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನನ್ನ ಜೊತೆಗೂ ಬಾ: ಗೆಳೆಯನ ಗರ್ಲ್‌ಫ್ರೆಂಡ್‌ಗೆ ಸಂದೇಶ: ಪ್ರಶ್ನಿಸಿದ್ದಕ್ಕೆ ಸ್ನೇಹಿತನನ್ನೇ ಕೊಂದು ಪೀಸ್ ಪೀಸ್ ಮಾಡಿದ
The Devil Movie: ಕಾಲವೇ ಸತ್ಯ ಹೇಳುತ್ತದೆ. ಸಮಯವೇ ಉತ್ತರಿಸುತ್ತದೆ-ಜೈಲಿನಿಂದಲೇ Darshan ಮೆಸೇಜ್