ಕೆಆರ್‌ಐಡಿಎಲ್‌ ನಿವೃತ್ತ ಅಧಿಕಾರಿಯ ಕರ್ಮಕಾಂಡ: ಮೈ ಮುರಿದು ದುಡಿದ ಕಾರ್ಮಿಕರಿಗೆ ಮಹಾ ವಂಚನೆ..!

By Girish GoudarFirst Published Apr 21, 2022, 10:36 AM IST
Highlights

*   ಕೆಲಸ ಮಾಡಿದ ಕಾರ್ಮಿಕರಿಗೆ 40 ಲಕ್ಷ ನೀಡಿದೆ ವಂಚನೆ
*  ಹಣ ಕೊಡಿ ಇಲ್ಲ, ವಿಷ ಕೊಡಿ ಅಂತಿರುವ ಕಾರ್ಮಿಕರು 
*  ಮೊದ ಮೊದಲು ವಾರಕ್ಕೆ ಒಮ್ಮೆಹಣ ಸಂದಾಯ ಮಾಡ್ತಿದ್ದ ಅಧಿಕಾರಿ
 

ಗದಗ(ಏ.21): ಅವ್ರೆಲ್ಲ ಮೈ ಮುರಿದು ನ್ಯಾಯದಂತೆ ಕೆಲಸ ಮಾಡಿದಾರೆ. ಅಧಿಕಾರಿಯ ಅನತಿಯಂತೆ ಹಗಲು ರಾತ್ರಿ ಬೆವರು ಸುರಿಸಿ ಕಾಮಗಾರಿ ಪೂರ್ಣಗೊಳಿಸಿದಾರೆ. ಆದ್ರೆ, ಹಣ ಸಂದಾಯದ ವಿಚಾರದಲ್ಲಿ ಆ ಕಾರ್ಮಿಕರಿಗೆ ಮಹಾ ಮೋಸವಾಗಿದೆ. ಹಣ ನೀಡಬೇಕಿದ್ದ ಅಧಿಕಾರಿ ನಿವೃತ್ತರಾಗಿರೋದ್ರಿಂದ ಅವ್ರೆಲ್ಲ ನಿತ್ಯ ಕಚೇರಿ ಅಲೆಯುವ ಪರಿಸ್ಥಿತಿ ಎದುರಾಗಿದೆ. 

ಹೌದು, ಗದಗ(Gadag) ಜಿಲ್ಲೆಯ ಕೆಆರ್ ಐಡಿಎಲ್(KRIDL) ನಿವೃತ್ತ ಅಧಿಕಾರಿಯೊಬ್ಬರು ಕಾರ್ಮಿಕರಿಗೆ ಕೊಡಬೇಕಾದ ಹಣ(Money) ಸಂದಾಯ ಮಾಡದೆ ವಂಚಿಸಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಕರ್ನಾಟಕ ರೂರಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಲಿಮಿಟೆಡ್‌ನ(Karnataka Rural Infrastructure Development Limited) ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿದ್ದ ಆರ್‌.ಎಸ್‌ ಮಾಳದ್ಕರ್‌ ಹಣ ನೀಡದೇ ಸತಾಯಿಸುತ್ತಿರುವ ನಿವೃತ್ತ ಅಧಿಕಾರಿಯಾಗಿದ್ದಾರೆ. ತಮ್ಮ ಸೇವಾ ಅವಧಿಯಲ್ಲಿ ಸುಮಾರು 12 ಕಾರ್ಮಿಕರಿಂದ ಜಿಲ್ಲೆಯ ವಿವಿಧೆಡೆ ಕೆಲಸ ಮಾಡಿಸಿದ್ದಾರೆ.

ಹಿಂದೂ, ಆರ್‌ಎಸ್‌ಎಸ್‌ ವಿರೋಧಿ ಸಿದ್ಧಲಿಂಗ ಶ್ರೀ ಜನ್ಮದಿನ ಭಾವೈಕ್ಯತಾ ದಿನವೇಕೆ?: ದಿಂಗಾಲೇಶ್ವರ ಶ್ರೀ

ಸರ್ಕಾರದಿಂದ(Government of Karnataka) ಮಂಜೂರಾದ ಕಾಮಗಾರಿಗಳನ್ನ ಕೆಆರ್ ಐಡಿಎಲ್‌ ಮೂಲಕ ಕಾರ್ಮಿಕರ ಸಹಾಯದಿಂದ ಮಾಳದ್ಕರ್‌ ಮಾಡಿಸಿದ್ದಾರೆ. ಮಾಳದ್ಕರ್‌ ಸೂಚನೆಯಂತೆ, ಸೆಂಟ್ರಿಂಗ್, ಪೇಟಿಂಗ್, ಬಿಲ್ಡಿಂಗ್ ಮೆಟೀರಿಯಲ್ಸ್ ಸೆಕ್ಯೂರಿಟಿ ಕೆಲಸವನ್ನ ಮಾಡಿಕೊಟ್ಟಿದ್ದಾರೆ. ಮೊದ ಮೊದಲು ವಾರಕ್ಕೆ ಒಮ್ಮೆಹಣ ಸಂದಾಯ ಮಾಡ್ತಿದ್ದ ಅಧಿಕಾರಿ,  ನಿವೃತ್ತಿ ಅಂಚಿನಲ್ಲಿ ಹಣ ಪಾವತಿಸೋದನ್ನ ನಿಲ್ಲಿಸಿದ್ದರಂತೆ. ಇದ್ರಿಂದ ಸಂಕಷ್ಟಕ್ಕೀಡಾದ ಕಾರ್ಮಿಕರು ಹಣ ಕೊಡುವಂತೆ ಮಾಳದ್ಕರ್ ನಿವಾಸಕ್ಕೆ ಹೋಗಿದ್ದಾರೆ. ಕಚೇರಿಯಿಂದ ಹಣ ಬಂದಿಲ್ಲ‌.. ಬಂದಕೂಡಲೇ ಪಾವತಿಸುತ್ತೇನೆ ಅಂತಾ ಮಾಳದ್ಕರ್ ಸಮಜಾಯಿಷಿ ನೀಡುತ್ತಲೇ ಬಂದಿದಾರೆ.

ಗದಗ, ಶಿರಹಟ್ಟಿ ಸೇರಿದಂತೆ ಜಿಲ್ಲೆಯ ವಿವಿಧ ಭಾಗದಲ್ಲಿ ಕಾರ್ಮಿಕರು ಕೆಲಸ ಮಾಡಿದ್ದಾರೆ. ಕೆಲ ಕಾರ್ಮಿಕರ 20/30 ಸಾವಿರ ರೂಪಾಯಿ ಹಣ ಸಂದಾಯ ಬಾಕಿ ಇದೆ. ಒಟ್ಟು 45 ಲಕ್ಷ ಹಣ ಸಂದಾಯ ಆಗ್ಬೇಕಿದೆ.. ಆದ್ರೆ, ಮಾಳದ್ಕರ್ ಸಾಹೇಬರು ಕಳೆದ ವರ್ಷ ನಿವೃತ್ತರಾಗಿದ್ದಾರೆ. ನಿವೃತ್ತಿಯ ನಂತ್ರ ಕಾರ್ಮಿಕರು ಬಿಲ್ ಹಿಡ್ಕೊಂಡು ಮನೆ ಬಳಿ ಹೋಗಿದ್ದಾರೆ.. ನಾಳೆ ಬಾ ನಾಡಿದ್ದು ಬಾ ಅಂತಾ ಮಾಳದ್ಕರ್ ದಿನ ದೂಡಿದ್ರಂತೆ.. ಅಧಿಕಾರಿಯ ಕಳ್ಳಾಟದಿಂದಾಗಿ ಕಾರ್ಮಿಕರು ರೋಸಿಹೋಗಿದ್ದಾರೆ.‌ ಕಳೆದ ಮೂರ್ನಾಲ್ಕು ತಿಂಗಳಿಂದ ದುಡಿದ ಹಣಕ್ಕಾಗಿ ಕಚೇರಿಯನ್ನೂ ಅಲೆಯುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಬೇಕಾದ ಅಧಿಕಾರಿಗಳು ಕೈಗೆ ಸಿಗ್ತಿಲ್ಲ. ಹೀಗಾಗಿ ಹಣ ಕೊಡಿ ಇಲ್ಲ ಜೀವಕ್ಕೆ ತೊಂದ್ರೆ ಮಾಡ್ಕೋತೇವಿ ಅಂತಾ ಕಾರ್ಮಿಕರು ಎಚ್ಚರಿಕೆ ನೀಡ್ತಿದಾರೆ.‌ 

ಅಧಿಕಾರಿ ನಿವೃತ್ತರಾಗಿ ಮನೆ ಸಡೆರಿದಾರೆ. ಆದ್ರೆ, ನ್ಯಾಯದಂತೆ ಕೆಲಸ ಮಾಡಿರೋ ಕಾರ್ಮಿಕರು ಸಾಲಗಾರರಕಾಟದಿಂದ ಮನೆಗೆ ಹೋಗ್ದೆ ಬೀದಿ ಅಲೆಯುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸ್ಬೇಕು‌, ಕಾರ್ಮಿಕರಿಗೆ ಸಿಗ್ಬೇಕಾದ ಹಣ ಸಿಗುವಂತೆ ಮಾಡ್ಬೇಕು. 
 

click me!