ಜಿಲ್ಲೆಯಲ್ಲಿ 9 ವರ್ಷದ ಬಾಲಕ ಮೊಸಳೆ ದಾಳಿಗೆ ಬಲಿಯಾಗಿರುವ ದುರ್ಘಟನೆ ನಡೆದಿದೆ.ರಾಯಚೂರು ತಾ. ಕುರುವಕಲಾ ಗ್ರಾಮದ ಬಳಿ ನಡೆದಿರುವ ಘಟನೆ
ರಾಯಚೂರು (ಮೇ.21) : ಜಿಲ್ಲೆಯಲ್ಲಿ 9 ವರ್ಷದ ಬಾಲಕ ಮೊಸಳೆ ದಾಳಿಗೆ ಬಲಿಯಾಗಿರುವ ದುರ್ಘಟನೆ ನಡೆದಿದೆ.ರಾಯಚೂರು ತಾ. ಕುರುವಕಲಾ ಗ್ರಾಮದ ಬಳಿ ನಡೆದಿರುವ ಘಟನೆ
ರಾಯಚೂರು ತಾ. ಕುರುವಕಲಾ ಗ್ರಾಮದ ಬಳಿ ನಡೆದಿರುವ ಘಟನೆ. ಕೃಷ್ಣಾನದಿ ಹಂಚಿಗೆ ಇರುವ ಹೊಲ. ಹೀಗಾಗಿ ಬಾಯಾರಿಕೆಗೆ ನದಿಯ ನೀರನ್ನೇ ತಂದು ಕುಡಿಯುತ್ತಿದ್ದ ಕುಟುಂಬ. ಶಾಲೆಗಳಿಗೆ ರಜೆ ಇದ್ದರಿಂದ ತಂದೆ-ತಾಯಿಗಳ ಜೊತೆ ಹೊಲಕ್ಕೆ ಹೋಗಿದ್ದ ಬಾಲಕ ನವೀನ್. ಈ ವೇಳೆ ಬಾಯಾರಿಕೆ ಆಗಿದ್ದಕ್ಕೆ ಕುಡಿಯಲು ನೀರು ತರಲು ಕೃಷ್ಣಾನದಿಗೆ ಹೋಗಿದ್ದಾನೆ. ದಂಡೆಗೆ ಮೊಸಳೆಗಳಿರುವ ಬಗ್ಗೆ ತಿಳಿಯದೆ ನೀರು ತುಂಬಲು ಮುಂದಾಗಿರುವ ಬಾಲಕ. ಈ ವೇಳೆ ಬಾಲಕನ ಮೇಲೆ ದಾಳಿ ನಡೆಸಿ ಬಲಿ ಪಡೆದಿರುವ ಮೊಸಳೆ. ಬಾಲಕ ನವೀನ್ ಮೃತ ದೇಹಕ್ಕೆ ಹುಡುಕಾಟ ನಡೆಸಿರುವ ಕುಟುಂಬಸ್ಥರು ಇನ್ನೂ ಪತ್ತೆಯಾಗದಿರುವುದು ಪೋಷಕರು ದುಃಖಿತರಾಗಿದ್ದಾರೆ.
undefined
ಮೊಸಳೆಗೆ ಕೈಯಲ್ಲಿ ಆಹಾರ ತಿನ್ನಿಸಿದ ವ್ಯಕ್ತಿ: ಭಯಾನಕ ವಿಡಿಯೋ ವೈರಲ್
ಜಿಲ್ಲೆಯ ಕೃಷ್ಣನದಿಯಲ್ಲಿ ಮೊಸಳೆಗಳ ಹಾವಳಿ ಹೆಚ್ಚಿದೆ. ಕಳೆದ ವರ್ಷವೂ ಜಿಲ್ಲೆಯಲ್ಲಿ ಮೊಸಳೆ ದಾಳಿಗೆ ಪವನ್ ಎಂಬ ಬಾಲಕನ ಮೇಲೆ ಮೊಸಳೆ ದಾಳಿ ನಡೆದಿತ್ತು. ಕೊರ್ಟಗುಂಡ ಗ್ರಾಮದ ಬಳಿ ನದಿಯಲ್ಲಿ ಆಟವಾಡುತ್ತಿದ್ದಾಗ ಮೊಸಳೆ ದಾಳಿಗೆ ಬಲಿಯಾಗಿದ್ದ. ಅದೃಷ್ಟವಶಾತ್ ಮೊಸಳೆ ಕಂಡು ಸ್ಥಳೀಯರು ಬಾಲಕನನ್ನು ರಕ್ಷಿಸಿದ್ದರು. ಇದೀಗ ಮತ್ತೊಮ್ಮೆ ಮೊಸಳೆ ದಾಳಿಗೆ ಬಾಲಕ ಬಲಿಯಾಗಿದ್ದಾನೆ. ನದಿಯಂಚಿಗೆ ಮಕ್ಕಳು ಇಳಿಯದಂತೆ, ಮೊಸಳೆಗಳು ಇರುವ ಸ್ಥಳದಲ್ಲಿ ಎಚ್ಚರಿಕೆ ಹಾಕುವುದುರಿಂದ ಇಂಥ ದುರಂತಗಳನ್ನು ತಪ್ಪಿಸಬಹುದಾಗಿದೆ.
ಹಾವು ಕಡಿತ; ಯುವಕ ಸಾವು:
ಧಾರವಾಡ: ವಿಷಪೂರಿತ ಹಾವು ಕಡಿದು ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಧಾರವಾಡದ ರಾಮನಗರ ನಿವಾಸಿಯಾಗಿರುವ ಚೇತನ ಹಾವು ಕಡಿತಕ್ಕೆ ಬಲಿಯಾಗಿರುವ ಯುವಕ. ನಿನ್ನೆ ತಡರಾತ್ರಿ ಈ ಘಟನೆ ನಡೆದಿದ್ದು ಯುವಕನಿಗೆ ಹಾವು ಕಚ್ಚಿದ ಬಳಿಕ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಚೇತನ. ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗದ ಉರಗತಜ್ಞ ಸ್ನೇಕ್ ಕಿರಣ್‌ಗೆ ಕಚ್ಚಿದ ಕೊಳಕುಮಂಡಲ, ಪ್ರಾಣಾಪಾಯದಿಂದ ಪಾರು