ಆರೋಪಿಗಳ ವಿರುದ್ಧ ಕೊಲೆ, ಕೊಲೆ ಯತ್ನ, ಹಲ್ಲೆ, ಸುಲಿಗೆ, ಸರ ಅಪಹರಣ, ಗಾಂಜಾ, ಅತ್ಯಾಚಾರ, ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ, ಅಕ್ರಮ ಚಟುವಟಿಕೆಗಳು ಸೇರಿ ಹತ್ತಾರು ಪ್ರಕರಣಗಳು ದಾಖಲು| ಎಷ್ಟು ಬಾರಿ ಎಚ್ಚರಿಕೆ ನೀಡಿದರೂ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಜೊತೆಗೆ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಖದೀಮರು|
ಬೆಂಗಳೂರು(ಏ.29): ಕಳೆದ ಮೂರು ತಿಂಗಳ ಅವಧಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಎಂಟು ಮಂದಿ ರೌಡಿಶೀಟರ್‌ಗಳು ಸೇರಿ ಒಟ್ಟು ಒಂಬತ್ತು ಮಂದಿಯನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿದ್ದಾರೆ.
ಅಮೃತಹಳ್ಳಿ ಠಾಣೆ ರೌಡಿಶೀಟರ್ ಮುನಿಕೃಷ್ಣ (27), ಬನಶಂಕರಿ ಠಾಣೆ ರೌಡಿಶೀಟರ್ ಸಾಗರ್ ಅಲಿಯಾಸ್ ಇಟ್ಟಮಡು (22), ಬೈಯಪ್ಪನಹಳ್ಳಿ ಠಾಣೆಯ ರಾಜು ಅಲಿಯಾಸ್ ರಾಜುದೊರೈ (25), ಬ್ಯಾಡರಹಳ್ಳಿ ಠಾಣೆ ವಾಸುದೇವ ಅಲಿಯಾಸ್ ವಾಸು(32), ಹುಳಿಮಾವು ಠಾಣೆಯ ಚೇತನ್ ಅಲಿಯಾಸ್ ಮಾದೇಶ(29), ಇಂದಿರಾನಗರ ಠಾಣೆಯ ಕೋಟೇಶ್ವರನ್ ಅಲಿಯಾಸ್ ಕೋಟೆ(23), ಅಮೃತಹಳ್ಳಿ ನಿವಾಸಿ ಸ್ಯಾಮುಯಲ್(24), ಯಶವಂತಪುರ ಠಾಣೆಯ ಮಂಜುನಾಥ್(35) ಎಂಬ ರೌಡಿಶೀಟರ್ಗಳನ್ನು ಬಂಧಿಸಲಾಗಿದ್ದು, ಇದರೊಂದಿಗೆ ನಗರದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಇಸ್ಪೀಟ್ ಅಡ್ಡೆಗಳು, ವಿಡಿಯೋ ಗೇಮ್ಸ್ಗಳನ್ನು ನಡೆಸುತ್ತಿದ್ದ ಬಿ.ಹರಿರಾಜಶೆಟ್ಟಿ ಅಲಿಯಾಸಿ ಹರೀಶ್ (58) ಎಂಬಾತನನ್ನು ಗೂಂಡಾ ಕಾಯ್ದೆ ಅಡಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
undefined
ಹೆಂಡತಿ ತಂಗಿಯೊಂದಿಗೆ ಕುಚ್ ಕುಚ್...ಗರ್ಭಿಣಿ ಪತ್ನಿ ಹತ್ಯೆ ಮಾಡಿದ!
ಆರೋಪಿಗಳ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 8-10 ವರ್ಷಗಳಿಂದ ಕೊಲೆ, ಕೊಲೆ ಯತ್ನ, ಹಲ್ಲೆ, ಸುಲಿಗೆ, ಸರ ಅಪಹರಣ, ಗಾಂಜಾ, ಅತ್ಯಾಚಾರ, ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ, ಅಕ್ರಮ ಚಟುವಟಿಕೆಗಳು ಸೇರಿ ಹತ್ತಾರು ಪ್ರಕರಣಗಳು ದಾಖಲಾಗಿವೆ. ಎಷ್ಟು ಬಾರಿ ಎಚ್ಚರಿಕೆ ನೀಡಿದರೂ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಜೊತೆಗೆ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದರು. ಹೀಗಾಗಿ ಗೂಂಡಾ ಕಾಯ್ದೆಯಡಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.