8 ವರ್ಷದ ಪಾಕ್ ಹಿಂದೂ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕಣ್ಣು ಕಿತ್ತ ದುರುಳರು!

Published : Aug 29, 2022, 07:15 PM ISTUpdated : Aug 29, 2022, 08:52 PM IST
8 ವರ್ಷದ ಪಾಕ್ ಹಿಂದೂ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕಣ್ಣು ಕಿತ್ತ ದುರುಳರು!

ಸಾರಾಂಶ

ಅತ್ಯಂತ ಘನಘೋರ ಘಟನೆಯ ಸಿಂಧ್ ಪ್ರಾಂತ್ಯದಲ್ಲಿ ವರದಿಯಾಗಿದೆ. 8 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ. ಬಳಿಕ ಆರೋಪಿಗಳ ಗುರುತು ಪತ್ತೆ ಹಚ್ಚುವ ಆತಂಕದಿಂದ ಬಾಲಕಿಯ ಕಣ್ಣನ್ನೇ ಕಿತ್ತ ಘಟನೆ ನಡೆದಿದೆ.

ಸಿಂಧ್(ಆ.29): ಪಾಕಿಸ್ತಾನದಲ್ಲಿ ಹಿಂದೂ ಮಹಿಳೆಯರು, ಬಾಲಕಿಯರ ಮೇಲಿನ ದೌರ್ಜನ್ಯ, ಕಿರುಕುಳ ಎಗ್ಗಿಲ್ಲದೆ ನಡೆಯತ್ತಿದೆ. ಪ್ರತಿ ದಿನ ಒಂದಕ್ಕಿಂತ ಒಂದು ಘನಘೋರ ಘಟನೆಗಳು ವರದಿಯಾಗುತ್ತಿದೆ. ಇದೀಗ 8 ವರ್ಷದ ಪುಟ್ಟ ಬಾಲಕಿ ಮೇಲೆ ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಇಷ್ಟಕ್ಕೆ ಕಾಮುಕರ ಅಟ್ಟಹಾಸ ಮುಗಿದಿಲ್ಲ. ಈ ಆರೋಪಿಗಳನ್ನು ಬಾಲಕಿ ಗುರುತಿಸುವ ಕಾರಣದಿಂದ ಆಕೆಯ ಕಣ್ಣುಗಳನ್ನೇ ಕಿತ್ತಿದ್ದಾರೆ. ಬಳಿಕ ಮುಖವನ್ನು ಕಲ್ಲಿನಿಂದ ಉಜ್ಜಿದ್ದಾರೆ. ತೀವ್ರ ರಕ್ತ ಸ್ರಾವದಿಂದ ಬಳಲಿದ ಬಾಲಕಿಯನ್ನು ಪೋಷಕರು ಸ್ಥಳೀಯ ಆಸ್ಪತ್ರೆ ದಾಖಲಿಸಿದ್ದಾರೆ. ಬಾಲಕಿಯ ಸ್ಥಿತಿ ಗಂಭೀರವಾಗಿದೆ. ಆಕೆಯ ಗುಪ್ತಾಂಗದಿಂದಲೂ ರಕ್ತ ಸ್ರಾವವಾಗುತ್ತಿದ್ದರೆ, ಕಣ್ಣು ಹಾಗೂ ಮುಖದಿಂದಲೂ ರಕ್ತ ಸ್ರಾವವಾಗುತ್ತಿದೆ. ತೀವ್ರ ನಿಘಾ ಘಟಕದಲ್ಲಿ ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಲೇ ಇದೆ. ಇದೀಗ ನಮ್ಮ ಬಾಲಕಿಯನ್ನೇ ಕಾಮುಕರು ನಿರ್ಜೀವ ಮಾಡಿದ್ದಾರೆ ಎಂದು ತಾಯಿ ಅಳಲು ತೋಡಿಕೊಂಡಿದ್ದಾರೆ.

ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿರುವ ಉಮರಕೋಟ್‌ನಲ್ಲಿ ಈ ಘಟನೆ ನಡೆದಿದೆ. ಸಿಂಧ್ ಪ್ರಾಂತ್ಯದಲ್ಲಿ ಅತೀ ಹೆಚ್ಚಿನ ಹಿಂದೂಗಳು ವಾಸಿಸುತ್ತಿದ್ದಾರೆ. ಇಲ್ಲಿ ಮುಗ್ದ ಹಿಂದೂ ಹೆಣ್ಣು ಮಕ್ಕಳನ್ನು ಟಾರ್ಗೆಟ್ ಮಾಡಿ ಕಿಡ್ನಾಪ್ ಮಾಡುವುದು, ಅತ್ಯಾಚಾರ ಎಸಗುವುದು ನಿರಂತರವಾಗಿ ನಡೆಯುತ್ತಿದೆ.  ಇದೀಗ 8 ವರ್ಷದ ಬಾಲಕಿಯ ಮೇಲೆ ಘನಘೋರ ಅತ್ಯಾಚಾರ ನಡೆದಿದೆ. ತೀವ್ರ ನೋವಿನಿಂದ ಬಳಲುತ್ತಿರುವ ಬಾಲಕಿ ಸ್ಥಿತಿ ನೆನೆದು ಪೋಷಕರು ಸೇರಿದಂತೆ ಸಿಂಧ್ ಪ್ರಾಂತ್ಯದ ಹಿಂದೂ ಸಮುದಾಯ ಕಣ್ಣೀರಿಡುತ್ತಿದೆ.

ಅಪ್ರಾಪ್ತೆ ಸ್ನೇಹಿತೆ ಮೇಲೆ ಸಾಮೂಹಿಕ ಅತ್ಯಾಚಾರ, ನೋಡಿ ಖುಷಿ ಪಟ್ಟ ಮಹಿಳೆ!

ಬಡ ಹಿಂದೂ ಸಮುದಾಯದ ಕುಟುಂಬದ ಬಾಲಕಿಯ ಮೇಲೆರಗಿದ ಕಾಮುಕರು ಆಕೆಯ ಜೀವ ಮಾತ್ರ ಉಳಿಸಿದ್ದಾರೆ. ಪಾಕಿಸ್ತಾನದಲ್ಲಿ ನಡೆಯುತ್ತಿರುವ ಕ್ರೌರ್ಯಕ್ಕೆ ಇದೀಗ ವಿಶ್ವಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಪಾಕಿಸ್ತಾನ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಅಪ್ರಾಪ್ತರ ಮೇಲೆ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ನಡೆಯುತ್ತಲೇ ಇದೆ. 

 

 

ಪ್ರೀತಿಸುವುದಾಗಿ ನಂಬಿಸಿ ಅತ್ಯಾಚಾರ
ಪ್ರೀತಿಸುವುದಾಗಿ ಪುಸಲಾಯಿಸಿ ಅಪ್ರಾಪ್ತೆಯನ್ನು ಲಾಡ್ಜ್‌ಗೆ ಕರೆದೊಯ್ದು ಐದಾರು ಬಾರಿ ಅತ್ಯಾಚಾರ ಎಸಗಿರುವ ಸಂಬಂಧ ಹುಬ್ಭಳ್ಳಿಯ ಗೋಕುಲ ರಸ್ತೆ ಪೊಲೀಸ್‌ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಆರೋಪಿ ಬಂಧಿಸಲಾಗಿದೆ. ಕಾರವಾರ ಮೂಲದ ಶ್ರೀನಿಧಿ ದತ್ತಾನಂದ ಕೊಲ್ವೇಕರ ಆರೋಪಿ. ಈತ ಮೂಲತಃ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ವಿದ್ಯಾರ್ಥಿನಿ ಆಗಿರುವ ಬಾಲಕಿಯ ಫೋಟೋ ಪಡೆದು ಪ್ರೀತಿಸುವುದಾಗಿ ನಾಟಕ ಮಾಡಿದ್ದಾನೆ. ಆರಂಭದಲ್ಲಿ ಸ್ನೇಹ ಪೂರ್ವಕವಾಗಿ ತಬ್ಬಿಕೊಂಡಿದ್ದ ಫೋಟೊ ತೋರಿಸಿ ಬೆದರಿಸಿ ಅಕ್ಷಯ ಪಾರ್ಕ್ ಬಳಿಯ ಲಾಡ್ಜ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಅಲ್ಲದೆ, ಯಾರಿಗಾದರೂ ವಿಷಯ ತಿಳಿಸಿದರೆ ಫೋಟೋ ಬಹಿರಂಗ ಪಡಿಸುವುದಾಗಿ ಹೆದರಿಸಿ ಕುಟುಂಬಸ್ಥರಿಗೆ ಅವಾಚ್ಯವಾಗಿ ಬೈದಿದ್ದಾನೆ ಎಂದು ದೂರಲ್ಲಿ ತಿಳಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧಿಸಿ, ಕಾನೂನು ಕ್ರಮ ಜರುಗಿಸಿದ್ದೇವೆ ಎಂದು ಇನ್‌ಸ್ಪೆಕ್ಟರ್‌ ಜೆ.ಎಂ. ಕಾಲಿಮಿರ್ಚಿ ತಿಳಿಸಿದರು.

11 ವರ್ಷದ ಸ್ನೇಹಿತೆಯನ್ನು ಅತ್ಯಾಚಾರ ಮಾಡಲು ಮೂವರನ್ನು ಹೈರ್‌ ಮಾಡಿದ ಗೆಳತಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ
ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?