ಬೆಳಗಾವಿ: ಸೀರೆ ಕದಿಯುತ್ತಿದ್ದ ಖತರ್ನಾಕ್ ಲೇಡಿ ಕಳ್ಳಿಯರ ಗ್ಯಾಂಗ್‌ ಅರೆಸ್ಟ್‌

By Kannadaprabha News  |  First Published Nov 11, 2023, 9:12 AM IST

ಖಡೇಬಜಾರ್ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದು ಸೀರೆ ಕಳ್ಳರಿಗಾಗಿ ಬಲೆ ಬೀಸಿದ್ದರು. ಈ ಕುರಿತು ನಗರದ ಖಡೇಬಜಾರ ಪೊಲೀಸ್‌ ಠಾಣಯಲ್ಲಿ ಪ್ರಕರಣ ದಾಖಲಾಗಿದೆ.


ಬೆಳಗಾವಿ(ನ.11): ಸೀರೆ ಖರೀದಿಸುವ ಗ್ರಾಹಕರ ಸೋಗಿನಲ್ಲಿ ಬಟ್ಟೆ ಅಂಗಡಿಗೆ ಆಗಮಿಸಿದ್ದ ಖತರ್ನಾಕ್ ಲೇಡಿ ಕಳ್ಳಿಯರ ಗ್ಯಾಂಗ್‌ ಕೈಚಳಕ ತೋರಿಸಿ ಹಾಡಹಗಲೇ ಲಕ್ಷಾಂತರ ರೂ. ಮೌಲ್ಯದ ಸೀರೆಗಳನ್ನು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ನಗರ ಪೊಲೀಸರು ಆಂಧ್ರಪ್ರದೇಶದಲ್ಲಿ 8 ಜನರನ್ನು ಬಂಧಿಸಿ ಸುಮಾರು ₹ 10.90 ಲಕ್ಷ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ.

ಆಂಧ್ರಪ್ರದೇಶ ಮೂಲದ ಸುನಿತಾ ಚಂದ್ರಶೇಖರಬಾಬು (45), ಚಾಂದಲಾ ಕನಕದುರ್ಗ (36), ರಾಣಿ ಮಟ್ಟಪತ್ರಿ (33), ದೇವರಕೊಂಡ ಮಣಿ (39), ಮೆಚರಪು ರಜನಿ (30), ಪೊನ್ನ ಚುಕ್ಕಮ್ಮ (50), ಕನಮುರಿ ವೆಂಕಟೇಶ್ವರರಾವ್ (41) ಹಾಗೂ ಉಸುರುಗಂಟಿ ವೆಂಕಟೇಶ್ವರಲು (34) ಬಂಧಿತರು. ಬಂಧಿತರನ್ನು ವಿಚಾರಣೆ ನಡೆಸಿದ ಪೊಲೀಸರು ಲೇಡಿ ಗ್ಯಾಂಗ್ ನಡೆಸಿದ ಕಳ್ಳತನದ ಕೃತ್ಯಗಳನ್ನು ಬಾಯ್ಬಿಡಿಸಿದ್ದಾರೆ. 

Latest Videos

undefined

ಮಂಡ್ಯ ಜಿಲ್ಲೆಯನ್ನು ಬೆಚ್ಚಿಬೀಳಿಸಿದ ಅಪ್ರಾಪ್ತೆಯ ಗ್ಯಾಂಗ್‌ರೇಪ್, ಮೂವರು ಕಿರಾತಕರು ಬಂಧನ

ಬೆಳಗಾವಿ ನಗರದ ವಿರುಪಾಕ್ಷಿ ಸೀರೆ ಅಂಗಡಿಯಲ್ಲಿ ಸುಮಾರು ₹1,40,700 ಮೌಲ್ಯದ ಕಾಂಚಿಪುರಂ ಸೀರೆಗಳು ಜತೆಗೆ ಇದಕ್ಕೂ ಮೊದಲು ಮೈಸೂರಿನ ಯುವರಾಜ ಸಾರಿ ಸೆಂಟರ್‌ನಲ್ಲಿ ₹ 2.5ಲಕ್ಷ ಮೌಲ್ಯದ ಸೀರೆಗಳನ್ನು ಕಳ್ಳತನ ಮಾಡಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ. ಕೃತ್ಯಕ್ಕೆ ಉಪಯೋಗಿಸಿದ ₹ 7 ಲಕ್ಷ ಮೌಲ್ಯದ ಕಾರು ಹಾಗೂ ₹3,90,700 ಮೌಲ್ಯದ ಬೆಲೆಬಾಳುವ ಸೀರೆ ಸೇರಿದಂತೆ ಒಟ್ಟು ₹ 10,90,700 ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣದ ಹಿನ್ನೆಲೆ: 

ನಗರದ ಖಡೇ ಬಜಾರ್ ನಲ್ಲಿರುವ ವಿರುಪಾಕ್ಷಿ ಬಟ್ಟೆ ಅಂಗಡಿಗೆ ನ.3ರಂದು ಮಧ್ಯಾಹ್ನ 1.21ರ ಸುಮಾರಿಗೆ ಬಂದ ಕಳ್ಳಿಯರ ಗ್ಯಾಂಗ್ ಮಾಡಿದ ಕಳ್ಳತನದ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಅಂದಾಜು ಎರಡು ಲಕ್ಷ ಮೌಲ್ಯದ 8 ಕಾಂಚಿಪುರಂ ಸೀರೆ, 1 ಇಳಕಲ್‌, ರೇಷ್ಮೆ ಸೀರೆ ಕಳ್ಳತನ ಮಾಡಲಾಗಿತ್ತು. ಕೃತ್ಯದಲ್ಲಿ ಭಾಗಿಯಾದವರ ಮುಖಚರ್ಯೆ ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ಗೋಚರವಾಗಿತ್ತು.

ಬೆಂಗಳೂರು: ಅಕ್ರಮ ಸಂಬಂಧ ಪ್ರಶ್ನಿಸಿದ ಪತ್ನಿಯ ಕೊಂದು ಆತ್ಮಹತ್ಯೆ ಕಥೆ ಕಟ್ಟಿದ್ದ ಪತಿ ಸೆರೆ

ಮೊದಲಿಗೆ ಗ್ಯಾಂಗ್‌ನ ಮೂವರು ಮಹಿಳೆಯರು ಮತ್ತು ಓರ್ವ ಪುರುಷ ಅಂಗಡಿಗೆ ಬಂದಿದ್ದು, ಬಳಿಕ ಮೂವರು ಮಹಿಳೆಯರು ಒಳಬಂದಿದ್ದಾರೆ. ಹೀಗೆ ಬಂದವರು ಒಬ್ಬರಿಗೊಬ್ಬರು ಪರಿಚಯ ಇಲ್ಲದವರಂತೆ, ಪ್ರತ್ಯೇಕವಾಗಿ ಸೀರೆಗಳನ್ನು ಚಾಯ್ಸ್ ಮಾಡಲು ಮುಂದಾಗಿದ್ದಾರೆ. ಇದೇ ವೇಳೆ, ಅಂಗಡಿಯ ಸಿಬ್ಬಂದಿ ಗಮನ ಬೇರೆಡೆ ಸೆಳೆದು ಮೂವರು ಮಹಿಳೆಯರು ಅಡ್ಡಲಾಗಿ ನಿಂತಿದ್ದು, ಓರ್ವ ಮಹಿಳೆ ಸೀರೆ ಬಾಕ್ಸ್ ಅನ್ನು ತನ್ನ ಸಿರೆಯೊಳಗೆ ಮುಚ್ಚಿಟ್ಟುಕೊಂಡಿದ್ದಾಳೆ. ಬಳಿಕ ಸೀರೆಗಳು ನಮಗೆ ಇಷ್ಟವಾಗಿಲ್ಲ ಎಂದು ಅಂಗಡಿಯಿಂದ ಕಾಲ್ಕಿತ್ತಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಖಡೇಬಜಾರ್ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದು ಸೀರೆ ಕಳ್ಳರಿಗಾಗಿ ಬಲೆ ಬೀಸಿದ್ದರು. ಈ ಕುರಿತು ನಗರದ ಖಡೇಬಜಾರ ಪೊಲೀಸ್‌ ಠಾಣಯಲ್ಲಿ ಪ್ರಕರಣ ದಾಖಲಾಗಿದೆ.

ನಗರ ಪೊಲೀಸ್‌ ಆಯುಕ್ತ ಎಸ್‌.ಎನ್‌. ಸಿದ್ದರಾಮಪ್ಪ, ಡಿಸಿಪಿಗಳಾದ ರೋಹನ್, ಸ್ನೇಹಾ ಮಾರ್ಗದರ್ಶನದಲ್ಲಿ ಖಡೇಬಜಾರ ಎಸಿಪಿ, ಪೊಲೀಸ್‌ ಇನಸ್ಪೆಕ್ಟರ್‌ ಡಿ.ಪಿ. ನಿಂಬಾಳಕರ, ಪಿಎಸ್‌ಐ ಆನಂದ ಆದಗೊಂಡ, ವಿ.ಚಿನ್ನಸ್ವಾಮಿ, ಸಿಬ್ಬಂದಿ ಎ.ಬಿ.ಶೆಟ್ಟಿ, ಬಿ.ಎಸ್‌. ರುದ್ರಾಪೂರ, ಎಂ.ವಿ.ಅರಳಗುಂಡಿ, ವಿ.ವೈ. ಗುಡಿಮೇತ್ರಿ, ಜಿ.ಪಿ.ಅಂಬಿ ಸೇರಿದಂತೆ ಇತರರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಸಿಬ್ಬಂದಿಯ ಕಾರ್ಯಕ್ಕೆ ಪೊಲೀಸ್ ಆಯುಕ್ತರು ಶ್ಲಾಘಿಸಿ ₹10 ಸಾವಿರ ನಗದು ಬಹುಮಾನ ಘೋಷಿಸಿದ್ದಾರೆ.

click me!