ಯಾದಗಿರಿಯ ಬಾಡಿಯಾಳ ಗ್ರಾಮದ ಪ್ರೇಮಿಗಳು ಒಂದೇ ಜಾತಿ, ಒಂದೇ ಕುಲವಾಗಿದ್ದು, ಇವರಿಬ್ಬರ ಮದುವೆಗೆ ಕುಟುಂಬ ಸದಸ್ಯರು ವಿರೋಧ ವ್ಯಕ್ತಪಡಿಸಿ ಜೀವ ಬೆದರಿಕೆ ಹಾಕಿದ್ದಾರೆ.
ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್
ಯಾದಗಿರಿ (ಮೇ 29): ಪ್ರೀತಿಗೆ ಕಣ್ಣಿಲ್ಲ ಅಂತಾರೆ. ಪ್ರೀತಿ ಎಂಬುದು ಎರಡು ಮನಸ್ಸುಗಳ ಮಧುರ ಭಾವನೆ ಎಂದರ್ಥ. ಇಂತಹ ಪ್ರೀತಿ ಯಾದಗಿರಿ ತಾಲೂಕಿನ ಬಾಡಿಯಾಳ ಗ್ರಾಮದ ನರಸಮ್ಮ ಹಾಗೂ ದೇವಪ್ಪ ಅವರ ಜೀವನದಲ್ಲಿ ನಡೆದಿದೆ. ನರಸಮ್ಮ ಹಾಗೂ ದೇವಪ್ಪ ಇಬ್ಬರು ಕಳೆದ ಒಂದು ವರ್ಷದಿಂದ ಪ್ರೀತಿಸ್ತಿದ್ದಾರೆ. ಈಗ ಯುವತಿ ನರಸಮ್ಮ ಮನೆಯವರಿಗೆ ಗೊತ್ತಾಗಿ ದೊಡ್ಡ ಜಗಳವೆ ಆರಂಭವಾಗಿದೆ. ಈಗ ದೇವಪ್ಪ ಹಾಗೂ ನರಸಮ್ಮ ಪ್ರೇಮಿಗಳು ರಕ್ಷಣೆಗಾಗಿ ಪೋಲಿಸರ ಮೊರೆ ಹೋಗಿದ್ದಾರೆ.
ಯಾದಗಿರಿ ತಾಲೂಕಿನ ಬಾಡಿಯಾಳ ಗ್ರಾಮದ ಇಬ್ಬರು ಪ್ರೇಮಿಗಳಾದ ದೇವಪ್ಪ ಮತ್ತು ನರಸಮ್ಮ ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿ ಮಾಡ್ತಾ ಇದ್ದರು. ನರಸಮ್ಮ ಅವರ ಮನೆಯಲ್ಲಿ ಈ ಪ್ರೀತಿ-ಪ್ರೇಮದ ವಿಷಯ ಗೊತಾಗ್ತಿದ್ದಂತೆ ಬೇರೆ ಕಡೆ ಮದುವೆ ಮಾಡಲು ಮುಂದಾಗಿದ್ದರು. ಆಗ ಈ ಮದುವೆಯ ವಿಷಯವನ್ನು ತನ್ನ ಪ್ರೀಯಕರ ದೇವಪ್ಪಗೆ ತಿಳಿಸಿದ್ದಾಳೆ. ನಾವಿಬ್ಬರೂ ಬದುಕಿದ್ರೆ ಒಟ್ಟಿಗೆ ಬದುಕೋಣ ಅಂಥ ನಿರ್ಧಾರ ಮಾಡಿದ್ದಾರೆ. ನಂತರ ಇಬ್ಬರು ಪ್ರೇಮಿಗಳು ತಮ್ಮ ಮನೆ ಬಿಟ್ಟು ಬಂದಿದ್ದಾರೆ. ಆದರೆ ಈಗ ಪ್ರೇಮಿಗಳಿಗೆ ಕುಟುಂಬಸ್ಥರಿಂದ ಪ್ರಾಣದ ಭಯ ಎದುರಾಗಿದೆ.
Mysuru-Bengaluru Train: ರೈಲ್ವೆ ಪೊಲೀಸರ ನಿರ್ಲಕ್ಷ್ಯಕ್ಕೆ ರೈಲಿನಲ್ಲೇ ನರಳಿ ಪ್ರಾಣಬಿಟ್ಟ ಪ್ರಯಾಣಿಕ!
ಒಂದೇ ಜಾತಿ, ಒಂದೇ ಊರಿನವರಾದ್ರೂ ಮದುವೆಗೆ ವಿರೋಧ: ದೇವಪ್ಪ ಹಾಗೂ ನರಸಮ್ಮ ಇಬ್ಬರು ಒಂದೇ ಜಾತಿಯವರು, ಒಂದೇ ಗ್ರಾಮದವರು. ಇಬ್ಬರದ್ದು ಅಕ್ಕ-ಪಕ್ಕ ಮನೆಗಳಿವೆ. ಈ ಪ್ರೇಮಿಗಳು ಮದುವೆಯಾಗಬೇಕು ಅಂತ ನಿರ್ಧಾರ ಮಾಡಿ ಮನೆ ಬಿಟ್ಟು ಬಂದಿದ್ದಾರೆ. ಯುವತಿ ನರಸಮ್ಮ ಕುಟುಂಬಸ್ಥರು ಇಬ್ಬರಿಗೆ ಜೀವದ ಬೆದರಿಕೆ ಹಾಕಿದ್ದಾರಂತೆ. ಮದುವೆಯಾದ್ರೆ ನೀವಿಬ್ಬರು ಉಳಿಯುವುದಿಲ್ಲ, ಹೆಂಗ್ ಮದುವೆ ಆಗ್ತಿರೋ ಆಗಿ ಅಂತ ಜೀವದ ಬೆದರಿಕೆ ಹಾಕಿದ್ದು, ಈಗ ಇಬ್ಬರು ಪ್ರೇಮಿಗಳು ದಿಕ್ಕು ತೋಚದ ಪರಿಸ್ಥಿತಿ ಬಂದಿದೆ. ನಮಗೆ ರಕ್ಷಣೆ ನೀಡಿ ಅಂತ ಪೋಲಿಸರ ಮೊರೆ ಹೋಗಿದ್ದಾರೆ.
ಕುರಿ ಕಾಯುವ ವಿಚಾರದ ಜಗಳ ಮದುವೆಗೆ ಅಡ್ಡಿ: ದೇವಪ್ಪ-ನರಸಮ್ಮ ಇವರಿಬ್ಬರು ಮದುವೆ ಆಗಿಯೇ ಆಗ್ತಿವಿ ಅಂತ ಊರು ಬಿಟ್ಟು ಒಂದು ವಾರ ಆಯ್ತು. ಮದುವೆಯಾಗಿಯೇ ಮನೆಗೆ ಹೋಗೋಣ ಅಂತ ನಿರ್ಧಾರ ಮಾಡಿದ್ದಾರೆ. ಈ ದೇವಪ್ಪ ರಾಯಚೂರಿನ ಲಿಂಗಸೂರಿನಲ್ಲಿ ಡಿಪ್ಲೋಮಾ ಓದಿಕೊಂಡಿದ್ದನು. ನಂತರ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದನು. ಯುವತಿ ನರಸಮ್ಮ ಪಿಯುಸಿ ಮುಗಿಸಿದ್ದಾಳೆ. ಬೆಂಗಳೂರಿನಲ್ಲಿದ್ದ ದೇವಪ್ಪ ಊರಿನಲ್ಲಿದ್ದ ನರಸಮ್ಮ ಪೋನ್ ಸಂಪರ್ಕದಲ್ಲಿರ್ತಾರೆ. ಇದರಿಂದ ಇಬ್ಬರ ನಡುವೆ ಪ್ರೀತಿ-ಪ್ರೇಮ ಬಹಳಷ್ಟು ಗಾಢವಾಗಿ ಬೆಳೆದಿದೆ. ಆದ್ರೆ ಯುವತಿ ಕುಟುಂಬಸ್ಥರು ಇವರಿಬ್ಬರ ಮದುವೆಗೆ ಸುಖಾರಾಂ ಒಪ್ಪುತ್ತಿಲ್ಲ. ಯಾಕಂದ್ರೆ ಯುವತಿ ನರಸಮ್ಮ ಕುಟುಂಬಸ್ಥರು ಶ್ರೀಮಂತರಿದ್ದಾರೆ. ದೇವಪ್ಪ ಕುಟುಂಬಸ್ಥರು ಬಡವರಿದ್ದಾರೆ. ಇದಕ್ಕಾಗಿ ನಾವು ಯಾವುದೇ ಕಾರಣಕ್ಕೂ ನಮ್ಮ ಮಗಳನ್ನು ದೇವಪ್ಪನಿಗೆ ಕೊಟ್ಟು ಮದುವೆ ಮಾಡಿಸಲ್ಲ ಅಂತ ಹೇಳಿದ್ದಾರೆ. ಜೊತೆಗೆ ನರಸಮ್ಮ-ದೇವಪ್ಪ ಕುಟುಂಬದ ನಡುವೆ ಕುರಿ ಕಾಯುವ ವಿಚಾರಕ್ಕೆ ಜಗಳ ಆಗಿತ್ತಂತೆ. ಒಂದು ವರ್ಷದ ಹಿಂದೆ ಎರಡು ಕುಟುಂಬಗಳ ನಡುವೆ ಪರಸ್ಪರ ಹೊಡೆದಾಟ ಆಗಿತ್ತು. ಅದೇ ವೈರತ್ವ ಇಬ್ಬರ ಪ್ರೀತಿ, ಮದುವೆ ದೊಡ್ಡ ಕಂಟಕವಾಗಿ ಪರಿಣಮಿಸಿದೆ.
ಆಸ್ತಿ ವಿಚಾರಕ್ಕೆ ತಮ್ಮನಿಗೆ ಚಾಕು ಇರಿದ ಪಾಪಿ ಅಣ್ಣ: ಸ್ಥಳದಲ್ಲಿಯೇ ನರಳಿ ಪ್ರಾಣಬಿಟ್ಟ
ಹೆತ್ತವರ ವಿರುದ್ಧ ಪೋಲಿಸ್ ಮೆಟ್ಟಿಲೇರಿದ ಯುವತಿ: ಯಾದಗಿರಿಯ ಈ ಪ್ರೇಮಿಗಳು ಮದುವೆ ಮಾಡಿಕೊಂಡೆ ಮನೆಗೆ ಹೋಗಲು ನಿರ್ಧರಿಸಿವೆ. ಆದ್ರೆ ಯುವತಿ ಕುಟುಂಬಸ್ಥರು ಕೊಲೆ ಮಾಡುವುದಾಗಿ ಊರಲ್ಲಿ ಹೇಳ್ತಿದ್ದಾರಂತೆ. ಈಗ ಇಬ್ಬರಲ್ಲೂ ಭಯ ಶುರುವಾಗಿದೆ. ಬೇರೆ ದಾರಿಯಿಲ್ಲದೇ, ಯುವತಿ ತನದನ ಹೆತ್ತ ತಂದೆ-ತಾಯಿಯರ ವಿರುದ್ಧ ನೀಡಿದ್ದಾಳೆ. ನಮ್ಮಿಬ್ಬರಿಗೆ ಪೋಲಿಸರು ರಕ್ಷಣೆ ನೀಡಬೇಕೆಂದು ಯಾದಗಿರಿ ಎಸ್ಪಿ ಗೆ ಮನವಿ ಮಾಡಿಕೊಂಡಿದ್ದಾರೆ.