Dangerous Wheeling: ರಸ್ತೆಯಲ್ಲಿ ಅಪಾಯಕಾರಿ ಸ್ಟಂಟ್‌ ಮಾಡ್ತಿದ್ದವರ ಹೆಡೆಮುರಿ ಕಟ್ಟಿದ ಖಾಕಿ ಪಡೆ..!

Published : Mar 12, 2022, 12:29 PM IST
Dangerous Wheeling: ರಸ್ತೆಯಲ್ಲಿ ಅಪಾಯಕಾರಿ ಸ್ಟಂಟ್‌ ಮಾಡ್ತಿದ್ದವರ ಹೆಡೆಮುರಿ ಕಟ್ಟಿದ ಖಾಕಿ ಪಡೆ..!

ಸಾರಾಂಶ

*  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ವಿಡಿಯೋ *  ವ್ಹೀಲಿಂಗ್ ಮಾಡಲು ಬಳಸಿದ್ದ ಐದು ಬೈಕ್‌ ಜಪ್ತಿ *  ರಸ್ತೆಯಲ್ಲಿ ವ್ಹೀಲಿಂಗ್ ಮತ್ತು ಅಪಾಯಕಾರಿ ಸ್ಟಂಟ್ ಮಾಡುತ್ತಿದ್ದ ಯುವಕರು 

ಮಂಗಳೂರು(ಮಾ.12):  ನಗರದ ಹಲವೆಡೆ ಬೈಕ್ ವ್ಹೀಲಿಂಗ್(Wheeling)  ನಡೆಸಿದ್ದ 8 ಮಂದಿಯನ್ನ ಪೊಲೀಸರು ಬಂಧಿಸಿದ ಘಟನೆ ಇಂದು(ಶನಿವಾರ) ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ವಿಡಿಯೋಗಳ ಹಿನ್ನೆಲೆಯಲ್ಲಿ ಮಂಗಳೂರು ನಗರದ ಪೊಲೀಸರು(Police)  ಕಾರ್ಯಾಚರಣೆಗಿಳಿದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಮಂಗಳೂರು ಡಿಸಿಪಿ ದಿನೇಶ್ ಕುಮಾರ್ ನೇತೃತ್ವದ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಗಿತ್ತು. ಒಟ್ಟು ಐದು ಪ್ರಕರಣಗಳನ್ನ ದಾಖಲಿಸಿ ಎಂಟು ಮಂದಿಯನ್ನು ಬಂಧಿಸಲಾಗಿದೆ(Arrest) . ಬಂಧಿತರನ್ನ ಇಲ್ಯಾಸ್, ಸುಹೈಲ್,‌ ಅಬೂಬಕ್ಕರ್ ಸಿದ್ದಿಕ್, ಸಫ್ವಾನ್, ಶರೀಫ್, ತೌಸಿಫ್, ಅನೀಝ್, ಕಿಶನ್ ಶೆಟ್ಟಿ ಎಂದು ಗುರುತಿಸಲಾಗಿದೆ. 

Wheeling Craze: ಅಮಲಲ್ಲಿ ವ್ಹೀಲಿಂಗ್‌ ಮಾಡಲು ಹೋಗಿ ಆಟೋ ಪಲ್ಟಿ: ಸಾವು

ತೊಕ್ಕೊಟ್ಟು ಫ್ಲೈ ಓವರ್, ಉಳ್ಳಾಲ, ಅಡ್ಯಾರ್, ವಾಮಂಜೂರು ಭಾಗದಲ್ಲಿ ಬಂಧಿತರು ವ್ಹೀಲಿಂಗ್ ಮಾಡುತ್ತಿದ್ದರು. ಬಂಧಿತರಿಂದ ವ್ಹೀಲಿಂಗ್ ಮಾಡಲು ಬಳಸಿದ ಐದು ಬೈಕ್‌ಗಳನ್ನ(Bike)  ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಯುವಕರು ರಸ್ತೆಯಲ್ಲಿ ವ್ಹೀಲಿಂಗ್ ಮತ್ತು ಅಪಾಯಕಾರಿ ಸ್ಟಂಟ್ ಮಾಡುತ್ತಿದ್ದರು. ವ್ಹೀಲಿಂಗ್ ಮಾಡಿದ ವಿಡಿಯೋಗಳನ್ನ ತಾವೇ ಸೋಶಿಯಲ್ ಮೀಡಿಯಾಗಳಲ್ಲಿ(Social Media) ಹಾಕಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಪಾಯಕಾರಿ ಬೈಕ್ ವೀಲಿಂಗ್ ಮಾಡುತ್ತಿದ್ದ ಸವಾರರ ಬಂಧನ!

ಬೆಂಗಳೂರು: ದ್ವಿಚಕ್ರ ವಾಹನಗಳಲ್ಲಿ ರಸ್ತೆಗಳ ಮೇಲೆ ವ್ಹೀಲಿಂಗ್‌ ಮಾಡುತ್ತಿರುವ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿವೆ. ಬೈಕ್‌ ವೀಲಿಂಗ್‌ ಸವಾರನ ಜೀವಕ್ಕೆ ಪಾಯ ತರುವುದಷ್ಟೇ ಅಲ್ಲದೇ ಸಾರ್ವಜನಿಕರ ಅಮೂಲ್ಯಜೀವದ ಜೊತೆ, ಇತರ ವಾಹನ ಸವಾರರ ಜೀವಕ್ಕೂ ಕುತ್ತು ತುರುತ್ತದೆ. ಈಗ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅಪಾಯಕಾರಿ  ಆಗುವ ರೀತಿಯಲ್ಲಿ ವೀಲಿಂಗ್ ಮಾಡುತ್ತಿದ್ದ ದ್ವಿ ಚಕ್ರ ವಾಹನ ಸವಾರರನ್ನು ಪೋಲಿಸರು ಪ್ರಕರಣ ದಾಖಲಿಸಿ ವಾಹನ ಜಪ್ತಿ ಮಾಡಿದ ಘಟನೆ ಫೆ. 05 ರಂದು ನಡೆದಿತ್ತು.  

ಕೆ.ಜಿ.ಹಳ್ಳಿ ಸಂಚಾರಿ ಪೊಲೀಸರ ಕಾರ್ಯಾಚರಣೆ ನಡೆಸಿದ್ದು ಅಪಾಯಕಾರಿ ಬೈಕ್ ವೀಲಿಂಗ್ ಮಾಡುತ್ತಿದ್ದ ಯುವಕನನ್ನು ಬಂಧಿಸಿದ್ದರು. ನಗರದ ಗೋವಿಂದ ಪುರ ಜಂಕ್ಷನ್ ಬಳಿ ಯುವಕ ವೀಲಿಂಗ್ ಮಾಡು ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿತ್ತು.  ಈ ಬೆನ್ನಲ್ಲೇ ಕಾರ್ಯಾಚರಣೆ ನಡೆಸಿದ ಪೊಲೀಸರು  ಆರೋಪಿ ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ದಾರೆ. ಜತೆಗೆ ವೀಲಿಂಗ್ ಮಾಡಿದ್ದ ದ್ವಿ ಚಕ್ರ ವಾಹನ ಕೂಡ ಜಪ್ತಿ ಮಾಡಲಾಗಿದೆ. ಕೆ.ಜಿ.ಹಳ್ಳಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ಇನ್ನು ಹಲಸೂರು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ವೆಬ್ ಜಂಕ್ಷನ್ ಬಳಿ  ಅಪಾಯಕಾರಿ ಆಗುವ ರೀತಿಯಲ್ಲಿ ವೀಲಿಂಗ್ ಮಾಡುತ್ತಿದ್ದ ದ್ವಿ ಚಕ್ರ ವಾಹನ ಸವಾರನನ್ನು ಮತ್ತು ವಾಹನವನ್ನು ಜಪ್ತಿ ಪಡಿಸಿಕೊಂಡು ಪ್ರಕರಣವನ್ನು ದಾಖಲಿಸಲಾಗಿದೆ. ಈ ಬಗ್ಗೆ ಬೆಂಗಳುರು ಸಂಚಾರ ಪೂರ್ವ ವಿಭಾಗ ಟ್ವೀಟರ್‌ನಲ್ಲಿ ಮಾಹಿತಿ ನೀಡಲಾಗಿದ್ದು ವಾಹನ ಜಪ್ತಿ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದರು.

ಕೈಯಲ್ಲಿ ತಲ್ವಾರ್ ಹಿಡಿದು ಪುಂಡರ ವ್ಹೀಲಿಂಗ್; ಬೆಚ್ಚಿ ಬಿದ್ದ ಚನ್ನರಾಯಪಟ್ಟಣ ಜನ!

ವ್ಹೀಲಿಂಗ್‌ ಮಾಡುವವರಿಗೆ ವಾರ್ನಿಂಗ್: 

"ಕೆ.ಜಿ. ಹಳ್ಳಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಗೋವಿಂದಪುರ ಜಂಕ್ಷನ್ ಬಳಿ ಮಾನವ ಜೀವಕ್ಕೆ ಅಪಾಯಕಾರಿ ಆಗುವ ರೀತಿಯಲ್ಲಿ ವೀಲಿಂಗ್ ಮಾಡುತ್ತಿದ್ದ ದ್ವಿ ಚಕ್ರ ವಾಹನ ಸವಾರನನ್ನು ಮತ್ತು ವಾಹನವನ್ನು ಜಪ್ತಿ ಪಡಿಸಿಕೊಂಡು ಪ್ರಕರಣವನ್ನು ದಾಖಲಿಸಲಾಯಿತು." ಹಾಗೂ "ಹಲಸೂರು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ವೆಬ್ ಜಂಕ್ಷನ್ ಬಳಿ ಮಾನವ ಜೀವಕ್ಕೆ ಅಪಾಯಕಾರಿ ಆಗುವ ರೀತಿಯಲ್ಲಿ ವೀಲಿಂಗ್ ಮಾಡುತ್ತಿದ್ದ ದ್ವಿ ಚಕ್ರ ವಾಹನ ಸವಾರನನ್ನು ಮತ್ತು ವಾಹನವನ್ನು ಜಪ್ತಿ ಪಡಿಸಿಕೊಂಡು ಪ್ರಕರಣವನ್ನು ದಾಖಲಿಸಲಾಯಿತು." ಎಂದು ಮಾಹಿತಿ ಪೊಲೀಸರು ಮಾಹಿತಿ ನೀಡಿದ್ದರು. 

ಟ್ವೀಟರ್‌ನಲ್ಲಿ ""If You Are Wheeling, We're Waiting to Book Case Against You". (ನೀವು ವ್ಹೀಲಿಂಗ್ ಮಾಡುತ್ತಿದ್ದರೆ, ನಿಮ್ಮ ವಿರುದ್ಧ ಕೇಸ್ ಬುಕ್ ಮಾಡಲು ನಾವು ಕಾಯುತ್ತಿದ್ದೇವೆ) ಎಂದು ಹೇಳುವ ಮೂಲಕ ಅಪಾಯಕಾರಿ ಬೈಕ್‌ ಸ್ಟಂಟ್‌ ಮಾಡುವವರಿಗೆ ಖಡಕ್‌ ವಾರ್ನಿಂಗ್ ಕೊಟ್ಟಿದ್ದರು.  
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!
ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!