* ಕೆಎಸ್‌ಆರ್‌ಟಿಸಿ ಬಸ್ ಗಳ ನಡುವೆ ಮುಖಾಮುಖಿ ಡಿಕ್ಕಿ
* ಏಳು ಪ್ರಯಾಣಿಕರಿಗೆ ಗಂಭೀರ ಗಾಯ
* ಶಿರಸಿ ಸರ್ಕಾರಿ ಆಸ್ಪತ್ರೆಗೆ ಗಾಯಾಳುಗಳು ದಾಖಲು
ಕಾರವಾರ/ ಶಿರಸಿ( ಮೇ 13) ಸಾರಿಗೆ ಸಂಸ್ಥೆಯ (KSRTC) ಎರಡು ಬಸ್ ಗಳ ಮಧ್ಯೆ ಅಪಘಾತ (Road Accident) ಸಂಭವಿಸಿ ಏಳು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ. ಶಿರಸಿ ತಾಲೂಕಿನ ರಾಗಿಹೊಳ್ಳಿ ಬಳಿ ನಡೆದ ಘಟ
ಆಪತ್ ಕಾಲದಲ್ಲಿ ಡಿ.ಎ.ಆರ್. ಪೊಲೀಸ್ ವಾಹನ ನೆರವಿಗೆ ಬಂದಿದೆ. ಎಲ್ಲಾ ಗಾಯಾಳುಗಳನ್ನು ಡಿ.ಎ.ಆರ್ ಪೊಲೀಸ್ ವ್ಯಾನ್ ಮೂಲಕ ಶಿರಸಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಣಾಪಾಯದಿಂದ ಪ್ರಯಾಣಿಕರು ಪಾರಾಗಿದ್ದಾರೆ. ಶಿರಸಿ (Sirsi) ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ. ಈರಯ್ಯ ಸ್ಥಳಕ್ಕೆ ಪರಿಶೀಲನೆ ನಡೆಸಿದ್ದಾರೆ.
undefined
ಸಾವಿಗೀಡಾದ ಸಂಸದರ ಪುತ್ರ: ಭೀಕರ ಅಪಘಾತವೊಂದರಲ್ಲಿ ತಮಿಳುನಾಡಿನ ಸಂಸದರೊಬ್ಬರ ಪುತ್ರ ದಾರುಣವಾಗಿ ಸಾವನ್ನಪ್ಪಿದ್ದರು. ತಮಿಳುನಾಡಿನ ಡಿಎಂಕೆ ಸಂಸದ(DMK MP) ಎನ್‌ಆರ್ ಎಲಂಗೋ (NR Elango) ಅವರ ಪುತ್ರ ರಾಕೇಶ್ (Rakesh) ಸಾವನ್ನಪ್ಪಿದ ಯುವಕ. ರಾಕೇಶ್ ಸ್ಥಳದಲ್ಲೇ ಮೃತಪಟ್ಟರೆ, ಆತನ ಸ್ನೇಹಿತ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.
ಲವ್ ಮ್ಯಾರೇಜ್, 23 ಸಲ ಮಚ್ಚು ಬೀಸಿ ಕೊಲ್ಲಲೆತ್ನಿಸಿದ ಪತಿಯ ಮುಖವಾಡ ಬಿಚ್ಚಿಟ್ಟ ಪತ್ನಿ
ಡಿಎಂಕೆ ರಾಜ್ಯಸಭಾ ಸಂಸದ ಎನ್.ಆರ್. ಇಲಾಂಗೋ ಅವರ ಪುತ್ರ ಇಂದು (ಮಾರ್ಚ್ 10) ಮುಂಜಾನೆ ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು. . 22 ವರ್ಷದ ರಾಕೇಶ್ ಅವರು ಸ್ನೇಹಿತನೊಂದಿಗೆ ಪುದುಚೇರಿಗೆ (Puducherry) ತೆರಳುತ್ತಿದ್ದರು. ಈಸ್ಟ್ ಕೋಸ್ಟ್ ರಸ್ತೆಯಲ್ಲಿ ( East Coast Road) (ಇಸಿಆರ್) ಪ್ರಯಾಣಿಸುತ್ತಿದ್ದಾಗ ಚೆನ್ನೈ ಕೊಟ್ಟಕುಪ್ಪಂ (Kottakuppam)ಬಳಿಯ ಕೀಲ್‌ಪುತುಪೇಟೆಯಲ್ಲಿ (Keelputhupet) ಅವರ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿತ್ತು.
ರಸ್ತೆ ವಿಭಜಕಕ್ಕೆ ಗುದ್ದಿದ ಬೈಕ್ ಸವಾರ: ಬೆಂಗಳೂರು ಮಾನ್ಯತಾ ಟೆಕ್‌ಪಾರ್ಕ್ ಬಳಿಯ ರಿಂಗ್ ರಸ್ತೆಯಲ್ಲಿ ರಸ್ತೆ ವಿಭಜಕಕ್ಕೆ ಗುದ್ದಿಕೊಂಡು ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಟ್ಟಿದ್ದ. ಬಾಗಲಗುಂಟೆಯ ರಘುವೀರ್(27) ದಾರುಣ ಸಾವಿಗೀಡಾಗಿದ್ದ.
ಮುಂಜಾನೆ 5.30ರ ಸುಮಾರಿಗೆ ರಘುವೀರ್ ವೇಗವಾಗಿ ದ್ವಿಚಕ್ರ ವಾಹನದಲ್ಲಿ ಹೋಗುವಾಗ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಗುದ್ದಿದ್ದಾರೆ. ಈ ವೇಳೆ ದ್ವಿಚಕ್ರ ವಾಹನ ಸಹಿತ ರಸ್ತೆಗೆ ಬಿದ್ದಿದ್ದರಿಂದ ಹೆಲ್ಮೆಟ್ ಧರಿಸದ್ದರಿಂದ ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವವಾಗಿದೆ. ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಿಸದೇ ರಘುವೀರ್ ಮೃತಪಟ್ಟಿದ್ದರು.
ಅತಿಯಾದ ವೇಗ ಹಾಗೂ ಪಾನಮತ್ತ ಚಾಲನೆಯೇ ಅಪಘಾತ ಕಾರಣ ಎನ್ನಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಈ ಬಗ್ಗೆ ನಿಖರ ಮಾಹಿತಿ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಎರಡೂ ಅಪಘಾತ ಪ್ರಕರಣಗಳ ಸಂಬಂಧ ಹೆಬ್ಬಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿತ್ತು.
ಸಂಚಾರಿ ನಿಯಮ ಪಾಲಿಸಿ: ರಸ್ತೆ ನಿಯಮಗಳನ್ನು( Traffic Rules) ಪಾಲಿಸದೇ ಇದ್ದರೆ ಎಂಥ ಅನಾಹುತಗಳು ಸಂಭವಿಸುತ್ತವೆ ಎನ್ನುವುದಕ್ಕೆ ಈ ಪ್ರಕಣವೇ ಸಾಕ್ಷಿ. ಜೀವದ ಗೆಳೆಯರು ಒಟ್ಟಿಗೆ (Death) ಸಾವನ್ನಪ್ಪಿದ್ದಾರೆ. ಒಂದೇ ಬೈಕ್ ನಲ್ಲಿ(Bike) ನಾಲ್ಕು ಜನ ಪ್ರಯಾಣ ಮಾಡಲೆ ಹೋಗಿ ಸಾವಿನ ಮನೆ ಸೇರಿಕೊಂಡಿದ್ದರು.
ನಿಯಂತ್ರಣ ತಪ್ಪಿದ ಬೈಕ್ ರಸ್ತೆ ಪಕ್ಕದ ಗುಂಡಿಗೆ ಬಿದ್ದು, ಮೂವರು ಯುವಕರು ಸ್ಥಳದಲ್ಲಿಯೇ ಮೃತ ಪಟ್ಟಿದ್ದು ,ಓರ್ವ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾನೆ. ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಪಟ್ಟಣದ ಹೊರವಲಯದ ಹೆದ್ದಾರಿಯಲ್ಲಿ ನಡೆದ ಅಪಘಾತ ನಾಲ್ವರನ್ನು ಬಲಿಪಡೆದಿತ್ತು.