ಮೈಸೂರು ಬೆನ್ನಲ್ಲೇ ಮತ್ತೊಂದು ಭೀಕರ ಅಪಘಾತ, 7 ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು!

By Suvarna NewsFirst Published May 29, 2023, 5:13 PM IST
Highlights

ಶಿವಮೊಗ್ಗ ಹಾಗೂ ಮೈಸೂರಿನಲ್ಲಿ ನಡೆದ ಭೀಕರ ಅಪಘಾತದ ಬೆನ್ನಲ್ಲೇ ಮತ್ತೊಂದು ಆ್ಯಕ್ಸಿಡೆಂಟ್ ನಡೆದಿದೆ. ಸ್ಕಾರ್ಪಿಯೋ ಕಾರು ಅಪಘಾತದಿಂದ 7 ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಗುವ್ಹಾಟಿ(ಮೇ.29): ಮೇ ತಿಂಗಳ ಅಂತ್ಯದ ಸೋಮವಾರ ಕರಾಳ ದಿನವಾಗಿ ಮಾರ್ಪಟ್ಟಿದೆ. ಮೈಸೂರು, ಶಿವಮೊಗ್ಗದಲ್ಲಿ ಭೀಕರ ಅಪಘಾತ ಸಂಭವಿಸಿ ಹಲವರು ಮೃತಪಟ್ಟಿದ್ದಾರೆ. ಇದರ ಬೆನ್ನಲ್ಲೇ 10 ಮಂದಿ ಪ್ರಯಾಣಿಸುತ್ತಿದ್ದ ಮಹಿಂದ್ರ ಸ್ಕಾರ್ಪಿಯೋ ಕಾರು ನಿಯಂತ್ರಣ ಕಳೆದುಕೊಂಡು ಪಿಕ್ ಅಪ್ ಟ್ರಕ್‌ಗೆ ಡಿಕ್ಕಿಯಾದ ಘಟನೆ ಅಸ್ಸಾಂನ ಗುವ್ಹಾಟಿಯಲ್ಲಿ ನಡೆದಿದೆ. ಈ ಅಪಘಾತದಲ್ಲಿ ಕಾರಿನಲ್ಲಿದ್ದ 10 ಮಂದಿ ಪೈಕಿ 7 ಎಂಜಿನನಿಯರಿಂಗ್ ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನುಳಿದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇತ್ತ ಸ್ಕಾರ್ಪಿಯೋ ಡಿಕ್ಕಿಯಿಂದ ಟ್ರಕ್‌ನಲ್ಲಿದ್ದ ಮೂವರು ಗಾಯಗೊಂಡಿದ್ದಾರೆ. ಒಟ್ಟು 6 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇಂದು (ಮೇ.29)ಬೆಳಗ್ಗೆ ಗುವ್ಹಾಟಿ ನಗರದ ಜಾಲುಕ್‌ಬರಿ ಫ್ಲೈಓವರ್ ಬಳಿ ಅಪಘಾತ ನಡೆದಿದೆ. ಮಹೀಂದ್ರ ಸ್ಕಾರ್ಪಿಯೋ ಕಾರಿನಲ್ಲಿ ಮಿತಿಗಿಂತ ಹೆಚ್ಚಿನ ಮಂದಿಯನ್ನು ತುಂಬಿಕೊಂಡು ಅತೀವೇಗವಾಗಿ ಸಾಗಿದ್ದಾರೆ. 10 ಎಂಜಿನಿಯರಿಂಗ್ ವಿದ್ಯಾರ್ಥಿಗಳ ಸ್ಕಾರ್ಪಿಯೋ ಕಾರು ಫ್ಲೈಓವರ್ ಬಳಿ ವೇಗ ಮತ್ತಷ್ಟು ಹೆಚ್ಚಾಗಿದೆ. ಇದರ ಪರಿಣಾಮ ಕಾರು ನಿಯಂತ್ರಣ ಕಳೆದುಕೊಂಡಿದೆ. 

Mysuru Road Accident: ಟಿ.ನರಸೀಪುರದಲ್ಲಿ ಭೀಕರ ರಸ್ತೆ ಅಪಘಾತ, ಬಳ್ಳಾರಿಯ 10 ಮಂದಿ ಬಲಿ!

ಅತೀ ವೇಗ ಜೊತೆಗೆ ಮಿತಿಗಿಂತ ಹೆಚ್ಚಿನ ಮಂದಿ ಕಾರಿನಲ್ಲಿದ್ದ ಇದ್ದ ಕಾರರಣ ಕಾರು ನಿಯಂತ್ರಣಕ್ಕೆ ಸಿಕ್ಕಿಲ್ಲ. ಇದರ ಪರಿಣಾಮ ಕಾರು ರಸ್ತೆಯ ಡಿವೈಡರ್‌ಗೆ ಡಿಕ್ಕಿ ಹೊಡೆದು, ನೇರವಾಗಿ ಮತ್ತೊಂದು ಬದಿಯಿಂದ ಬರುತ್ತಿದ್ದ ಪಿಕ್ ಅಪ್ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ವೇಗದಿಂದ ಕಾರು ಪಲ್ಟಿಯಾಗಿ ನಜ್ಜುಗುಜ್ಜಾಗಿದೆ. ಇತ್ತ ಪಿಕ್ಅಫ್ ಟ್ರಕ್ ಕೂಡ ಪುಡಿ ಪುಡಿಯಾಗಿದೆ.10 ವಿದ್ಯಾರ್ಥಿಗಳ ಪೈಕಿ 7 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ದಿಬ್ರುಗ್‌ನ ಮೊನ್ ಬುರಾ, ಶಿವಸಾಗರ್ ವಲಯದ ಕೌಶಿಕ್ ಮೊಹನ್, ಗುವ್ಹಾಟಿಯ ಅರಿಂದಮ್ ಭುವಾಲ್,  ಗುವ್ಹಾಟಿಯ ನಿಯೋರ್ ದೆಕಾ, ನಾಗೌಂವ್‌ನ ಉಪಾಂಗ್ಶು ಶರ್ಮಾ, ಮಜುಲಿಯ ಭುಯಾನ್ ಹಾಗೂ ಮಂಗೋಲ್ಡಿಯ ವಲಯದ ಕೌಶಿಕ್ ಬುರಾ ಎಂದು ಗುರುತಿಸಿಲಾಗಿದೆ.  

ಶಿವಮೊಗ್ಗದಲ್ಲಿ ಭೀಕರ ರಸ್ತೆ ಅಪಘಾತ, ತಲೆಯ ಮೇಲೆ ಟಿಪ್ಪರ್ ಹರಿದು 15 ವರ್ಷದ ವಿದ್ಯಾರ್ಥಿನಿ ಸಾವು

ಸ್ಕಾರ್ಪಿಯೋ ಕಾರಿನಲ್ಲಿದ್ದ ಇತರ ಮೂವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಇತ್ತ ಪಿಕ್ ಅಪ್ ವಾಹನದಲ್ಲಿದ್ದ ಮೂವರು ಕೂಡ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಗವ್ಹಾಟಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಕುರಿತು ಆಘಾತ ವ್ಯಕ್ತಪಡಿಸಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ, ಸಂತಾಪ ಸೂಚಿಸಿದ್ದಾರೆ. ಯುವ ಸಮೂಹ ಹಾಗೂ ಅತ್ಯಮೂಲ್ಯ ಜೀವಗಳು ಅಪಘಾತದಲ್ಲಿ ಮಡಿದ ಸುದ್ದಿಕೇಳಿ ತೀವ್ರ ನೋವಾಗಿದೆ. ಮೃತರ ಕುಟುಂಬಕ್ಕೆ ಸಂತಾಪಗಳು. ಈಗಾಗಲೇ ಮಡಿಕಲ್ ಕಾಲೇಜು ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಗಾಯಳುಗಳಿಗೆ ಎಲ್ಲಾ ರೀತಿಯ ಚಿಕಿತ್ಸೆಗೆ ಸೂಚಿಸಲಾಗಿದೆ ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. 

click me!