ಬೆಳಗಾವಿ ನಗರದಲ್ಲಿ ಆಸ್ತಿ ವಿಚಾರಕ್ಕೆ ಸ್ವಂತ ತಮ್ಮನಿಗೆ ಅಣ್ಣನೇ ಚಾಕು ಇರಿದು ಕೊಲೆ ಮಾಡಿರುವ ದುರ್ಘಟನೆ ನಡೆದಿದೆ.
ಬೆಳಗಾವಿ (ಮೇ 29): ಹುಟ್ಟುತ್ತಾ ಅಣ್ಣತಮ್ಮಂದಿರು, ಬೆಳೆಯುತ್ತಾ ದಾಯಾದಿಗಳು ಎಂಬ ಮಾತಿಗೆ ಈ ಘಟನೆ ಸಾಕ್ಷಿ ಎಂಬಂತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ತಂದೆ ಕಟ್ಟಿಸಿದ ಮಳಿಗೆಯ ಬಾಡಿಗೆ ಸಂಗ್ರಹಣೆ ವಿಚಾರವಾಗಿ ವೈಮನಸ್ಸು ಬಂದಿದ್ದ ಅಣ್ಣನೇ ತಮ್ಮನಿಗೆ ಚಾಕು ಇರಿದು ಕೊಲೆ ಮಾಡಿರುವ ದುರ್ಘಟನೆ ಬೆಳಗಾವಿ ಜಿಲ್ಲೆಯ ಹೊಸೂರು ಬಸವಣ ಗಲ್ಲಿಯಲ್ಲಿ ನಡೆದಿದೆ.
ಆಸ್ತಿ ವಿವಾದ ಹಿನ್ನೆಲೆ ಚಿಕ್ಕಪ್ಪನ ಮಗನನ್ನೇ ಹತ್ಯೆಗೈದ ಪಾಪಿ ಅಣ್ಣನ ಕೃತ್ಯದಿಂದ ಇಡೀ ಕುಟುಂಬವೇ ಆಕ್ರಂದನದಲ್ಲಿ ಮುಳುಗಿದೆ. ಬೆಳಗಾವಿಯ ನಗರದಲ್ಲಿ ನಿನ್ನೆ ಮಧ್ಯಾಹ್ನ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಗರದ ಹೊಸೂರು ಬಸವಣಗಲ್ಲಿಯಲ್ಲಿ ಅಣ್ಣ ಅಭಿಜಿತ್ ಜಾಧವ್ ತನ್ನ ಚಕ್ಕಪ್ಪನ ಮಗನಾದ ಮಿಲಿಂದ್ ಜಾಧವ್ (31) ಗೆ ಚಾಕು ಇರುದು ಕೊಲೆ ಮಾಡಿದ್ದಾನೆ. ಆರೋಪಿ ಅಭಿಜಿತ್ ಜಾಧವ್ ವಶಕ್ಕೆ ಪಡೆದ ಪೊಲೀಸರು.
undefined
ಟೈರ್ ಸ್ಪೋಟಗೊಂಡು ಲಾರಿಗೆ ಡಿಕ್ಕಿ ಹೊಡೆದ ಕಾರು: ಮಕ್ಕಳು ಸೇರಿ 6 ಮಂದಿ ಸಾವು
ಮಿಲಿಂದ್, ಅಭಿಜಿತ್ ಕುಟುಂಬ ಮಧ್ಯೆ ಆಸ್ತಿ ವಿವಾದವಿತ್ತು. ಈ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ. ಕುಟುಂಬದ ಆಸ್ತಿಯಲ್ಲಿ ಒಂದು ಮಳಿಗೆಯನ್ನು ಸ್ವೀಟ್ ಮಾರ್ಟ್ ನಡೆಸಲು ಬಾಡಿಗೆ ನೀಡಲಾಗಿತ್ತು. ಬಾಡಿಗೆ ಪಡೆಯುವ ವಿಚಾರಕ್ಕೆ ಮಿಲಿಂದ್, ಅಭಿಜಿತ್ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿತ್ತು. ನಿನ್ನೆ ಮಧ್ಯಾಹ್ನ ಮನೆಯಲ್ಲಿದ್ದ ಮಿಲಿಂದ್ ತೊಡೆಗೆ ಅಭಿಜಿತ್ ಚಾಕುವಿನಿಂದ ಇರಿದಿದ್ದನು. ಇದರಿಂದ ತೀವ್ರ ರಕ್ತಸ್ರಾವ ಉಂಟಾಗುತ್ತಿದ್ದ ಮಿಲಿಂದ್ ಜಾಧವ್ ಸ್ಥಳದಲ್ಲಿಯೇ ನರಳಾಡಿ ಸಾವನ್ನಪ್ಪಿದ್ದಾರೆ. ಈ ಘಟನೆ ಕುರಿತು ಜಿಲ್ಲೆಯ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉದ್ಯೋಗ ಸಿಗಲಿಲ್ಲವೆಂದು ಪದವೀಧರೆ ಯುವತಿ ಆತ್ಮಹತ್ಯೆ: ಉಡುಪಿ (ಮೇ.29): ವಯಸ್ಸು 22. ಹೆಸರು ಗೌತಮಿ. ಎಂಕಾಂ ಸ್ನಾತಕೋತ್ತರ ಪದವಿ ಮುಗಿಸಿ ಕೆಲಸಕ್ಕಾಗಿ ಅಲೆದಾಡಿದ್ದಾಳೆ. ಬ್ಯಾಂಕಿಂಗ್ ಸೇರಿ ಇತರ ಕೆಲ ಪರೀಕ್ಷೆಗಳನ್ನು ಬರೆದಿದ್ದಾಳೆ. ಆದರೆ ಉದ್ಯೋಗ ಸಿಗಲಿಲ್ಲ. ಇದರಿಂದ ಖಿನ್ನತೆಗೆ ಒಳಗಾದ ಯುವತಿ ಇದೀಗ ಬದುಕು ಅಂತ್ಯಗೊಳಿಸಿದ್ದಾಳೆ. ಉದ್ಯೋಗ ಸಿಗದೆ ಮನನೊಂದಿದ್ದ ಯುವತಿ ಡೆತ್ ನೋಟ್ ಬರೆದಿಟ್ಟು ಬುದುಕಿಗೆ ಪೂರ್ಣವಿರಾಮ ಹಾಕಿದ್ದಾಳೆ. ಇತ್ತ ಯುವತಿ ನಿರ್ಧಾರ ಪೋಷಕರನ್ನು ದುಃಖದ ಸಾಗರದಲ್ಲಿ ಮುಳುಗಿಸಿದೆ.
ಉಡುಪಿ ಜಿಲ್ಲೆಯ ಬೈಂದೂರಿನ ಕಾಲ್ತೋಡು ಗ್ರಾಮದ ನಿವಾಸಿಯಾಗಿರುವ ಗೌತಮಿ, ಎಂಜಿಎಂ ಕಾಲೇಜಿನಲ್ಲಿ ಎಂಕಾಂ ಪದವಿ ಮುಗಿಸಿದ್ದಾಳೆ. ಸ್ನಾತಕೋತ್ತರ ಪದವಿ ಬಳಿಕ ಹಲವು ಕಂಪನಿಗಳು ಉದ್ಯೋಗಾಗಿ ಅರ್ಜಿ ಹಾಕಿದ್ದಳು. ಇತ್ತ ಬ್ಯಾಕಿಂಗ್ ಪರೀಕ್ಷೆಯನ್ನು ಬರೆದಿದ್ದಳು. ಆದರೆ ಯಾವುದರಲ್ಲೂ ಉದ್ಯೋಗ ಸಿಕ್ಕಿರಲಿಲ್ಲ. ಇದು ಗೌತಮಿಯನ್ನು ತೀವ್ರವಾಗಿ ಕುಗ್ಗಿಸಿದೆ. ಖಿನ್ನತೆಗೆ ಜಾರಿಗೆ ಗೌತಮಿ, ಡೆತ್ ನೋಟ್ ಬರೆದಿತ್ತು ಮನೆಯ ಮೊದಲ ಮಹಡಿಯಲ್ಲಿ ನೇಣಿಗೆ ಶರಣಾಗಿದ್ದಾಳೆ.
Bengaluru- ಕಣ್ಣಮುಂದೆಯೇ ಕೆರೆಯಲ್ಲಿ ಮುಳುಗಿದ ಸ್ನೇಹಿತ
ಉತ್ತಮ ಅಂಕ ಗಳಿಸಿದ್ದರೂ ಕೆಲಸ ಪಡೆಯುವಲ್ಲಿ ವಿಫಲ: ವಿದ್ಯಭ್ಯಾಸದಲ್ಲಿ ಮುಂದಿದ್ದ ಗೌತಮಿ ಎಂಕಾಂನಲ್ಲಿ ಉತ್ತಮ ಅಂಕ ಪಡೆದು ತೇರ್ಗಡೆಯಾಗಿದ್ದಾಳೆ. ಆದರೆ ಉದ್ಯೋಗ ವಿಚಾರದಲ್ಲಿ ಗೌತಮಿ ಎಡವಿದ್ದಾಳೆ. ಯುವತಿಯ ಮಾನಸಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಿತ್ತು. ಹೀಗಾಗಿ ಕಳೆದ ಕೆಲ ದಿನಗಳಿಂದ ಯಾರೊಂದಿಗೂ ಹೆಚ್ಚು ಮಾತನಾಡದೇ ಮೌನಿಯಾಗಿದ್ದಳು. ಉದ್ಯೋಗ ಸಿಗದ ಮಗಳನ್ನು ಪೋಷಕರು ಪ್ರತಿ ಭಾರಿ ಸಮಾಧಾನ ಮಾಡಿದ್ದರು. ಆದರೆ ಯುವತಿ ಮಾತ್ರ ಪೋಷಕರ ಮಾತು ಕೇಳದೆ ದುಡುಕಿ ನಿರ್ಧಾರ ತೆಗೆದುಕೊಂಡಿದ್ದಾಳೆ.