ಊರೆಲ್ಲ ಜಾತ್ರೆಯ ಸಂಭ್ರಮದಲ್ಲಿರುವಾಗ ಪತ್ನಿಯಿಂದಲೇ ಪತಿಯ ಹತ್ಯೆ ನಡೆದಿದೆ. ತನ್ನ ಅಪ್ರಾಪ್ತ ಪುತ್ರನ ಜೊತೆಗೂಡಿ ಹೆಂಡತಿ ತನ್ನ ಗಂಡನನ್ನು ಕೊಲೆ ಮಾಡಿದ್ದಾಳೆ
ಬೆಳಗಾವಿ (ಮೇ.29): ಊರೆಲ್ಲ ಜಾತ್ರೆಯ ಸಂಭ್ರಮದಲ್ಲಿರುವಾಗ ಪತ್ನಿಯಿಂದಲೇ ಪತಿಯ ಹತ್ಯೆ ನಡೆದಿದೆ. ತನ್ನ ಅಪ್ರಾಪ್ತ ಪುತ್ರನ ಜೊತೆಗೂಡಿ ಹೆಂಡತಿ ತನ್ನ ಗಂಡನನ್ನು ಕೊಲೆ ಮಾಡಿದ್ದು ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹಳ್ಳೂರು ಗ್ರಾಮದಲ್ಲಿ ಘಟನೆ ನಡೆದಿದೆ. ಭಾನುವಾರ ನಸುಕಿನ ಜಾವ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಚಂದ್ರಕಾಂತ ಮಾವರಕರ್(42) ಕೊಲೆಯಾದ ದುರ್ದೈವಿಯಾಗಿದ್ದಾನೆ. ಸಾವಿತ್ರಿ ಮಾವರಕರ್‌ನಿಂದ ಕೊಲೆಗೈದ ಆರೋಪಿಯಾಗಿದ್ದಾಳೆ.
ಕುಡಿದು ಬಂದು ಪತ್ನಿ ಸಾವಿತ್ರಿ ಜತೆ ಚಂದ್ರಕಾಂತ ಜಗಳ ತಗೆದಿದ್ದ. ಈ ವೇಳೆ ಪತ್ನಿ ಮಗ ಹಾಗೂ ಪತಿಯ ಮಧ್ಯೆ ವಾಗ್ವಾದ ಜೋರಾಗಿಯೇ ನಡೆದಿದೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ. ಸಾವಿತ್ರಿ ಹಾಗೂ ಪುತ್ರ ಚಂದ್ರಕಾಂತ ತಲೆಗೆ ಕಬ್ಬಿನದ ರಾಡ್ ನಿಂದ ಹೊಡೆದಿದ್ದಾಳೆ. ಈ ವೇಳೆ ಸ್ಥಳದಲ್ಲಿಯೇ ಆತ ಕುಸಿದು ಬಿದ್ದಿದ್ದಾನೆ. ಕೂಡಲೇ ಚಂದ್ರಕಾಂತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಸಂಜೆ ಆಸ್ಪತ್ರೆಯಲ್ಲಿ ಚಂದ್ರಕಾಂತ ಅಸುನೀಗಿದ್ದಾನೆ.
ಟಿ.ನರಸೀಪುರದಲ್ಲಿ ಭೀಕರ ರಸ್ತೆ ಅಪಘಾತ, ಪುಟ್ಟ ಕಂದಮ್ಮ ಸೇರಿ
ಘಟನೆ ಸಮಯದಲ್ಲಿ ಹಳ್ಳೂರು ಗ್ರಾಮದಲ್ಲಿ ದ್ಯಾಮವ್ವ ಹಾಗೂ ಮಹಾಲಕ್ಷ್ಮೀ ದೇವಿ ಜಾತ್ರೆ ಸಂಭ್ರಮವಾಗಿತ್ತು. ಪ್ರತಿ 12ವರ್ಷಕ್ಕೊಮ್ಮೆ ಈ ಅದ್ದೂರಿ ಜಾತ್ರೆ ನಡೆಯುತ್ತದೆ. ಜಾತ್ರೆ ಇದೆ ಎಂದು ಚಂದ್ರಕಾಂತ ಪ್ರತೀದಿನ ಕುಡಿದು ಬರುತ್ತಿದ್ದ. ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆದಿದ್ದು, ಪೊಲೀಸರು ಪ್ರಕಣ ದಾಖಲಿಸಿಕೊಂಡಿದ್ದಾರೆ.
ಶಿವಮೊಗ್ಗದಲ್ಲಿ ಭೀಕರ ರಸ್ತೆ ಅಪಘಾತ, ತಲೆಯ ಮೇಲೆ ಟಿಪ್ಪರ್ ಹರಿದು 15 ವರ್ಷದ ವಿದ್ಯಾರ್ಥಿನಿ