Ramanagara: ಬಾಂಗ್ಲಾ ಪ್ರಜೆಗಳ ಬಂಧನ: ಜನರಲ್ಲಿ ಹೆಚ್ಚಿದ ಆತಂಕ

Published : Jul 12, 2022, 11:38 PM IST
Ramanagara: ಬಾಂಗ್ಲಾ ಪ್ರಜೆಗಳ ಬಂಧನ: ಜನರಲ್ಲಿ ಹೆಚ್ಚಿದ ಆತಂಕ

ಸಾರಾಂಶ

ದೇಶದ ಗಡಿ ದಾಟಿ ಅಕ್ರಮವಾಗಿ ಭಾರತಕ್ಕೆ ನುಸುಳಿದ್ದ 7  ಮಂದಿ ಬಾಂಗ್ಲಾ ಪ್ರಜೆಗಳನ್ನು ಇದೀಗ ಪೋಲಿಸರು ವಶಕ್ಕೆ ಪಡೆದಿದ್ದು ಮತ್ತೋರ್ವ ಮಹಿಳೆ ಪೋಲಿಸರಿಗೆ ಚಳ್ಳೆ‌ಹಣ್ಣು ತಿನ್ನಿಸಿ ಎಸ್ಕೇಪ್ ಆಗಿದ್ದಾಳೆ.

ರಾಮನಗರ (ಜು.12): ದೇಶದ ಗಡಿ ದಾಟಿ ಅಕ್ರಮವಾಗಿ ಭಾರತಕ್ಕೆ ನುಸುಳಿದ್ದ 7  ಮಂದಿ ಬಾಂಗ್ಲಾ ಪ್ರಜೆಗಳನ್ನು ಇದೀಗ ಪೋಲಿಸರು ವಶಕ್ಕೆ ಪಡೆದಿದ್ದು ಮತ್ತೋರ್ವ ಮಹಿಳೆ ಪೋಲಿಸರಿಗೆ ಚಳ್ಳೆ‌ಹಣ್ಣು ತಿನ್ನಿಸಿ ಎಸ್ಕೇಪ್ ಆಗಿದ್ದಾಳೆ. ಹೌದು! ರಾಮನಗರದ ಬಸವನಪುರ ಬಳಿಯ ಗ್ರಾರ್ಮೆಂಟ್ಸ್‌ವೊಂದರಲ್ಲಿ ಇವರೆಲ್ಲರೂ ಕೆಲಸ ಮಾಡ್ತಿದ್ದರು, ಪೋಲಿಸರಿಗೆ ಸಿಕ್ಕ ಆ ಒಂದು ಮಾಹಿತಿ ಇದೀಗ ಇವರೆಲ್ಲರೂ ಪೋಲಿಸರ ಅತಿಥಿಯಾಗಿದ್ದಾರೆ. ವಿಶೇಷವೆಂದರೆ, ಈ ಆರೋಪಿಗಳ ಬಳಿ ಕರ್ನಾಟಕ ಸೇರಿದಂತೆ ಓರಿಸ್ಸಾ, ಪಶ್ವಿಮ ಬಂಗಾಳ, ಅಸ್ಸಾಂ ರಾಜ್ಯಗಳ ಆಧಾರ್ ಕಾರ್ಡ್ ಸೇರಿದಂತೆ ಅನೇಕ ದಾಖಲೆಗಳು ಪತ್ತೆಯಾಗಿವೆ. 

ಆರೋಪಿಗಳ ಪೈಕಿ ಸೋಹಿಲ್, ಜೂಲಿಫಸರ್, ಉಜ್ಮಾಲ್ಮಿನಾಜುಲಾ ಹುಸೇನ್, ಮುಸಾಶೇಕ್, ರಹೀಮ್, ಆರಿಪುಲ್ ಇಸ್ಲಾಂ ಇವರನ್ನು ಪೋಲಿಸರು ಬಂಧಿಸಿದ್ದು, ಮತ್ತೋರ್ವ ಮಹಿಳೆ ಎಸ್ಕೇಪ್ ಆಗಿದ್ದಾಳೆ. ಅಂದಹಾಗೆ ಈ ಎಲ್ಲಾ ಬಂಧಿತ ಬಾಂಗ್ಲಾ ಪ್ರಜೆಗಳು ಕಳೆದ ಜೂನ್‌ನಲ್ಲಿ ರಾಮನಗರಕ್ಕೆ ಬಂದಿದ್ದು, ಈ ಹಿಂದೆ ದೊಡ್ಡಬಳ್ಳಾಪುರದ ಹಲವೆಡೆ ಕೆಲಸ ಮಾಡಿದ್ದಾರೆ. ಬಂಧಿತರೆಲ್ಲರೂ ಮೇಲ್ನೋಟಕ್ಕೆ ಕೆಲಸ ಹರಸಿ ಭಾರತಕ್ಕೆ ಬಂದಿದ್ದಾರೆ. ಇವರ ಮೇಲೆ ಯಾವುದೇ ಅಪರಾಧ ಹಿನ್ನಲೆ ಇಲ್ಲವೆಂಬುದು ಕಂಡುಬಂದಿದೆ. ಏಜೆಂಟ್ ಮೂಲಕ 50 ಸಾವಿರ ನೀಡಿ ದೇಶಕ್ಕೆ ಬಂದಿರುವ ಇವರಿಗೆ ಆತನ ಮುಖಚಹರೆ ಕೂಡ ಇವರಿಗೆ ಇಲ್ಲದಂತಾಗಿದೆ. 

ರಾಮನಗರ: 2023ರ ಚುನಾವಣೆಗೆ ಈಗಿನಿಂದಲೇ ಸಿದ್ಧತೆ, ಪಕ್ಷ ಸಂಘಟನೆಗೆ ಮುಂದಾದ ಅನಿತಾ ಕುಮಾರಸ್ವಾಮಿ

ಬಂಧಿತರ ಮೊಬೈಲ್ ಮೂಲಕ ಬಾಂಗ್ಲಾದ ನಂಟು ಪತ್ತೆಯಾಗಿದೆ. ಹೀಗಾಗಿ ಇವರನ್ನು ಬೆಂಗಳೂರಿನಲ್ಲಿನ ಎಫ್‌ಆರ್‌ಆರ್ ಕೇಂದ್ರದ ಮೂಲಕ 2 ತಿಂಗಳೊಳಗೆ ಬಾಂಗ್ಲಾದೇಶದ ಗಡಿಗೆ ತಲುಪಿಸಲಿದೆ. ಬಾಂಗ್ಲಾ ಪ್ರಜೆಗಳ ಗುಂಪಿನಿಂದ ನಾಪತ್ತೆಯಾಗಿರುವ ಮಹಿಳೆಯನ್ನು ಪೋಲಿಸರು ಹುಡುಕಾಟ ನಡೆಸುತ್ತಿದ್ದಾರೆ. ಒಟ್ಟಾರೆ ಮನೆ ಬಾಡಿಗೆ, ಹಾಗೂ ಕೆಲಸ ನೀಡುವ ಮೊದಲು ಹುಷಾರ್. ಆಗಿರಬೇಕಾದ ಪರಿಸ್ಥಿತಿ ಇದ್ದು, ಬಾಂಗ್ಲಾ ದೇಶದ ಈ ಪ್ರಜೆಗಳು ಇದೀಗ ಪತ್ತೆಯಾಗಿದ್ದು ಜನರಲ್ಲಿ ಕೂಡ ಆತಂಕ ಮನೆ ಮಾಡಿದೆ, ಇನ್ನಾದರೂ ಪೋಲಿಸರು ಇಂತವರಿಗೆ ಕಡಿವಾಣ ಹಾಕಬೇಕಾಗಿದೆ.

ಖತರ್ನಾಕ್‌ ಖದೀಮನ ಬಂಧನ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಲಿಗೆ ಮಾಡುತ್ತಿದ್ದ ಖತರ್ನಾಕ್‌ ಆರೋಪಿ ಸೇರಿದಂತೆ ಬಾಲಾಪರಾ​ಧಿಯನ್ನು ನೆಲಮಂಗಲ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ನಗರ ಜಿಲ್ಲೆಯ ಬಾಗಲಗುಂಟೆಯ ಚಂದನ್‌.ಜೆ.(23)ಮತ್ತೋರ್ವ ಬಾಲಾಪರಾದಿ ಬಂಧನವಾಗಿದ್ದು, ರಸ್ತೆ ಬದಿ ವಿಶ್ರಾಂತಿಗಾಗಿ ನಿಲ್ಲುವ ಲಾರಿ, ಇತರೆ ಗೂಡ್ಸ್ ವಾಹನಗಳೇ ಇವರ ಟಾರ್ಗೆಟ್‌ ಆಗಿದ್ದು, ವಾಹನ ಚಾಲಕರಿಗೆ ಮತ್ತು ಕ್ಲೀನರ್‌ಗಳಿಗೆ ಪೆಪ್ಪರ್‌ ಸ್ಪ್ರೆ ಮಾಡಿ ಮೊಬೈಲ್‌ ಮತ್ತು ಹಣವನ್ನು ಸುಲಿಗೆ ಮಾಡುತ್ತಿದ್ದರು ಇದಲ್ಲದೆ ರಸ್ತೆ, ಫ್ಲೈಒವರ್‌ ಬಳಿ ನಿಲ್ಲಿಸಿದ ದ್ವಿಚಕ್ರ ವಾಹನಗಳ ಹ್ಯಾಂಡ್‌ಲಾಕ್‌ ಮುರಿದು ಬೈಕ್‌ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದರು ಎನ್ನಲಾಗಿದೆ. 

ರಾಮನಗರ: 2 ವರ್ಷಗಳ ಬಳಿಕ ದೇವರಹೊಸಹಳ್ಳಿ ಬ್ರಹ್ಮರಥೋತ್ಸವಕ್ಕೆ ಭರದ ಸಿದ್ಧತೆ

ನೆಲಮಂಗಲ ಗ್ರಾಮಾಂತರ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿ ಚಂದನ್‌ ಸೇರಿದಂತೆ ಬಾಲಾಪರಾದಿಯನ್ನು ಬಂಧಿಸಿದ್ದು, ಬಂಧಿತರಿಂದ ಕದ್ದ ಸುಮಾರು 4.5 ಲಕ್ಷ ಮೌಲ್ಯದ 22 ಮೊಬೈಲ್‌ಗಳು ಮತ್ತು 7 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಬಂಧಿತ ಆರೋಪಿ ಚಂದನ್‌.ಜೆ. ಮೇಲೆ ಈಗಾಗಲೇ ತುಮಕೂರು ಗ್ರಾಮಾಂತರ ಪೊಲೀಸ್‌ ಠಾಣೆ ಹಾಗೂ ತಲಘಟ್ಟಪುರ ಪೊಲೀಸ್‌ ಠಾಣೆಯಲ್ಲಿ ವಿವಿಧ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ನೆಲಮಂಗಲ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ