Hassan ರೌಡಿಶೀಟರ್ ಪತ್ನಿಗೆ ಕೈ ಟಚ್ ಮಾಡಿದ್ದಕ್ಕೆ ಅಪ್ರಾಪ್ತನ ಕೊಲೆ

Published : Jul 12, 2022, 11:15 PM IST
Hassan ರೌಡಿಶೀಟರ್ ಪತ್ನಿಗೆ ಕೈ ಟಚ್ ಮಾಡಿದ್ದಕ್ಕೆ ಅಪ್ರಾಪ್ತನ ಕೊಲೆ

ಸಾರಾಂಶ

* ರೌಡಿಶೀಟರ್ ಪತ್ನಿಗೆ ಕೈ ಟಚ್ ಮಾಡಿದ್ದಕ್ಕೆ ಅಪ್ರಾಪ್ತನ ಕೊಲೆ * ರೌಡಿಶೀಟರ್ ರಾಕಿ ಮತ್ತು ಸಹಚರರಿಂದ ಮರ್ಡರ್ * ಹಾಸನ ನಗರದಲ್ಲಿ ನಡೆದಿರುವ ಘಟನೆ

ವರದಿ- ಕೆ.ಎಂ.ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್

ಹಾಸನ, (ಜುಲೈ,12):
ಆಕಸ್ಮಿಕವಾಗಿ ಪತ್ನಿಗೆ ಕೈ ಟಚ್ ಮಾಡಿದ್ದಕ್ಕೆ ಗಂಡ ರೌಡಿಶೀಟರ್, ಅಪ್ರಾಪ್ತನನ್ನು ಕೊಲೆ ಮಾಡಿರು ಅಮಾನುಷ ಘಟನೆ ಹಾಸನದಲ್ಲಿ ನಡೆದಿದೆ. ವಿನಯ್ , ಕೊಲೆಯಾದ ಅಪ್ರಾಪ್ತ. 

ರೌಡಿಶೀಟರ್  ತನ್ನ ಪತ್ನಿ ಹಾಗೂ ಸಹಚರರೊಂದಿಗೆ ಸ್ನೇಹಿತನ ಬರ್ತಡೇ ಪಾರ್ಟಿಗೆ ಅಂತಾ ಹೋಗಿರ್ತಾರೆ, ಪಾರ್ಟಿ ಮುಗಿಸಿ ಲಿಫ್ಟ್ ನಲ್ಲಿ ಬರೋವಾಗ ರೌಡಿಶೀಟರ್ ನ ಪತ್ನಿಗೆ ಅಪ್ರಾಪ್ತ ಯುವಕನೊಬ್ಬನ ಕೈ ಟಚ್ ಆಗುತ್ತೆ.. ಇದೇ ವಿಷಯವನ್ನಿಟ್ಕೊಂಡು ಅಪ್ರಾಪ್ತ ಯುವಕನೊಂದಿಗೆ ಗಲಾಟೆ ಮಾಡ್ಕೋತಾನೆ. ಆ ಅಪ್ರಾಪ್ತ ಯುವಕ ಆ ರೌಡಿ‌ಶೀಟರ್ ಗೆ ಪತ್ನಿ ಮುಂದೆ ಆವಾಝ್ ಹಾಕ್ತಾನೆ. ನಾನೊಬ್ಬ ರೌಡಿಶೀಟರ್ ನನ್ನ ಹೆಂಡತಿ ಮುಂದೆನೇ ಒಬ್ಬ ಅಪ್ರಾಪ್ತ ಹುಡ್ಗ ಮರ್ಯಾದೆ ತೆಗೆದ್ನಲ್ಲ ಅಂತಾ ತನ್ನ ಸಹಚರರೊಂದಿಗೆ ಮನಬಂದಂತೆ ಹಲ್ಲೆ ಮಾಡಿ, ಕೊಂದು ಹಾಕಿದ್ದಾನೆ. ಕೊಂದ ಬಳಿಕ ಮೃತದೇಹವನ್ನ ನದಿಗೆ ಬಿಸಾಡಿ ಎಸ್ಕೇಪ್ ಆಗಿದ್ದಾರೆ. ಇದೀಗ ಅಪ್ರಾಪ್ತ ಬಾಲಕನ ಮೃತದೇಹ ಸಕಲೇಶಪುರದ ಶಿರಾಡಿ ಘಾಟ್ ನಲ್ಲಿ ಸಿಕ್ಕಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ನಡುರಸ್ತೆಯಲ್ಲೇ ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ!

ಲಿಫ್ಟ್ ನಲ್ಲಿ ರೌಡಿಶೀಟರ್ ಹೆಂಡ್ತಿ ಕೈ ಟಚ್ ಆಗಿದ್ದಕ್ಕೆ   ಹಾಸನ ನಗರದಲ್ಲಿ ಮರ್ಡರ್ ನಡೆದಿದೆ. ಜುಲೈ 9 ರ ಶನಿವಾರ ರಾತ್ರಿ ಹಾಸನ ನಗರದ ಬಿಎಂ ರಸ್ತೆಯಲ್ಲಿರುವ ಬಾರ್ ನಲ್ಲಿ ಸ್ನೇಹಿತನ ಬರ್ತ್ ಡೇ ಪಾರ್ಟಿಗೆಂದು ರೌಡಿಶೀಟರ್ ರಾಖಿ, ತನ್ನ ಪತ್ನಿ ಹಾಗೂ ಸಹಚರರೊಂದಿಗೆ ಹೋಗಿದ್ದ, ಪಾರ್ಟಿ ಮುಗಿಸಿ ಬರೋ‌ ವೇಳೆ ಲಿಫ್ಟ್ ನಲ್ಲಿ ತನ್ನ ಹೆಂಡತಿಯ ಕೈಗೆ ಟಚ್ ಮಾಡಿದ್ದನೆಂದು ಅಪ್ರಾಪ್ತ ಯುವಕ ವಿನಯ್ ಎಂಬಾತನೊಂದಿಗೆ ಗಲಾಟೆ ಮಾಡಿಕೊಳ್ತಾರೆ.

ಯುವಕ ರೌಡಿಶೀಟರ್ ರಾಖಿಗೆ ಆವಾಝ್ ಹಾಕಿ ಅಲ್ಲಿಂದ ಹೋಗಿರ್ತಾನೆ, ತನ್ನ ಪತ್ನಿ ಎದುರಿಗೆ ಅವಮಾನ ಮಾಡಿದ ಎಂದು ಸಿಟ್ಟಿಗೆದ್ದ ರಾಖಿ ತನ್ನ ಸಹಚರರೊಂದಿಗೆ ಭಾನುವಾರ ಮನೆಗೆ ಬಂದು ಬಲವಂತವಾಗಿ ಎಳೆದೊಯ್ದು ಹಲ್ಲೆ ಮಾಡಿ, ಚಾಕುವಿನಿಂದ ಇರಿದು ಕೊಂದು ಹಾಕಿದ್ದಾರೆ ಎಂದು ಸಂಬಂಧಿಕರು ಆರೋಪ‌ ಮಾಡಿದ್ದಾರೆ. ನನ್ನ ಮಗನನ್ನ ಕಿಡ್ನಾಪ್‌ ಮಾಡಿ, ಕೊಂದು ಹಾಕಿದ್ದಾರೆ, ನಮಗೆ ನ್ಯಾಯ ಕೊಡಿಸಿ ಅಂತಾ ವಿನಯ್ ಪೋಷಕರು ಆಗ್ರಹಿಸುತ್ತಿದ್ದಾರೆ.

 ಇನ್ನು ಪಬ್‌ನಲ್ಲಿ ರಾಖಿ ಹಾಗೂ ವಿನಯ್ ನಡುವೆ ನಡೆದಿರೋ ಗಲಾಟೆಯ ವಿಡಿಯೋ ವೈರಲ್ ಆಗಿದ್ದು, ಈ ವಿಡಿಯೋ ಹಾಗೂ ತಾಯಿಯ ದೂರನ್ನ ಆಧರಿಸಿ ತನಿಖೆಯನ್ನು ಆರಂಭ‌ ಮಾಡಿರೋ‌ ಪೊಲೀಸರು, ಘಟನೆ ಸಂಬಂಧ ರೌಡಿ‌ಶೀಟರ್ ರಾಖಿ, ಆತನ ಪತ್ನಿ ಸೇರಿ ಎಂಟು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ನೀಡಿರೋ ಮಾಹಿತಿ ಪ್ರಕಾರ ವಿನಯ್ ನನ್ನ ಮರ್ಡರ್ ಮಾಡಿ, ಡೆಡ್ ಬಾಡಿಯನ್ನ ಸಕಲೇಶಪುರ ತಾಲೂಕಿನ ಗುಂಡ್ಯ ಸಮೀಪದ ಕೆಂಪುಹೊಳೆಗೆ ಬಿಸಾಡಿದ್ದಾರೆ. ಮರ್ಡರ್ ಮಾಡಿ ಸುಮಾರು 80 ಕಿಲೋ ಮೀಟರ್ ಹೆಚ್ಚು ದೂರು ಡೆಡ್ ಬಾಡಿಯನ್ನು ತೆಗೆಸುಕೊಂಡು ಹೋಗಿ ಬಿಸಾಡಿದ್ದಾರೆ. ಆರೋಪಿಗಳು ಕೊಟ್ಟಿರೋ ಮಾಹಿತಿಯನ್ನಾಧರಿಸಿ, ಪೊಲೀಸರು ನೆನ್ನೆಯಿಂದ ಮೃತದೇಹ ಪತ್ತೆಗೆ ಕಾರ್ಯಾಚರಣೆ ನಡೆಸಿದ್ರು.

ಇಂದು (ಮಂಗಳವಾರ) ಮಧ್ಯಾಹ್ನ ಮೃತ ದೇಹ ಸಕಲೇಶಪುರ ತಾ ಕೆಂಪುಹೊಳೆ ಬಳಿ ಪತ್ತೆಯಾಗಿದೆ. ಇದೀಗ ಮೃತದೇಹ ಸಿಕ್ಕಿದ್ದು ಕೊಲೆ ಎಂಬುದು ಸಾಭೀತಾದ ಮೇಲೆ ಮೊದಲು ದಾಖಲಾಗಿದ್ದ ನಾಪತ್ತೆ ಪ್ರಕರಣವನ್ನ ಕೊಲೆ ಕೇಸ್ ಆಗಿ ಪರಿವರ್ತಿಸಿ, ಪ್ರಕರಣದ ತನಿಖೆಯನ್ನ ಮುಂದುವರೆಸಿದ್ದೇವೆ ಎಂದು ಹಾಸನ ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.

ಒಟ್ಟಾರೆ ಕುಡಿದ ಮತ್ತಿನಲ್ಲಿ ಆದ ಜಗಳ ಅಷ್ಟಕ್ಕೇ ಮುಗಿಯದೇ ವೈಯಕ್ತಿಕ ವರ್ಚಸ್ಸಿಗೆ ತಿರುಗಿದೆ. ಘಟನೆಯ ಮಾರನೇ ದಿನವೇ  ಕೊಲೆಗೆ ಆಗಿರೋದು ನೋಡಿದ್ರೆ ರೌಡಿಸಂ ಹವಾ ಮೆಂಟೈನ್ ಮಾಡಲು ರೌಡಿ ರಾಕಿ ಅಪ್ರಾಪ್ತನ ಕೊಲೆ ಮಾಡಿದ್ದಾನೆ. 

ರಾಕಿ‌ ಸೇರಿ 8 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ರೌಡಿಸಂ ಸ್ಟೇಟಸ್ ಮೆಂಟೈನ್ ಮಾಡಲು ರಾಕಿ ಒಂದು ಜೀವವನ್ನು ಪಡೆದಿರುವುದು ದುರಂತವೇ ಸರಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು