
ವರದಿ: ವರದರಾಜ್, ದಾವಣಗೆರೆ
ದಾವಣಗೆರೆ (ಜು.12): ಬೆಣ್ಣೆನಗರಿ ಡಿಸಿಆರ್‌ಬಿ ಪೊಲೀಸರು ನಕಲಿ ಬಂಗಾರ ಜಾಲವನ್ನು ಬೇಧಿಸಿ ಆರು ಜನರನ್ನು ಬಂಧಿಸಿದ್ದಾರೆ. ಜುಲೈ 10ರಂದು ಅರುಣ್ ಕುಮಾರ್ ಇವರಿಗೆ ನಮಗೆ ಪಾಯ ತೆಗೆಯುವಾಗ ಬಂಗಾರದ ಬಿಲ್ಲೆಗಳು ಸಿಕ್ಕರುತ್ತವೆ ಇವುಗಳನ್ನು ನಿಮಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತೇವೆ ಎಂದು ಹೇಳಿ ನಂಬಿಸಿ ಬಾತಿ ಗ್ರಾಮದ ಹತ್ತಿರ ಇರುವ ಗೂಡ್ ಶೆಡ್ ಬಳಿ ಮಧ್ಯಾಹ್ನ ಕರೆಸಿಕೊಂಡಿದ್ದಾರೆ.
ಮೊದಲಿಗೆ ಒಂದು ಬಿಲ್ಲೆಯನ್ನು ನೀಡಿ ಇದನ್ನು ಪರೀಕ್ಷೆ ಮಾಡಿಸಿಕೊಂಡು ಬನ್ನಿ ಅಂತಾ ಹೇಳಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯಾಗಿ ಮೋಸ ಮಾಡುವ ಜಾಲ ಇರುತ್ತದೆ ಅಂತಾ ತಿಳಿದು ಬಂದಿದ್ದರಿಂದ ವಾಪಾಸ್ಸು ಬಾತಿಗೆ ಬಂದು ಗಸ್ತಿನಲ್ಲಿದ್ದ ತಮಗೆ ಪರಿಚಯವಿರುವ ಮಲ್ಲಿಕಾರ್ಜುನ ಇವರಿಗೆ ಮಾಹಿತಿಯನ್ನು ತಿಳಿಸಿದ್ದಾರೆ. ನಂತರ ಕಾರ್ಯ ಪ್ರವೃತ್ತಗೊಂಡ ಶ್ರೀ ಬಿ.ಎಸ್.ಬಸವರಾಜ, ಪೊಲೀಸ್ ಉಪಾಧೀಕ್ಷಕರು, ಡಿಸಿಆರ್‌ಬಿ ಘಟಕ, ದಾವಣಗೆರೆ ರವರ ನೇತೃತ್ವದ ಸಿಬ್ಬಂದಿಗಳಾದ ಅಶೋಕ, ಮಜೀದ್, ಆಂಜಿನೇಯ, ಸುರೇಶ, ಬಾಲಾಜಿ, ಮಾರುತಿರವರನ್ನೊಳಗೊಂಡ ಪೊಲೀಸ್ ತಂಡ ಸದರಿ ಪ್ರಕರಣದಲ್ಲಿ ಆರು ಜನರನ್ನು ಬಂಧಿಸಿದ್ದಾರೆ.
Davanagere: ಬೆಣ್ಣೆನಗರಿ ದಾವಣಗೆರೆಯಲ್ಲಿ ಐತಿಹಾಸಿಕ ವಿಶ್ವಕರ್ಮ ಸಮ್ಮೇಳನ
ಆರೋಪಿತರಾದ ಧರ್ಮಪ್ಪ ಕೆ, ಕೆ. ರಸಿಕ, ಎಂ ಹನುಮಂತಪ್ಪ, ಎಂ. ರುದ್ರಪ್ಪ ಸಣ್ಣ ಸುಂಕಪ್ಪ, ಎಂ. ಸಂಜೀವ, ಕರ್ಣ ಇವರುಗಳನ್ನು ದಾವಣಗೆರೆ ಡಿಸಿಆರ್‌ಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿತರಿಂದ 252 ಗ್ರಾಂ ನಕಲಿ ಬಂಗಾರದ ಬಿಲ್ಲೆಗಳು ಮತ್ತು ಕೃತ್ಯಕ್ಕೆ ಬಳಸಿದ ಒಂದು ಮೊಬೈಲ್, 500 ರೂ ನಗದು ಹಣ ಮತ್ತು ಅಸಲಿ ಬಂಗಾರದ ಒಂದು ಬಿಲ್ಲೆಯನ್ನು ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಆರೋಪಿಗಳ ವಿರುದ್ಧ ದಾವಣಗೆರೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ 58/2022, ಕಲಂ- ಕಲಂ 420 ರೆ/ವಿ 149 ಐ.ಪಿ.ಸಿ ರೀತ್ಯಾ ಶ್ರೀ ಪರಮೇಶ್ ಡಿ.ಜಿ ಪಿ.ಎಸ್.ಐ ಇವರು ಪ್ರಕರಣ ದಾಖಲಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ಕಾರ್ಯಾಚರಣೆಯಲ್ಲಿ ಯಶಸ್ವಿಯಾದ ಅಧಿಕಾರಿ ಸಿಬ್ಬಂದಿಗಳಿಗೆ ಮಾನ್ಯ ಪೊಲೀಸ್ ಅಧೀಕ್ಷಕರು ಹಾಗೂ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಪ್ರಶಂಸಿರುತ್ತಾರೆ.
ಕಾಳಿದೇವಿಯ ಅಪಮಾನಕ್ಕೆ ವಿಶ್ವಕರ್ಮ ಮಠಾಧೀಶರು, ಮುಖಂಡರ ಖಂಡನೆ
ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ ಎಸ್ಪಿ ರಿಷ್ಯಂತ್: ಪಾಯ ತಗೆಯುವಾಗ ಬಂಗಾರದ ಬಿಲ್ಲೆಗಳು/ ಬಂಗಾರ ಸಿಕ್ಕಿದೆ ಎಂದು ಯಾರಾದರೂ ನಿಮಗೆ ತಿಳಿಸಿದರೆ ಕೂಡಲೇ ಪೊಲೀಸರ ಗಮನಕ್ಕೆ ತನ್ನಿ. ಸ್ಥಳೀಯ ಪೊಲೀಸರಿಗೆ ಗಮನಕ್ಕೆ, ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡುವ ಮೂಲಕ ನಕಲಿ ಬಂಗಾರದ ವಂಚನೆ ಪ್ರಕರಣಗಳಿಂದ ಸುರಕ್ಷಿತವಾಗಿರಬಹುದು. ನಕಲಿ ಬಂಗಾರದ ವಂಚಕರ ಜಾಲಕ್ಕೆ ಬೀಳದೆ ಸುರಕ್ಷಿತವಾಗಿರಿ ಎಂದು ಪೊಲೀಸ್ ವರಿಷ್ಠಾಧಿಕಾರಿ ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ