
ಉತ್ತರಕನ್ನಡ(ಸೆ.22): ಬೆಳಂಬೆಳಿಗ್ಗೆ ಉದ್ಯಮಿಯನ್ನು ಹೊಡೆದು ಭೀಕರವಾಗಿ ಕೊಲೆಗೈದ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಣಕೊಣ ಗ್ರಾಮದಲ್ಲಿ ಇಂದು(ಭಾನುವಾರ) ಬೆಳಗ್ಗೆ 5.30ರ ವೇಳೆಗೆ ನಡೆದಿದೆ. ಮಹಾರಾಷ್ಟ್ರದ ಪುಣೆಯ ಉದ್ಯಮಿ ವಿನಾಯಕ ನಾಯ್ಕ ಯಾನೆ ರಾಜು (58) ಕೊಲೆಯಾದ ದುರ್ದೈವಿ.
ಬೆಳ್ಳಂಬೆಳಗ್ಗೆ ಕಾರಿನಲ್ಲಿ ಸುಮಾರು ನಾಲ್ಕು ಮಂದಿ ದುಷ್ಕರ್ಮಿಗಳು ಮನೆಯೊಳಗೆ ಹೊಕ್ಕಿ ಏಕಾಏಕಿ ಹಲ್ಲೆ ಮಾಡಿ, ದಂಪತಿಗಳ ಮೇಲೆ ಹರಿತವಾದ ವಸ್ತು ಹೊಂದಿರುವ ರಾಡ್‌ನಿಂದ ಗಂಭೀರವಾಗಿ ಹಲ್ಲೆ ಮಾಡಿದ್ದಾರೆ. ಹರಿತವಾದ ವಸ್ತುವಿದ್ದ ರಾಡಿನ ಏಟಿಗೆ ವಿನಾಯಕ್ ಸ್ಥಳದಲ್ಲೇ ಸಾವು, ಪತ್ನಿ ವೃಶಾಲಿ (52) ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಂಗಳೂರು: ಗೆಳತಿಗಾಗಿ ಬಾಲ್ಯ ಸ್ನೇಹಿತನನ್ನೇ ಇಟ್ಟಿಗೆಯಲ್ಲಿ ಜಜ್ಜಿ ಕೊಲೆಗೈದ..!
ವೃಶಾಲಿಯವರ ತಲೆ ಹಾಗೂ ಕೈಗೆ ದುಷ್ಕರ್ಮಿಗಳು ರಾಡಿನಿಂದ ಹಲ್ಲೆ ನಡೆಸಿದ್ದಾರೆ. ಗಾಯಾಳು ವೃಶಾಲಿ ಅವರನ್ನು ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿದ್ದು ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.
ಕೊಲೆ ಮಾಡಿದ ದುಷ್ಕರ್ಮಿಗಳ ಪತ್ತೆ ಹಾಗೂ ಉದ್ದೇಶ ಇನ್ನೂ ತಿಳಿದುಬಂದಿಲ್ಲ. ಈ ಸಂಬಂಧ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆಯಾದ ವಿನಾಯಕ್ ಅವರು ಪತ್ನಿ ಹಾಗೂ ಪುತ್ರ ಸಮೇತ ಪುಣೆಯಲ್ಲಿ ವಾಸವಾಗಿದ್ದರು. ಕಳೆದ ವಾರ ಗ್ರಾಮ ದೇವರ ಜಾತ್ರೆಗೆಂದು ಬಂದಿದ್ದರು. ಇಂದು ಬೆಳಿಗ್ಗೆ ಪುಣೆಗೆ ಹಿಂತಿರುಗುವುದಾಗಿ ಸ್ನೇಹಿತರಿಗೆ ವಿನಾಯಕ್ ತಿಳಿಸಿದ್ದರಂತೆ. ಆದರೆ ಇಂದು ಬರ್ಬರವಾಗಿ ಕೊಲೆಯಾಗಿದ್ದಾರೆ. ವ್ಯವಹಾರದ ವಿಚಾರದಲ್ಲಿ ಅಥವಾ ಆಸ್ತಿ ವಿಚಾರದಲ್ಲಿ ಕೊಲೆ ಆಗಿದ್ಯಾ ಅನ್ನೋದು ಪೊಲೀಸರ ಮುಂದಿರುವ ಪ್ರಶ್ನೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ