Latest Videos

ಕೊಪ್ಪಳ: ಕೇವಲ 200 ರೂ. ಕೂಲಿ ಹಣಕ್ಕೆ ಬಿತ್ತು ಮಹಿಳೆಯ ಹೆಣ..!

By Girish GoudarFirst Published Jun 25, 2024, 2:27 PM IST
Highlights

ಗ್ರಾಮದಲ್ಲಿ ಸೋಮವಾರ ರಾತ್ರಿ ಕೂಲಿ ಕೇಳುವ ವಿಚಾರಕ್ಕೆ ಮಹಿಳೆಯ ಪತಿ ಹಾಗೂ ಆರೋಪಿ ನಡುವೆ ಸಣ್ಣದಾಗಿ ಗಲಾಟೆ ನಡೆದಿತ್ತು. ಗಲಾಟೆಯ ಮದ್ಯ ಮಹಿಳೆಯ ರೇಣುಕಮ್ಮ ಭಾಗವಹಿಸಿದ್ಳು. ಈ ವೇಳೆ ಸಿಟ್ಟಿಗೆದ್ದ ಆರೋಪಿ ಮಹೇಸ್‌ ಮಹಿಳೆಗೆ ಕಟ್ಟಿಗೆಯಿಂದ ಹಲ್ಲೆ ಮಾಡಿದ್ದನು. ಆರೋಪಿ ಮಹೇಶ್‌ನ ಮನೆ ಬಳಿ ಕುಸಿದು ಬಿದ್ದು ರೇಣುಕಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. 

ಕೊಪ್ಪಳ(ಜೂ.25):  ಕೇವಲ 200 ರೂ.ಗಾಗಿ ಮಹಿಳೆಯನ್ನ ಕೊಲೆಗೈದ ಘಟನೆ ಕೊಪ್ಪಳ ತಾಲೂಕಿನ ನಾಗೇಶನಹಳ್ಳಿ ಗ್ರಾಮದಲ್ಲಿ ನಿನ್ನೆ(ಸೋಮವಾರ) ನಡೆದಿದೆ. 200 ರೂ. ಕೂಲಿಗಾಗಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ರೇಣುಕಮ್ಮ ಕಿಳ್ಳೆಕ್ಯಾತರ (56) ಕೊಲೆಯಾದ ದುರ್ದೈವಿ. 

ನಾಗೇಶನಹಳ್ಳಿ ಗ್ರಾಮದ ಮಹೇಶ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಮೃತ ಮಹಿಳೆಯ ಪತಿ ಅಳ್ಳಪ್ಪ, ಮಹೇಶ್‌ನನ್ನು ಬೆಂಗಳೂರಿಗೆ ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗಿದ್ದ, ಇದರಲ್ಲಿ 200 ರೂಪಾಯಿ ಕೂಲಿ ಬಾಕಿ ಉಳಿದಿತ್ತು. ಬಾಕಿ ಉಳಿದಿದ್ದ 200 ರೂಪಾಯಿ ಕೂಲಿ ಕೊಡುವಂತೆ ನಿನ್ನೆ ಅಳ್ಳಪ್ಪ ಜೊತೆಗೆ ಮಹೇಶ್ ಜಗಳ ತೆಗೆದಿದ್ದನಂತೆ. 

ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಬಾಲ್ಯ ಸ್ನೇಹಿತನ ಕತ್ತು ಕುಯ್ದ ಪಾಪಿ!

ಗ್ರಾಮದಲ್ಲಿ ಸೋಮವಾರ ರಾತ್ರಿ ಕೂಲಿ ಕೇಳುವ ವಿಚಾರಕ್ಕೆ ಮಹಿಳೆಯ ಪತಿ ಹಾಗೂ ಆರೋಪಿ ನಡುವೆ ಸಣ್ಣದಾಗಿ ಗಲಾಟೆ ನಡೆದಿತ್ತು. ಗಲಾಟೆಯ ಮದ್ಯ ಮಹಿಳೆಯ ರೇಣುಕಮ್ಮ ಭಾಗವಹಿಸಿದ್ಳು. ಈ ವೇಳೆ ಸಿಟ್ಟಿಗೆದ್ದ ಆರೋಪಿ ಮಹೇಸ್‌ ಮಹಿಳೆಗೆ ಕಟ್ಟಿಗೆಯಿಂದ ಹಲ್ಲೆ ಮಾಡಿದ್ದನು. ಆರೋಪಿ ಮಹೇಶ್‌ನ ಮನೆ ಬಳಿ ಕುಸಿದು ಬಿದ್ದು ರೇಣುಕಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. 

ಈ ಸಂಬಂಧ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆರೋಪಿ ಮಹೇಶನನ್ನ ಮುನಿರಾಬಾದ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊಲೆ ಮಾಡಿದ ಆರೋಪಿಗೆ ತಕ್ಕ ಶಿಕ್ಷೆಗಾಗಿ ಮೃತ ಮಹಿಳೆಯ ಕುಟುಂಬಸ್ಥರು ಆಗ್ರಹಿಸಿದ್ದಾರೆ. 

click me!