ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಬಾಲ್ಯ ಸ್ನೇಹಿತನ ಕತ್ತು ಕುಯ್ದ ಪಾಪಿ!

By Ravi Janekal  |  First Published Jun 25, 2024, 1:34 PM IST

ಕೊಟ್ಟಿದ್ದ ಸಾಲ ವಾಪಸ್ ಕೇಳಿದ್ದಕ್ಕೆ ಬಾಲ್ಯ ಸ್ನೇಹಿತನೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೀದರ್ ತಾಲೂಕಿನ ಯಾಕತ್ಪುರ್ ಗ್ರಾಮದ ಬಳಿ ನಡೆದಿದೆ. ಮೊಹಮ್ಮದ್ ಸಿರಾಜ್ , ಕೊಲೆಯಾದ ದುರ್ದೈವಿ. ಯಾಸಿನ್ ಕೊಲೆಗೈದ ಆರೋಪಿ. ಇಬ್ಬರೂ ಬಾಲ್ಯ ಸ್ನೇಹಿತರಾಗಿದ್ದಾರೆ. 


ಬೀದರ್ (ಜೂ.25): ಕೊಟ್ಟಿದ್ದ ಸಾಲ ವಾಪಸ್ ಕೇಳಿದ್ದಕ್ಕೆ ಬಾಲ್ಯ ಸ್ನೇಹಿತನೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೀದರ್ ತಾಲೂಕಿನ ಯಾಕತ್ಪುರ್ ಗ್ರಾಮದ ಬಳಿ ನಡೆದಿದೆ.

ಮೊಹಮ್ಮದ್ ಸಿರಾಜ್ , ಕೊಲೆಯಾದ ದುರ್ದೈವಿ. ಯಾಸಿನ್ ಕೊಲೆಗೈದ ಆರೋಪಿ. ಇಬ್ಬರೂ ಬಾಲ್ಯ ಸ್ನೇಹಿತರಾಗಿದ್ದಾರೆ. 

Tap to resize

Latest Videos

undefined

ಬಾಲ್ಯ ಸ್ನೇಹಿತರಾಗಿದ್ದರಿಂದ ಹಿಂದೆ ಮುಂದೆ ಯೋಚಿಸದೇ ಯಾಸೀನ್‌ಗೆ 12 ಲಕ್ಷ ರೂ. ಸಾಲ ನೀಡಿದ್ದ ಸ್ನೇಹಿತ ಸಿರಾಜ್. ಸಾಲ ಪಡೆದ 12 ಲಕ್ಷ ರೂಪಾಯಿ ಪೈಕಿ 11 ಲಕ್ಷ ರೂ. ಮರಳಿ ನೀಡಿದ್ದ ಯಾಸೀನ್. ಆದರೆ ಇನ್ನುಳಿದ 1 ಲಕ್ಷ ರೂ. ಬಾಕಿ ಹಣ ಕೊಡದೇ ಪೀಡಿಸುತ್ತಿದ್ದ. ಪದೇಪದೆ ಕೊಡ್ತೇನೆ ಎಂದು ಹೇಳುತ್ತಿದ್ದವನು ಕೊಡದೇ ಬಾಕಿ ಉಳಿಸಿಕೊಂಡಿದ್ದ ಯಾಸೀನ್ ಇದರಿಂದ ಸಿರಾಜ್‌ಗೆ ತಾಳ್ಮೆ ಕಳೆದುಕೊಂಡು ಯಾಸೀನ್ ಮೇಲೆ ಕೋಪಗೊಂಡಿದ್ದ.

ಆತ್ಮಹತ್ಯೆಗೆ ಶರಣಾದ ನಿರ್ಮಾಪಕ ಸೌಂದರ್ಯ ಜಗದೀಶ್ ಪವಿತ್ರಾಗೆ ₹2 ಕೋಟಿ ನೀಡಿದ್ದರೇ?

ಯಾವಾಗ ಯಾಸೀನ್ ಬಾಕಿ ಹಣ ಕೊಡದ್ದಕ್ಕೆ ಕೋಪಗೊಂಡನೋ ಆಗ ಸಿರಾಜ್ ಸಹ ಹಣ ಕೊಡದೇ ಸ್ನೇಹಿತನನ್ನೇ ಮುಗಿಸಲು ಸ್ಕೆಚ್‌ ಹಾಕಿದ್ದ! ಸರಿ ಇವತ್ತು ದುಡ್ಡು ಕೊಡ್ತಿನಿ ಬಾ ಉಪಾಯವಾಗಿ ಕರೆಸಿಕೊಂಡಿದ್ದ ಆರೋಪಿ. ಇವತ್ತಾದರೂ ದುಡ್ಡು ಕೊಡ್ತಾನಲ್ಲ ಅಂತಾ ಆಸೆಯಿಂದ ಹೋಗಿದ್ದ ಸೀರಾಜ್‌ಗೆ ಇನ್ನೊಂದು ಅರ್ಧ ತಾಸಿಗೆ ಕೊಲೆಯಾಗಿ ಹೋಗ್ತೇನೆ ಸಣ್ಣ ಯೋಚನೆಯೂ ಬರಲಿಲ್ಲ. ಎಷ್ಟಾದರೂ ಬಾಲ್ಯ ಸ್ನೇಹಿತ. ಜಗಳ ಮಾಡಿದ್ದರು ವಾಪಸ್ ಹಣ ಕೊಡುತ್ತಾನೆಂದೇ ಭಾವಿಸಿ ಕರೆದ ಸ್ಥಳಕ್ಕೆ ಹೋಗಿದ್ದ ಸಿರಾಜ್. ಆದರೆ ಅಲ್ಲಿ ನಡೆದಿದ್ದೇ ಬೇರೆ!

ಯಾಸೀನ್ ಹೇಳಿದ ಜಾಗಕ್ಕೆ ಬಂದು ಹಣ ಕೇಳಿದ್ದಾನೆ. ಮೊದಲೇ ಮುಗಿಸಲು ತಯಾರಾಗಿ ಬಂದಿದ್ದವನು ಹಣ ಕೊಡ್ತಾನೆಯೇ? ಯಾಸಿನ್ ದುಡ್ಡು ಕೇಳ್ತಿದ್ದಂತೆ ಸುತ್ತಿಗೆಯಿಂದ ತಲೆಗೆ ಹೊಡೆದಿದ್ದಾನೆ. ಏಕಾಏಕಿ ನಡೆದ ದಾಳಿಗೆ ಕುಸಿದುಬಿದ್ದ ಸಿರಾಜ್‌. ಕುಸಿದುಬಿದ್ದವನ ಕತ್ತುಕುಯ್ದು ಕತೆ ಮುಗಿಸಿಯೇ ಬಿಟ್ಟಿರುವ ಕಿರಾತಕ ಯಾಸಿನ್. 

ನಟ ದರ್ಶನ್ ಫ್ಯಾನ್ಸ್ ಮೇಲೆ ಬಿತ್ತು ಮತ್ತೊಂದು ಕೇಸ್; ಉಮಾಪತಿಗೌಡಗೆ ಬೆದರಿಕೆಯೊಡ್ಡಿದ್ದ ಅಭಿಮಾನಿ ಅರೆಸ್ಟ್ 

ಸದ್ಯ ಆರೋಪಿಯನ್ನ ಬಂಧಿಸಿದ ಪೊಲೀಸರು. ಸ್ಥಳಕ್ಕೆ ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಮನ್ನಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

click me!