ಕೊಲೆ ಪ್ರಕರಣ ಎ1 ಆರೋಪಿ ಪವಿತ್ರಾ ಗೌಡ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಮೇಕಪ್ ಮಾಡಿಕೊಳ್ಳಲು ಅವಕಾಶ ಕೊಟ್ಟ ಎಸ್‌ಐ ನೇತ್ರಾವತಿಗೆ ಈಗ ನೊಟೀಸ್ ನೀಡಲಾಗಿದೆ.
ಬೆಂಗಳೂರು (ಜೂ.25): ಬೆಂಗಳೂರಿನಲ್ಲಿ ಚಿತ್ರದುರ್ಗದ ರೇಣುಕಾ ಸ್ವಾಮಿ (RenukaSwamy) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಪೊಲೀಸ್ ಅಧಿಕಾರಿಗೆ ಸಂಕಷ್ಟ ಎದುರಾಗಿದೆ. ಎ1 ಆರೋಪಿ ಪವಿತ್ರಾ ಗೌಡಗೆ ಮೇಕಪ್ ಮಾಡಿಕೊಳ್ಳಲು ಅವಕಾಶ ಕೊಟ್ಟ ಎಸ್‌ಐ ನೇತ್ರಾವತಿಗೆ ಈಗ ನೊಟೀಸ್ ನೀಡಲಾಗಿದೆ.
ಪೊಲೀಸ್ ಅಧಿಕಾರಿ ನೇತ್ರಾವತಿ ಅವರು ಪ್ರಕರಣದ ಪ್ರಮುಖ ಆರೋಪಿ ಪವಿತ್ರಾ ಗೌಡಗೆ ಮೇಕಪ್ ಕಿಟ್ ಇಟ್ಟು ಕೊಳ್ಳಲು ಅವಕಾಶ ಕೊಟ್ಟಿದ್ದರು ಎಂಬ ಆರೋಪ ಇದ್ದು, ಕರ್ತವ್ಯ ಲೋಪ ಎಸಗಿರುವ ಹಿನ್ನೆಲೆಯಲ್ಲಿ ಈ ನೋಟೀಸ್ ನೀಡಲಾಗಿದೆ.
ಪತ್ನಿ, ಮಗ ಜೈಲು ಭೇಟಿ ವೇಳೆ ದರ್ಶನ್ ಕಣ್ಣೀರ ಧಾರೆ: ಮಗನನ್ನು ತಬ್ಬಿ ಬಿಕ್ಕಿ ಬಿಕ್ಕಿ ಅತ್ತ ನಟ
ಪೊಲೀಸ್ ಕಸ್ಟಡಿಯಲ್ಲಿರುವಾಗಲೇ ಪವಿತ್ರಾ ಗೌಡ ಮೇಕಪ್ ಮಾಡಿಕೊಂಡಿದ್ದಳು. ಮೇಕಪ್ ಇಲ್ಲದೆ ಒಂದು ದಿನವೂ ಆಕೆ ಇರುತ್ತಿರಲಿಲ್ಲವಂತೆ. ಇದಕ್ಕೆ ಪುಷ್ಟಿ ನೀಡುವಂತೆ ರಾಜರಾಜೇಶ್ವರಿ ನಗರದಲ್ಲಿರುವ ಮನೆಗೆ ಸ್ಥಳ ಮಹಜರಿಗೆ ಹೋಗಿ ಹಿಂತಿರುವಾಗ ಮೇಕಪ್ ಮಾಡಿಕೊಂಡು ತುಟಿಗೆ ಲಿಪ್‌ಸ್ಟಿಕ್ ಹಾಕಿಕೊಂಡು ಹೊರಬಂದಿದ್ದಳು. ಇದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಜೊತೆಗೆ ಪೊಲೀಸರ ವಿರುದ್ಧ ಟೀಕೆ ವ್ಯಕ್ತವಾಗಿತ್ತು.
ರಾಜಕೀಯ ಲಾಭಕ್ಕೆ ದರ್ಶನ್‌ರನ್ನು ಬಳಸಿಕೊಂಡ ಸುಮಲತಾ ಇವಾಗ ಮೌನವೇಕೆ?
ಹೀಗಾಗಿ ಕರ್ತವ್ಯಲೋಪದಡಿ ವಿಜಯನಗರ ಠಾಣೆ ಎಸ್‌ಐ ನೇತ್ರಾವತಿಗೆ ರೂಲ್ 7ರ ಅಡಿ ಡಿಸಿಪಿ ನೋಟಿಸ್ ನೀಡಿದ್ದಾರೆ. ಜೂನ್ 15ರಂದು ಪವಿತ್ರಾ ಗೌಡ ಮನೆಯಲ್ಲಿ ಸ್ಥಳ ಮಹಜರು ನಡೆದಿತ್ತು. ಈ ವೇಳೆ ಕರೆದುಕೊಂಡು ಹೋಗಿದ್ದು ಎಸ್‌ಐ ನೇತ್ರಾವತಿ. ಹೋಗುವಾಗ ಮಾಮೂಲಿಯಂತೆ ಹೋದ ಪವಿತ್ರಾ ಗೌಡ ಬರುವಾಗ ಮೇಕಪ್ ಮಾಡಿಕೊಂಡು ಮುಖ ತಿರುವಿಕೊಂಡು ಬಂದಿದ್ದ ವಿಡಿಯೋ ವೈರಲ್ ಆಗಿತ್ತು.
ಪೊಲೀಸ್ ಕಸ್ಟಡಿಯಲ್ಲಿರುವಾಗಲೇ ಪವಿತ್ರಾ ಗೌಡಗೆ ಮೇಕಪ್ ಮಾಡಿಕೊಳ್ಳಲು ಅವಕಾಶ ಕೊಟ್ಟದ್ದಕ್ಕೆ ಈಗ ನೇತ್ರಾವತಿ ಸಂಕಷ್ಟ ಎದುರಾಗಿದೆ. ಸಾಂತ್ವಾನ ಕೇಂದ್ರಕ್ಕೆ ಕರೆದುಕೊಂಡು ಹೋಗುವಾಗಲೂ ಆಕೆಯ ಬಳಿ ಮೇಕಪ್ ಕಿಟ್ ಇತ್ತು ಎಂದು ತಿಳಿದುಬಂದಿದೆ. ಸೋಷಿಯಲ್ ಮೀಡಿಯಾ ಎಷ್ಟು ಪವರ್‌ಫುಲ್ ಎಂದು ಇದರಿಂದಲೇ ತಿಳಿಯುತ್ತದೆ.