ದುಬೈ ಚಿನ್ನದ ಆಸೆ ತೋರಿಸಿ 60 ಲಕ್ಷ ದೋಚಿದ್ದ  ಐವರು ಆರೋಪಿಗಳು ಅರೆಸ್ಟ್

By Ravi Janekal  |  First Published Dec 19, 2023, 2:51 PM IST

ಕಡಿಮೆ ಬೆಲೆಗೆ ಚಿನ್ನ ಕೊಡುತ್ತೇವೆಂದು ವ್ಯಕ್ತಿಯೊಬ್ಬರಿಗೆ 60 ಲಕ್ಷರೂ. ವಂಚಿಸಿದ್ದ ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ. ಸೈಯದ್ ಇರ್ಫಾನ್ , ರಿಜ್ವಾನ್ , ದಿವಾಕರ, ಸತೀಶ್ ,ಅಶ್ರಫ್  ಬಂಧಿತ ಆರೋಪಿಗಳು. ಕಳೆದ ವಾರ ಡಿ.11 ರಂದು ಬಸವೇಶ್ವರ ನಗರದ ಆದರ್ಶ್ ಲೇಔಟ್ ನಲ್ಲಿ ನಡೆದಿದ್ದ ಘಟನೆ. ಪಾನ್ ಬ್ರೋಕರ್ ಕೆಲಸ ಮಾಡುವ ಸಂಕೇತ್ ಎಂಬಾತನಿಂದ ಹಣ ದೋಚಿದ್ದ ಗ್ಯಾಂಗ್.


ಬೆಂಗಳೂರು (ಡಿ.19): ಕಡಿಮೆ ಬೆಲೆಗೆ ಚಿನ್ನ ಕೊಡುತ್ತೇವೆಂದು ವ್ಯಕ್ತಿಯೊಬ್ಬರಿಗೆ 60 ಲಕ್ಷರೂ. ವಂಚಿಸಿದ್ದ ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ.

ಸೈಯದ್ ಇರ್ಫಾನ್ , ರಿಜ್ವಾನ್ , ದಿವಾಕರ, ಸತೀಶ್ ,ಅಶ್ರಫ್  ಬಂಧಿತ ಆರೋಪಿಗಳು. ಕಳೆದ ವಾರ ಡಿ.11 ರಂದು ಬಸವೇಶ್ವರ ನಗರದ ಆದರ್ಶ್ ಲೇಔಟ್ ನಲ್ಲಿ ನಡೆದಿದ್ದ ಘಟನೆ. ಪಾನ್ ಬ್ರೋಕರ್ ಕೆಲಸ ಮಾಡುವ ಸಂಕೇತ್ ಎಂಬಾತನಿಂದ ಹಣ ದೋಚಿದ್ದ ಗ್ಯಾಂಗ್.

Latest Videos

undefined

ಕಡಿಮೆ ಬೆಲೆಗೆ ದುಬೈ ನಿಂದ ಚಿನ್ನ ತರಿಸಿದ್ದೇವೆ. ಹಣ ತೆಗೆದುಕೊಂಡು ಬನ್ನಿ ದುಬೈ ರೇಟಿಗೆ ಚಿನ್ನ ಕೊಡ್ತೇವೆ ಎಂದು ಸಂಕೇತ್ ಪುಸಲಾಯಿಸಿ ಆದರ್ಶ ನಗರಕ್ಕೆ ಕರೆಸಿಕೊಂಡಿದ್ದ ಅರೋಪಿಗಳು. 

 

ಕದ್ದ ಆಂಡ್ರಾಯ್ಡ್ ಫೋನ್ ವಾಪಸ್ ನೀಡಿದ್ಯಾಕೆ ಈ ಕಳ್ಳ?

ಕಡಿಮೆ ಬೆಲೆ ಚಿನ್ನದ ಆಸೆಯಿಂದ ಹಣದೊಂದಿಗೆ ಏರಿಯಾಕ್ಕೆ ಬಂದಿದ್ದ ಸಂಕೇತ. ಏರಿಯಾಗೆ ಬಂದ ಬಳಿಕ ಹಣಕೊಡುವಂತೆ ಬೆದರಿಕೆ ಹಾಕಿರುವ ಗ್ಯಾಂಗ್. ಚಿನ್ನ ಇಲ್ಲದೇ ಸುಳ್ಳು ಹೇಳಿ ಹಣ ದೋಚುವ ಪ್ಲಾನ್ ಮಾಡಿದ್ದ ಖತರ್ನಾಕ್ ಗ್ಯಾಂಗ್. ಚಿನ್ನ ಇಲ್ಲದೆ ಹಣ ಕೊಡಲು ಒಪ್ಪದ ಸಂಕೇತ ಮೇಲೆ ಮಾರಣಾಂತಿಕ ಹಲ್ಲೆ. ಮಚ್ಚಿನಿಂದ ಹಲ್ಲೆ ನಡೆಸಿ ಲಕ್ಷಾಂತರ ರೂಪಾಯಿ ಹಣ ಸಮೇತ ಪರಾರಿಯಾಗಿದ್ದ ಆರೋಪಿಗಳು. 

ಕೊಡಗಿನ ದೇವರಪುರದಲ್ಲಿ ಕಾರು ಅಡ್ಡಗಟ್ಟಿ ಕೇರಳದ ಗುತ್ತಿಗೆದಾರನಿಂದ 50 ಲಕ್ಷ ದರೋಡೆ: ಮನಸ್ಸೋ ಇಚ್ಛೆ ಹಲ್ಲೆ!

ದರೋಡೆ ಪ್ರಕರಣ ಸಂಬಂಧ ಬಸವೇಶ್ವರನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬೆನ್ನುಹತ್ತಿದ್ದ ಪೊಲೀಸರು. ಕೊನೆಗೆ ಖದೀಮರನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಸುಮಾರು ಬಂಧಿತ ಅರೋಪಿಗಳಿಂದ 53 ಲಕ್ಷ ನಗದು ವಶಕ್ಕೆ ಪಡೆದುಕೊಂಡ ಪೊಲೀಸರು.

ದೋಚಿದ್ದ ಹಣವನ್ನು ಐವರು ಹಂಚಿಕೊಂಡಿದ್ದರು. ಅಶ್ರಫ್ ಬಳಿ 25 ಸಾವಿರ, ಸತೀಶ್ ಬಳಿ 25 ಸಾವಿರ , ದಿವಾಕರ್ ಬಳಿ 50 ಸಾವಿರ , ಮಹದಮ್ ಇರ್ಫಾನ್ ಬಳಿ 2 ಲಕ್ಷ , ಮಹಮ್ಮದ್ ರಿಜ್ವಾನ್ ಬಳಿ 50 ಲಕ್ಷ ಹಣ ಮತ್ತು ಒಂದು ಕಾರು  ವಶಕ್ಕೆ ಪಡೆದುಕೊಂಡ ಪೊಲೀಸರು. ಇನ್ನು ಯಾರಾರಿಗೆ ಇದೇ ರೀತಿ ವಂಚಿಸಿದ್ದಾರೆ ಎಂಬ ಬಗ್ಗೆ ತನಿಖೆ. ವಿಚಾರಣೆ ನಡೆಸಿದ ಬಳಿಕ ಇನ್ನಷ್ಟು ವಂಚನೆ ಪ್ರಕರಣಗಳು ಬಯಲಿಗೆ ಬರುವ ಸಾಧ್ಯತೆ.

click me!