ಪಿಜಿಗಳೇ ಇವರ ಟಾರ್ಗೇಟ್, ಸ್ಟೂಡೆಂಟ್ ರೀತಿ ಡ್ರೆಸ್ ಮಾಡಿಕೊಂಡು ಲ್ಯಾಪ್‌ಟಾಪ್ ಕದಿಯುತ್ತಿದ್ದ ಖತರ್ನಾಕ್ ಗ್ಯಾಂಗ್!

By Ravi JanekalFirst Published Dec 19, 2023, 12:10 PM IST
Highlights

ವಿದ್ಯಾರ್ಥಿಗಳಂತೆ ಡ್ರೆಸ್ ಮಾಡಿಕೊಂಡು ಪಿಜಿಗಳಿಗೆ ನುಗ್ಗಿ ಹಾಡುಹಗಲೇ ಲ್ಯಾಪ್‌ಟಾಪ್, ಮೊಬೈಲ್ ದೋಚಿ ಪರಾರಿಯಾಗ್ತಿದ್ದ ಖತರ್ನಾಕ್ ಖದೀಮರನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ಯುವರಾಜು, ಪ್ರಭು, ಸೆಲ್ವರಾಜು ಬಂಧಿತ ಆರೋಪಿಗಳು. ಬಂಧಿತರಿಂದ 50 ಲ್ಯಾಪ್‌ಟಾಪ್‌ಗಳು, 7 ಮೊಬೈಲ್ ಗಳು ಜಪ್ತಿ ಮಾಡಿದ ಪೊಲೀಸರು.

ಬೆಂಗಳೂರು (ಡಿ.19): ವಿದ್ಯಾರ್ಥಿಗಳಂತೆ ಡ್ರೆಸ್ ಮಾಡಿಕೊಂಡು ಪಿಜಿಗಳಿಗೆ ನುಗ್ಗಿ ಹಾಡುಹಗಲೇ ಲ್ಯಾಪ್‌ಟಾಪ್, ಮೊಬೈಲ್ ದೋಚಿ ಪರಾರಿಯಾಗ್ತಿದ್ದ ಖತರ್ನಾಕ್ ಖದೀಮರನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ಯುವರಾಜು, ಪ್ರಭು, ಸೆಲ್ವರಾಜು ಬಂಧಿತ ಆರೋಪಿಗಳು. ಬಂಧಿತರಿಂದ 50 ಲ್ಯಾಪ್‌ಟಾಪ್‌ಗಳು, 7 ಮೊಬೈಲ್ ಗಳು ಜಪ್ತಿ ಮಾಡಿದ ಪೊಲೀಸರು.

ಸ್ಟೂಡೆಂಟ್ ಡ್ರೆಸ್ ಧರಿಸಿ ಪಿಜಿಗೆ ನುಗ್ಗುತ್ತಿದ್ದ ಖದೀಮರು:

ಕೆಆರ್‌ ಪುರಂನಲ್ಲಿ ರೂಂ ಮಾಡಿಕೊಂಡಿದ್ದ ಗ್ಯಾಂಗ್. ಬೆಳಗ್ಗೆಯೆ ನಗರಕ್ಕೆ ಎಂಟ್ರಿ ಕೊಟ್ಟು ಪಿಜಿ ಹುಡುಕುತ್ತಿದ್ದ ಖದೀಮರು. ಸ್ಟೂಡೆಂಟ್ಸ್ ರೀತಿ ಡ್ರೆಸ್ ಮಾಡ್ಕೊಂಡು ಪಿಜಿಗಳ ಬಳಿ ಹೋಗ್ತಿದ್ದ ಆರೋಪಿಗಳು. ಮೊದಲಿಗೆ ಪಿಜಿಗೆ ಸೇರುವ ನೆಪದಲ್ಲಿ ಇಡೀ ಪಿಜಿ ಅಬ್ಸರ್ವ್ ಮಾಡುತ್ತಿದ್ದ ಗ್ಯಾಂಗ್ ಯಾವ್ಯಾವ ರೂಂ ಅಂತಸ್ತಿನಲ್ಲಿ ಪಿಜಿಗಳಿವೆ ಎಂಬುದನ್ನು ಪತ್ತೆಹಚ್ಚಿ ಮರುದಿನ ದೋಚಲು ಪ್ಲಾನ್ ರೆಡಿ ಮಾಡುತ್ತಿದ್ದ ಖತಾರ್ನಕ್ ಗ್ಯಾಂಗ್.

 

ಬೆಂಗಳೂರು: ವಿಳಾಸ ಕೇಳುವ ನೆಪದಲ್ಲಿ ಒಂಟಿ ಮಹಿಳೆಯರ ಸರ ಕಿತ್ತು ಪರಾರಿ ಆಗುತ್ತಿದ್ದ ರೌಡಿಶೀಟರ್ ಸೆರೆ

ಹಾಡುಹಗಲೇ ಕಳ್ಳತನ:

ಬೆಳಗ್ಗೆ ಎಲ್ಲರೂ ಕೆಲಸ, ಕಾಲೇಜು ಅಂತಾ ಪಿಜಿಯಿಂದ ಹೋಗುವುದರಿಂದ ಇದೇ ಸಮಯದಲ್ಲೇ ಕಳ್ಳತನಕ್ಕೆ ಇಳಿಯುತ್ತಿದ್ದ ಆರೋಪಿಗಳು. ಬೆಳಗ್ಗೆ‌ 9ರಿಂದ 10ಗಂಟೆ ಟೈಮಲ್ಲಿ ಲ್ಯಾಪ್‌ಟಾಪ್ ಕಳ್ಳತನ. ಲ್ಯಾಪ್ ಟಾಪ್ ಗಳನ್ನ ಕದ್ದ ಕೆಲವೇ ಗಂಟೆಗಳಲ್ಲಿ ಬಸ್ ನಲ್ಲಿ ಪಾರ್ಸಲ್. ಚಿತ್ತೂರು ಬಸ್ ನಲ್ಲಿ ಪಾರ್ಸಲ್ ಕಳಿಸ್ತಿದ್ದ ಆರೋಪಿಗಳು. ಅಲ್ಲಿ ಕಲೆಕ್ಟ್ ಮಾಡ್ಕೊಂಡು ಸೇಲ್ ಮಾಡ್ತಿದ್ದ ಮತ್ತೊಂದು ಮತ್ತೋರ್ವ ಆರೋಪಿ ಸೆಲ್ವರಾಜ್. 

ಯಾದಗಿರಿ ಟು ಶಿವಮೊಗ್ಗ ಕಳ್ಳರ ಲಿಂಕ್ ಬೇಧಿಸಿದ ಯಾದಗಿರಿ ಪೋಲಿಸರು: 80 ಕೆಜಿ ಶ್ರೀಗಂಧ ಜಪ್ತಿ

ಒಂದು ಲ್ಯಾಪ್‌ಟಾಪ್ 25ಸಾವಿರಕ್ಕೆ ಸೇಲ್!

ಬೆಂಗಳೂರಿನ ಪಿಜಿಯಿಂದ ಕದ್ದ ಲ್ಯಾಪ್‌ಟಾಪ್‌ಗಳು ಹೊರರಾಜ್ಯದಲ್ಲಿ ಕಡಿಮೆ ಬೆಲೆ ಮಾರುತ್ತಿದ್ದ ಖದೀಮರು. ಹೀಗೆ ಪ್ರತಿ ದಿನ ನಾಲ್ಕರಿಂದ ಐದು  ಲ್ಯಾಪ್ ಟಾಪ್ ಕದಿಯುತ್ತಿದ್ದ ಆರೋಪಿಗಳು. ಯಶವಂತಪುರ ಸೇರಿ ಹಲವು ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ಎಸಗಿದ್ದ ಆರೋಪಿಗಳು. ಲ್ಯಾಪ್‌ಟಾಪ್ ಕಳ್ಳತನ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಖದೀಮರ ಬೆನ್ನುಬಿದ್ದಿದ್ದರು. ಕಳ್ಳತನ ಮಾಡೋ ವೇಳೆ ಸಿಕ್ಕಿಬಿದ್ದ ಮೂವರು ಆರೋಪಿಗಳನ್ನ ಬಂಧಿಸಿರೋ  ಪೊಲೀಸರು. ಈ ಗ್ಯಾಂಗ್‌ ಇನ್ನೂ ಹಲವರು ಇದ್ದು ಆರೋಪಿಗಳಿಗಾಗಿ ಹುಡುಕಾಟ ಮುಂದುವರಿಸಿರುವ ಪೊಲೀಸರು. ಸದ್ಯ ಯಶವಂತಪುರ ಪೊಲೀಸರಿಂದ ಮುಂದುವರೆದ ತನಿಖೆ.

click me!