ಉಡುಪಿ; ಲಾರಿಯೊಳಗಿನ ಬಿದಿರಿನ ಒಳಗಿತ್ತು 49 ಕೆಜಿ ಗಾಂಜಾ!

By Suvarna News  |  First Published Aug 23, 2020, 9:47 PM IST

ಬಿದಿರಿನೊಳಗೆ ಸಾಗಿಸುತಿದ್ದ 50 ಕೆಜಿ ಗಾಂಜಾ ವಶ, ಇಬ್ಬರ ಬಂಧನ/ ಬಿದಿರಿನೊಳಗೆ ಗಾಂಜಾ ಇಟ್ಟು ಸಾಗಿಸುತ್ತಿದ್ದರು/ ಸಿಕ್ಕಿದ್ದು ಬರೋಬ್ಬರಿ 49150 ಕೆಜಿ ಗಾಂಜಾ/  6 ಬಿದಿರುಗಳ ಒಳಗೆ ಗಾಂಜಾ ತುಂಬಿದ್ದರು


ಉಡುಪಿ(ಆ. 23) ಇಲ್ಲಿನ ಬ್ರಹ್ಮವಾರ ಸಮೀಪದ ಹೇರೂರು ಗ್ರಾಮದ ಕೃಷಿಕೇಂದ್ರದ ಬಳಿ ಉಡುಪಿ ಡಿಸಿಐಬಿ ಪೊಲೀಸರು, ಇಬ್ಬರು ವ್ಯಕ್ತಿಗಳು ಲಾರಿಯಲ್ಲಿ ಕಳ್ಳಸಾಗಾಣೆ ಮಾಡುತಿದ್ದ 49150 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. 

ಆರೋಪಿಗಳನ್ನು  ತಮಿಳುನಾಡು ಜಿಲ್ಲೆಯ ತಿರುವನ್ವೇಲಿ ಜಿಲ್ಲೆಯ ನಿವಾಸಿ ಕರುತ ಪಾಂಡಿ (40) ಮತ್ತು ಪಶ್ಚಿಮ ಬಂಗಾಳದ ಕುಚ್ಬಿಹಾರ್ ಜಿಲ್ಲೆಯ ವಾನು ಹಲ್‍ದಾರ್ (30) ಎಂದು ಗುರುತಿಸಲಾಗಿದೆ.

Tap to resize

Latest Videos

ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್ ಅನ್ನೇ ದೋಚಿದ ಗಾರ್ಡ್

ಶನಿವಾರ ಖಚಿತ ಮಾಹಿತಿಯ ಮೇರೆಗೆ ಡಿಸಿಐಬಿ ಎಸೈ ಮಂಜಪ್ಪ ಡಿ.ಆರ್. ಮತ್ತು ಸಿಬ್ಬಂದಿಗಳು ಮಧ್ಯಾಹ್ನ 12.30ಕ್ಕೆ ಈ ಲಾರಿಯನ್ನು ತಡೆದು ನಿಲ್ಲಿಸಿದಾಗ, ಲಾರಿಯಲ್ಲಿ ಲೋಡ್ ಮಾಡಿದ್ದ 6 ಬಿದಿರುಗಳ ಒಳಗೆ ಗಾಂಜಾವನ್ನು ತುಂಬಿಸಿರುವುದು ಪತ್ತೆಯಾಗಿದೆ. ಈ ಗಾಂಜಾದ ಮೌಲ್ಯ ಸುಮಾರು 14,75,000 ರು. ಎಂದು ಅಂದಾಜಿಸಲಾಗಿದೆ.

ಜೊತೆಗೆ 30 ಲಕ್ಷ ರು.  ಮೌಲ್ಯದ ಲಾರಿ ಹಾಗೂ 2 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಡುಪಿ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ.

 

click me!