ಆನ್ ಲೈನ್ ಗ್ಯಾಂಬ್ಲಿಂಗ್ ನಿಷೇಧಿಸಿ.. ನೈತಿಕತೆಯ ಹಕ್ಕೊತ್ತಾಯ

By Suvarna News  |  First Published Aug 23, 2020, 7:08 PM IST

ಆಲ್ ಲೈನ್ ಗ್ಯಾಂಬ್ಲಿಂಗ್ ಬ್ಯಾನ್ ಆಗಲಿ/ ಸೋಶಿಯಲ್ ಮೀಡಿಯಾದಲ್ಲಿ ಜೂಜು ಆಟಗಳದ್ದೇ ಹಾವಳಿ/ ಕಾನೂನು ಮತ್ತು ನೈತಿಕತೆ ವಿಚಾರ/ ನಿಜಕ್ಕೂ ದುರಂತ ಕಾಲ


ಬೆಂಗಳೂರು(ಆ. 13)  ಆತ ವಿದ್ಯಾರ್ಥಿ.. ಅಜ್ಜನ ಖಾತೆಯಿಂದ ಆನ್ ಲೈನ್ ಜೂಜಿಗೆ ಲಕ್ಷಾಂತರ ರೂ. ಹಣ ವ್ಯಯಿಸಿದ್ದ.. ಕೊನೆಗೆ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡ.. ಇಂಥ ಸುದ್ದಿಗಳನ್ನು ಕೇಳುವ ಕಾಲಕ್ಕೆ ಬಂದು ನಿಂತಿದ್ದೇವೆ. 

ಮಮ್ಮಿ ಕೈ ಸೇರಬೇಕಾಗಿದ್ದ ಸಂಪಾದನೆ ರಮ್ಮಿ ಪಾಲಾಗುತ್ತಿದೆ!  ಹೌದು ಇಂಥದ್ದೊಂತು ಮಾತು ಈ ಕಾಲಕ್ಕೆ ಸೂಟ್ ಆಗುತ್ತಿದೆ. ಸೋಶಿಯಲ್ ಮೀಡಿಯಾ ಎನ್ನುವುದು ಆನ್ ಲೈನ್ ಜೂಜು ಅಡ್ಡೆಗಳ ಪ್ರಮೋಶನ್ ತಾಣವಾಗಿ ಬದಲಾಗಿದೆ. 

Tap to resize

Latest Videos

ಕ್ರಿಕೆಟ್ ದಿಗ್ಗಜರು, ಸಿನಿಮಾ ಹೀರೋಗಳು, ಗಾಯಕರು, ನಟಿಮಣಿಯರು ಆದಿಯಾಗಿ  ಇದರ ಪ್ರಮೋಶನ್ ಗೆ ನಿಂತಿದ್ದಾರೆ ಎಂದರೆ ನಾವು ಎಂತ ದುರಂತ ಕಾಲದಲ್ಲಿ ಇದ್ದೇವೆ ಎಂಬುದನ್ನು ಒಮ್ಮೆ ಪ್ರಶ್ನೆ ಮಾಡಿಕೊಳ್ಳಬೇಕಾಗುತ್ತದೆ.

ವಿರಾಟ್ ಕೊಹ್ಲಿ ಅರೆಸ್ಟ್ ಮಾಡಿ...!

 ಲಾಕ್ ಡೌನ್ ನಂತರ ಜನರು ಹೆಚ್ಚಿನ ಸಮಯವನ್ನು ಆನ್ ಲೈನ್ ನಲ್ಲಿ ಕಳೆಯುವಂತಾಯಿತು. ಇದನ್ನೇ ಬಳಸಿಕೊಂಡ ಆನ್ ಲೈನ್ ಜೂಜು ಕಂಪನಿಗಳು ತಮ್ಮತ್ತ ಸೆಳೆದುಕೊಳ್ಳಲು ಒಂದಾದ ಮೇಲೆ ಒಂದು ಪ್ಲಾನ್ ರೂಪಿಸಿದವು.ಐಪಿಎಲ್ ಎಂಬ ಮಹಾಹಬ್ಬ ಸಹ ಎದುರಿನಲ್ಲಿ ಇದೆ!

ಹೌದು ಕಾನೂನಿನ ಪ್ರಕಾರ ಇದೆಲ್ಲವೂ ಸರಿ.. ಆದರೆ ನೈತಿಕತೆ ಆಧಾರದಲ್ಲಿ ಯೋಚನೆ ಮಾಡಿದರೆ? ಪ್ರಶ್ನೆ ನಮಗೆ ನಾವು ಕೇಳಿಕೊಳ್ಳಬೇಕಾಗುತ್ತದೆ. ರೂಪದರ್ಶಿಗಳಾಗಿ ಬಂದ ನಾಯಕ ನಾಯಕಿಯರು ತಮಗೆ ತಾವೇ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗುತ್ತದೆ.

ಇಂಥ ಆನ್ ಲೈನ್ ಜೂಜು ನಿಷೇಧ ಮಾಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ #BanOnlineGambling ಟ್ರೆಂಡ್ ಆಗಿದೆ. ಅನೇಕರು ತಮ್ಮ ಅಭಿಪ್ರಾಯ ದಾಖಲಿಸಿದ್ದು ಮಕ್ಕಳ ಮೇಲೆ ಬೀರುವ ಕೆಟ್ಟ ಪರಿಣಾಮವನ್ನು ತಿಳಿಸಿದ್ದಾರೆ. 

ಯಾರು ನಿಮ್ಮನ್ನು ಕೈಹಿಡಿದು ಜೂಜು ಆಡಿಸಲ್ಲ ಎಂದು ಹೇಳಬಹುದು.  ಆದರೆ ಹಣ ಹಾಳುಮಾಡುವ ಯೋಜನೆ ಹುಟ್ಟುಹಾಕುವ ಇಂಥವುಗಳನ್ನು ಏನು ಮಾಡಬೇಕು?  ಇಲ್ಲಿಯವರಿಗೆ ನಿರ್ಬಂಧಕ್ಕೆ ಕಾನೂನು ಇಲ್ಲ ಎಂಬುದು ಸತ್ಯವೇ ಆಗಿದ್ದರೂ  ನೈತಿಕತೆ ಆಧಾರದಲ್ಲಿ ಇವು ಯಾವುದು ಸಾಧು ಅಲ್ಲ. ಈ ಮಾತನ್ನು ನಾಗರಿಕರು, ಮಕ್ಕಳು, ಸರ್ಕಾರ  ತಿಳಿದುಕೊಳ್ಳಬೇಕಾಗಿದೆ. ನ್ಯಾಯಾಲಯ ಸಹ ಒಂದು ಮಾರ್ಗದರ್ಶನ ಸೂತ್ರ ನೀಡಿದರೆ ಉತ್ತಮ.

 

 

 

 

 

click me!