ಬೀದರ್: ಸಿನಿಮಿಯ ರೀತಿಯಲ್ಲಿ ಗಾಂಜಾ ಸಾಗಿಸುತ್ತಿದ್ದ ಖದೀಮರ ಬಂಧನ

By Girish GoudarFirst Published Aug 23, 2023, 8:33 PM IST
Highlights

ಬೀದರ್ ಪೊಲೀಸರ ಭರ್ಜರಿ ಕಾರ್ಯಾಚರಣೆ, 8 ತಿಂಗಳಲ್ಲಿ ಬರೋಬ್ಬರಿ 22 ಕೋಟಿ 60 ಲಕ್ಷ ಗಾಂಜಾ ಜಪ್ತಿ ಮಾಡಿದ ಪೊಲೀಸ್ ಇಲಾಖೆ, 42 ಆರೋಪಿಗಳು ಅರೆಸ್ಟ್. 

ಲಿಂಗೇಶ್ ಮರಕಲೆ, ಏಷ್ಯಾನೆಟ್ ಸುವರ್ಣ ನ್ಯೂಸ್, ಬೀದರ್

ಬೀದರ್(ಆ.23):  ರಾಜ್ಯದ ಕಿರೀಟ್ ಪ್ರಾಯದಲ್ಲಿ ಗಡಿ ಜಿಲ್ಲೆ ಬೀದರ್ ಮತ್ತೆರಿಸುವ ದಂಧೆ ನಡೆಸುವ ಖದೀಮರ ಪಾಲಿಗೆ ಜಿಲ್ಲಾ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಸಿಂಹ ಸ್ವಪ್ನವಾಗಿ ಕಾಡುತ್ತಿದ್ದಾರೆ. ಗಾಂಜಾ, ಟ್ಯಾಬ್ಲೆಟ್ ಹೀಗೆ ನಶೆ ಮಾಡುವ ಪದಾರ್ಥಗಳ ಮೇಲೆ ಕಡಿವಾಣ ಹಾಕಿರುವ ಪೊಲೀಸ್ ಇಲಾಖೆ 8 ತಿಂಗಳಲ್ಲಿ ಬರೋಬ್ಬರಿ 24 ಪ್ರಕರಣಗಳು ದಾಖಲು ಮಾಡಿ 22 ಕೋಟಿಗೂ ಅಧಿಕ ಮೌಲ್ಯದ ವಿವಿಧ ನಶೆ ಪದಾರ್ಥಗಳು ಜಪ್ತಿ ಮಾಡಿಕೊಂಡಿದಾರೆ. ಈ ಕುರಿತು ಒಂದು ವರದಿ ಇಲ್ಲಿದೇ ನೋಡಿ. 

ಒಂದು ಕಡೆ ಟೋಲ್ ಪ್ಲಾಜಾ ಬಳಿಯೇ ರಾಂಗ್ ರೂಟ್ನಲ್ಲಿ ಬಂದ ಪೊಲೀಸ್ ವಾಹನ, ಮತ್ತೊಂದು ಕಡೆ ಪೊಲೀಸರಿಗೆ ಕಣ್ಣು ತಪ್ಪಿಗೆ ಎಸ್ಕೇಪ್ ಆಗಲು ಮುಂದಾದ ಖದೀಮರು. ಹೌದು, ಇಂತಹ ದೃಶ್ಯಗಳು ಈಗ ಗಡಿ ಜಿಲ್ಲೆಯಲ್ಲಿ ಸಾಮಾನ್ಯವಾಗಿದಂತಿವೆ. ಒಂದು ಕಡೆ ತೆಲಂಗಾಣ, ಮತ್ತೊದೆಡೆ ಮಹಾರಾಷ್ಟ್ರ ರಾಜ್ಯಗಳಿಗೆ ಹೊಂದಿಕೊಂಡಿರುವ ಬೀದರ್ ಜಿಲ್ಲೆ ನಶಾ ಪದಾರ್ಥಗಳು ಸಾಗಿರುಸುವ ಪ್ರಮುಖ ಸೇತುವೆಯಂತಾಗಿತ್ತು,. ಈ ಕಡೆ ಹೈದ್ರಾಬಾದ್, ಅತ್ತ ಪೂಣೆ, ಮುಂಬೈ ಅಂತಹ ಮಾಯಾನಗರಿಗಳು ಈ ದೊಡ್ಡ ಸಿಟಿಗಳಲ್ಲಿ ರೇವ್ ಪಾರ್ಟಿ, ಇನ್ನಿತ್ತರ ಅಕ್ರಮಗಳು ನಡೆಯೋದು ಸರ್ವೆ ಸಾಮಾನ್ಯ, ಇಂತಹ ಮೋಜು ಮಸ್ತಿಗಳ ಪಾರ್ಟಿಗೆ ನಶಾ ಪದಾರ್ಥಗಳು ಸಾಗಿಸಬೇಕಾದರೇ ಬೀದರ್ ನ ರಾಷ್ಟ್ರೀಯ ಹೆದ್ದಾರಿ 65ರಲ್ಲಿ ಸಂಚರಿಸಬೇಕು,. ಆದರೆ ಕಳೆದ 8 ತಿಂಗಳಿಂದ ಬೀದರ್ ಪೊಲೀಸ್ ಇಲಾಖೆ ಇಂತಹ ಅಕ್ರಮಗಳಿಗೆ ಬ್ರೇಕ್ ಹಾಕಿದೆ. 

ಬೀದರ್‌: ಲಂಚ ಪಡೆಯುತ್ತಿದ್ದಾಗ ವಸತಿ ಶಾಲೆ ಪ್ರಾಚಾರ್ಯ ಲೋಕಾಯುಕ್ತ ಬಲೆಗೆ

ಹುಮನಾಬಾದ್ ತಾಲೂಕಿನ ಮಂಗಲಗಿ ಟೋಲ್ ಪ್ಲಾಜಾ ಬಳಿ ನೆಕ್ಸಾನ್ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಖದೀಮರು ಪೊಲೀಸ್ ವಾಹನ ನೋಡಿ ಎದ್ನೊ ಬಿದ್ನೊ ಅಂತ ಕಾರು ಯ್ಯೂಟರ್ನ್ ಪಡೆದು ವಾಪಸಾಗಿದ್ದಾರೆ,. ಪೊಲೀಸರು ಚೇಸ್ ಮಾಡುತ್ತಿರೋದನ್ನ ಗಮನಿಸಿ ಮನ್ನಾ ಖೇಳಿ ಗ್ರಾಮದ ಎಮ್ಆರ್ಎಫ್ ಟೈರ್ ಶೋರೂಮ್ ಬಳಿ ಕಾರು ಬಿಟ್ಟು ಇಬ್ಬರು ಖದೀಮರು ಪರಾರಿಯಾಗಿದ್ದಾರೆ. ಕಾರಲ್ಲಿ ಅಕ್ರಮವಾಗಿ ಸಾಗಾಟ ಮಾಡ್ತಿದ್ದ 1.18 ಕೋಟಿ ಮೌಲ್ಯದ 118 ಕೆಜಿ ಗಾಂಜಾ ಸಿಕ್ಕಿದೆ. ತೆಲಂಗಾಣದಿಂದ ಮಹಾರಾಷ್ಟ್ರಕ್ಕೆ ಗಾಂಜಾ ಸಾಗಾಟ ಮಾಡ್ತಿದ್ದರಂತೆ,. ಗಾಂಜಾ ಸಾಗಿಸುತ್ತಿದ್ದ ನೆಕ್ಸಾನ್ ಕಾರು ಪೊಲೀಸರು ಜಪ್ತಿ ಮಾಡಿದ್ದಾರೆ. 

ಬೀದರ್ ನ ರಾಷ್ಟ್ರೀಯ ಹೆದ್ದಾರಿಯಿಂದ ಮುಂಬೈ, ಪೂನೆ, ಹೈದ್ರಾಬಾದ್ ಸೇರಿದಂತೆ ಹಲವು ಮಹಾನಗರಗಳಿಗೆ ಅಕ್ರಮವಾಗಿ ಸಾಗಿಸುತ್ತಿದ್ದ ಗಾಂಜಾ ಸೇರಿದಂತೆ ಹಲವು ಎನ್ಡಿಪಿಎಸ್ ಅಡಿಯಲ್ಲಿ ಬರುವ ನಶಾ ಪದಾರ್ಥಗಳ ಸಾಗಟಕ್ಕೆ ಪೊಲೀಸರ ನಿರಂತರ ಕಾರ್ಯಾಚರಣೆಯಿಂದ ಬ್ರೇಕ್ ಬಿದ್ದಂತಾಗಿದೆ,. ದಕ್ಷತೆ ಮತ್ತು ಪ್ರಮಾಣಿಕತೆಗೆ ಹೆಸರುವಾಸಿಯಾಗಿರುವ ಬೀದರ್ ಎಸ್ಪಿ ಚನ್ನಬಸವಣ್ಣ ಲಂಗೋಟಿ ಈಗ ಎರಡು ರಾಜ್ಯದ ಖದಿಮರಿಗೆ ಸಿಂಹ ಸ್ವಪ್ನವಾಗಿ ಕಾಡುತ್ತಿದ್ದಾರೆ.

click me!