ದೀಪಾವಳಿ ಜೂಜು ಕೊಲೆಯಲ್ಲಿ ಅಂತ್ಯ: ಹಣದ ವಿಚಾರಕ್ಕೆ ಗೆಳೆಯನನ್ನೇ ಕೊಂದ ಸ್ನೇಹಿತರು

By Kannadaprabha News  |  First Published Oct 28, 2022, 7:47 AM IST

ಬೆಂಗಳೂರಿನ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣಾ ವ್ಯಾಪ್ತಿಯ ಕೂಡ್ಲು ಬಳಿ ನಡೆದ ಘಟನೆ 


ಬೆಂಗಳೂರು(ಅ.28):  ದೀಪಾವಳಿ ಹಬ್ಬದ ವೇಳೆ ಜೂಜಾಡುವಾಗ ಹಣದ ವಿಚಾರವಾಗಿ ನಿಂದಿಸಿದ ಎಂಬ ಕಾರಣಕ್ಕೆ ಕೋಪಗೊಂಡು ಆಟೋ ಚಾಲಕನೊಬ್ಬನನ್ನು ಆತನ ಸ್ನೇಹಿತರೇ ಕೊಂದಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣಾ ವ್ಯಾಪ್ತಿಯ ಕೂಡ್ಲು ಬಳಿ ನಡೆದಿದೆ.

ಬಂಡೇಪಾಳ್ಯ ನಿವಾಸಿ ರಾಜು (40) ಕೊಲೆಯಾದ ದುರ್ದೈವಿ. ಈ ಕೃತ್ಯ ಸಂಬಂಧ ಮೃತನ ಸ್ನೇಹಿತರಾದ ವಿಜಯ್‌ ರೆಡ್ಡಿ, ವಿನಯ್‌ ರೆಡ್ಡಿ ಹಾಗೂ ಗಂಗಾಧರ್‌ನನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೂಡ್ಲು ಬಳಿ ಕುಡಿದ ಅಮಲಿನಲ್ಲಿ ಬುಧವಾರ ರಾತ್ರಿ ಈ ನಾಲ್ವರು ಸ್ನೇಹಿತರ ಮಧ್ಯೆ ಜಗಳವಾಗಿದೆ. ಆಗ ಆತನ ಮೇಲೆ ಇಟ್ಟಿಗೆಯಿಂದ ಹಲ್ಲೆ ನಡೆಸಿ ಆರೋಪಿಗಳು ಕೊಲೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tap to resize

Latest Videos

ಬೆಂಗಳೂರು: ಅಕ್ರಮ ಸಂಬಂಧಕ್ಕೆ ಅಡ್ಡಿ ಅಂತ ಗಂಡನನ್ನೇ ಕೊಂದ ಮಹಿಳೆ..!

ಬಂಡೇಪಾಳ್ಯದ ರಾಜು ಆಟೋ ಚಾಲಕನಾಗಿದ್ದು, ತನ್ನ ಕುಟುಂಬದ ಜತೆ ನೆಲೆಸಿದ್ದ. ದೀಪಾವಳಿ ಹಬ್ಬದ ದಿನ ಸ್ನೇಹಿತರ ಜತೆ ಆತ ಜೂಜಾಡುತ್ತಿದ್ದ. ಆ ವೇಳೆ ಹಣದ ವಿಚಾರವಾಗಿ ವಿಜಯ್‌, ವಿನಯ್‌ ಹಾಗೂ ಗಂಗಾಧರ್‌ ಅವರಿಗೆ ರಾಜು ಬೈದಿದ್ದ. ಇದರಿಂದ ಕೆರಳಿದ ಆರೋಪಿಗಳು, ಮದ್ಯ ಸೇವನೆ ನೆಪದಲ್ಲಿ ಬುಧವಾರ ರಾತ್ರಿ ಕರೆಸಿಕೊಂಡಿದ್ದಾರೆ. ಆಗ ಮತ್ತೆ ಇಸ್ಪೀಟ್‌ ವಿಚಾರ ಪ್ರಸ್ತಾಪವಾಗಿ ಜಗಳವಾಗಿದೆ. ಈ ಹಂತದಲ್ಲಿ ರಾಜು ಮೇಲೆ ಹಲ್ಲೆ ನಡೆಸಿ ಆರೋಪಿಗಳು ಕೊಂದಿದ್ದಾರೆ. ಘಟನೆ ವಿಚಾರ ತಿಳಿದ ಕೂಡಲೇ ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
 

click me!