Drug Bust: ಬೆಂಗ್ಳೂರಲ್ಲಿ ಪೊಲೀಸರ ಭರ್ಜರಿ ಭೇಟೆ: 38 ಕೋಟಿ ಡ್ರಗ್ಸ್‌ ಜಪ್ತಿ

Published : Apr 09, 2022, 04:52 AM IST
Drug Bust: ಬೆಂಗ್ಳೂರಲ್ಲಿ ಪೊಲೀಸರ ಭರ್ಜರಿ ಭೇಟೆ: 38 ಕೋಟಿ ಡ್ರಗ್ಸ್‌ ಜಪ್ತಿ

ಸಾರಾಂಶ

*   ಬೆಂಗಳೂರಿಗೆ ಕೇಜಿಗಟ್ಟಲೇ ಡ್ರಗ್ಸ್‌ ಪೂರೈಕೆ  *  ಮುಂಬೈ, ಒಡಿಶಾ ಗ್ಯಾಂಗ್‌ ಬೆನ್ನಟ್ಟಿಹಿಡಿದ ಗೋವಿಂದಪುರ ಪೊಲೀಸರು *  ಚೆನ್ನೈನ ಗೋದಾಮಿನ ಮೇಲೆ ದಾಳಿ ನಡೆಸಿ ಗಾಂಜಾ, ಕೊಕೇನ್‌, ಟ್ರೊಮೆಡೆಲ್‌ ವಶ  

ಬೆಂಗಳೂರು(ಏ.09):  ಮಾದಕ ವಸ್ತು ಮಾರಾಟ ಜಾಲದ ವಿರುದ್ಧ ಗೋವಿಂದಪುರ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ರಾಜಧಾನಿಗೆ ಸಗಟು ರೂಪದಲ್ಲಿ ಕೇಜಿಗಟ್ಟಲೇ ಡ್ರಗ್ಸ್‌(Drugs) ಪೂರೈಸುತ್ತಿದ್ದ ಆರು ಮಂದಿ ಅಂತಾರಾಜ್ಯ ಪೆಡ್ಲರ್‌ಗಳನ್ನು ಪ್ರತ್ಯೇಕವಾಗಿ ಸೆರೆಹಿಡಿದು 38 ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿ ಮಾಡಿದ್ದಾರೆ. ಬೃಹತ್‌ ಮೌಲ್ಯದ ಡ್ರಗ್‌ ಜಾಲದ ವಿರುದ್ಧ ಬೃಹತ್‌ ಕಾರ್ಯಾಚರಣೆ ನಡೆಸುವ ಮೂಲಕ ಗೋವಿಂದಪುರ ಠಾಣೆ ಪೊಲೀಸರು(Police) ಇತಿಹಾಸ ಬರೆದಿದ್ದಾರೆ.

ಮುಂಬೈ(Mumbai) ಮೂಲದ ರಜನಿಬಾನು ಗುಪ್ತಾ, ತಮಿಳುನಾಡಿನ ಚೆನ್ನೈ ನಗರದ ಆಂಡ್ರೋ ಫಿಲಿಫ್ಸ್‌, ರಾಜೇಶ್‌, ಒಡಿಶಾ ಮೂಲದ ಸಮರಕರ್‌, ರಮೇಶ್‌ ಕುಮುಂದಿ ಹಾಗೂ ಮುಗುಲು ಶಿಷಾ ಬಂಧಿತರಾಗಿದ್ದು(Arrest), ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡಿರುವ ಅಂಕಿತ್‌ ಶರ್ಮಾ ಸೇರಿದಂತೆ ಇನ್ನುಳಿದವರ ಪತ್ತೆಗೆ ತನಿಖೆ ನಡೆದಿದೆ. ಈ ಎರಡು ತಂಡಗಳಿಂದ .1.45 ಕೋಟಿ ಮೌಲ್ಯದ 290 ಕೇಜಿ ಗಾಂಜಾ, 6.5 ಕೇಜಿ ಎಂಡಿಎಂಎ, 300 ಗ್ರಾಂ ಟ್ರೊಮೊಡೆಲ್‌, 75 ಗ್ರಾಂ ಕೊಕೇನ್‌ ಹಾಗೂ .35 ಕೋಟಿ ಮೌಲ್ಯದ ಮೆಥಾಕ್ಯುಲೊನ್‌ ಸೇರಿದಂತೆ ಒಟ್ಟು .37 ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿಯಾಗಿದೆ.

ಕುರ್ಕುರೆ, ಚಕ್ಕುಲಿ ಪ್ಯಾಕೆಟಲ್ಲಿ ಡ್ರಗ್ಸ್‌ ತುಂಬಿಸಿ ಮಾರಾಟ..!

ಇತ್ತೀಚೆಗೆ ಮುಂಬೈ ಹಾಗೂ ಒಡಿಶಾ ಪೆಡ್ಲರ್‌ಗಳು ಪ್ರತ್ಯೇಕವಾಗಿ ನಗರಕ್ಕೆ ಗಾಂಜಾ(Marijuana) ಮತ್ತು ಸಿಂಥೆಟಿಕ್‌ ಡ್ರಗ್ಸ್‌ ಪೂರೈಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಕೆ.ಜಿ.ಹಳ್ಳಿ ಉಪ ವಿಭಾಗದ ಎಸಿಪಿ ಜಗದೀಶ್‌ ಹಾಗೂ ಗೋವಿಂದಪುರ ಠಾಣೆ ಆರ್‌.ಪ್ರಕಾಶ್‌ ತಂಡ ಈ ಬೃಹತ್‌ ಬೇಟೆ ನಡೆಸಿದೆ. ನಾಗವಾರ ಸಮೀಪದ ಹಂದಿಜೋಗಿ ರುದ್ರಭೂಮಿ ಹತ್ತಿರ ಗಾಂಜಾ ಮಾರಾಟಕ್ಕೆ ಯತ್ನಿಸಿದ್ದಾಗ ಒಡಿಶಾ ಗ್ಯಾಂಗ್‌ ಸಿಕ್ಕಿಬಿದ್ದರೆ, ಎಚ್‌ಬಿಆರ್‌ ಲೇಔಟ್‌ 5ನೇ ಹಂತದ ಫಾರೆಸ್ಟ್‌ ಆಫೀಸ್‌ ಹಿಂಭಾಗದಲ್ಲಿ ಸಬ್‌ ಪೆಡ್ಲರ್‌ಗಳಿಗೆ ಡ್ರಗ್ಸ್‌ ಪೂರೈಸಲು ಬಂದಾಗ ಮುಂಬೈ ಗ್ಯಾಂಗ್‌ ಪೊಲೀಸರ ಗಾಳಕ್ಕೆ ಬಿದ್ದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Marijuana Racket: ಗಾಂಜಾ ಚಾಕ್ಲೆಟ್‌ ಮಾರುತ್ತಿದ್ದ ಒಡಿಶಾ ಮೂಲದ ಇಬ್ಬರು ಅರೆಸ್ಟ್‌

ಚೆನ್ನೈನಲ್ಲಿ ಬೆಂಗಳೂರಿನ ಪೊಲೀಸರಿಂದ ರೈಡ್‌

ಮುಂಬೈನ ರಜನಿಬಾಬು ಗುಪ್ತಾ ವೃತ್ತಿಪರ ಸ್ಮಗ್ಲರ್‌ ಆಗಿದ್ದು, ಬೆಂಗಳೂರು(Bengaluru) ಹಾಗೂ ಚೆನ್ನೈ(Chennai) ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಆತನ ಸಂಪರ್ಕ ಜಾಲವಿದೆ. ಕೆಲ ದಿನಗಳ ಹಿಂದೆ ಮುಂಬೈನ ತನ್ನ ಪೆಡ್ಲರ್‌ ಸೂಚನೆ ಮೇರೆಗೆ ರಜನಿ, ಬೆಂಗಳೂರಿನ ಎಚ್‌ಬಿಆರ್‌ ಲೇಔಟ್‌ ಬಳಿ 300 ಗ್ರಾಂ ಟ್ರೊಮೊಡಲ್‌ ಪೂರೈಸಲು ಬಂದಿದ್ದ. ಆ ವೇಳೆ ಖಚಿತ ಮಾಹಿತಿ ಪಡೆದು ರಜನಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಮಿಳುನಾಡಿನ ಚೆನ್ನೈ ನಗರದ ಆಂಡ್ರೋ ಫಿಲಿಫ್ಸ್‌ ಹಾಗೂ ರಾಜೇಶ್‌ ಬಗ್ಗೆ ಸುಳಿವು ಸಿಕ್ಕಿತು. ಕೂಡಲೇ ಚೆನ್ನೈಗೆ ತೆರಳಿ ಆ ಇಬ್ಬರನ್ನು ಪತ್ತೆ ಹಚ್ಚಲಾಯಿತು. ಕೊನೆಗೆ ಆಂಡ್ರೋ ಮಾಹಿತಿ ಮೇರೆಗೆ ಚೆನ್ನೈ ನಗರದ ಗೋದಾಮಿನ ಮೇಲೆ ದಾಳಿ ನಡೆಸಿದಾಗ 6.5 ಕೇಜಿ ಎಂಡಿಎಂ, 75 ಗ್ರಾಂ ಕೊಕೇನ್‌ ಹಾಗೂ .35 ಕೋಟಿ ಮೌಲ್ಯದ ಮೆಥಾಕ್ಯುಲೊನ್‌ ಪತ್ತೆಯಾಯಿತು. ಮಂಜುಗೆಡ್ಡೆ ರೂಪದಲ್ಲಿರುವ ಮೆಥಾಕ್ಯುಲೊನ್‌ ಅನ್ನು ಆಸ್ಪ್ರೇಲಿಯಾ ಹಾಗೂ ದುಬೈ ಸೇರಿದಂತೆ ವಿದೇಶಗಳಿಗೆ ಕಳ್ಳ ಮಾರ್ಗದಲ್ಲಿ ಮುಂಬೈ ತಂಡ ಸಾಗಿಸುತ್ತಿತ್ತು. ಈ ಡ್ರಗ್ಸ್‌ ಸೇವಿಸಿದರೆ ಸುಮಾರು 8 ತಾಸು ಮತ್ತಿನಲ್ಲಿರುವ ಅನುಭವವಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಒಡಿಶಾ ಗಡಿ ಭಾಗದಿಂದ ಬೆನ್ನು ಹತ್ತಿದ್ದ ಪೊಲೀಸ್‌

ಒಡಿಶಾ ರಾಜ್ಯದ ನಕ್ಸಲ್‌ ಪೀಡಿತ ಪ್ರದೇಶದಲ್ಲಿ ಬೆಳೆದ ಗಾಂಜಾವನ್ನು ಕಡಿಮೆ ಬೆಲೆಗೆ ಖರೀದಿಸಿ ಸಮರಕರ್‌ ತಂಡವು ನಗರಕ್ಕೆ ತಂದು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಗೋವಿಂದಪುರ ಠಾಣೆ ಪೊಲೀಸರು, ಒಡಿಶಾ ಗಡಿ ಭಾಗದಲ್ಲೇ ಆರೋಪಿಗಳ ಬೆನ್ನುಹತ್ತಿದ್ದಾರೆ. ಕೊನೆಗೆ ನಾಗವಾರ ಸಮೀಪ ಸಬ್‌ ಪೆಡ್ಲರ್‌ಗಳಿಗೆ ಗಾಂಜಾ ನೀಡುವಾಗ ದಾಳಿ ನಡೆಸಿ .1.4 ಕೋಟಿ ಗಾಂಜಾ ಜಪ್ತಿ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ