Gadag: ಚಲಿಸುತ್ತಿದ್ದ ಬೈಕ್‌ನ ಸೈಡ್ ಪ್ಯಾಕೆಟ್‌ನಿಂದ 10 ಲಕ್ಷ ರೂ. ಹಣ ಎಗರಿಸಿದ ಕಳ್ಳರು

By Govindaraj SFirst Published Apr 8, 2022, 10:50 PM IST
Highlights

ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಎಪಿಎಮ್‌ಸಿ ಸರ್ಕಲ್ ಬಳಿ ಚಲಿಸುತ್ತಿದ್ದ ಬೈಕ್‌ನ ಸೈಡ್ ಪ್ಯಾಕೆಟ್‌ನಿಂದ ಖದೀಮರು 10 ಲಕ್ಷ ರೂಪಾಯಿ ದೋಚಿದ್ದಾರೆ. ಪಟ್ಟಣದ ಎಪಿಎಮ್‌ಸಿ ಬಳಿ ಇರುವ ಎಸ್‌ಬಿಐ ಬ್ಯಾಂಕ್‌ನಿಂದ ರಾಮನಗೌಡ ಪಾಟೀಲ ಅನ್ನೋರು ಹಣ ಡ್ರಾ ಮಾಡ್ಕೊಂಡು ಹೊರಟಿದ್ರು.

ವರದಿ: ಗಿರೀಶ್ ಕಮ್ಮಾರ್, ಗದಗ

ಗದಗ (ಏ.08): ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಎಪಿಎಮ್‌ಸಿ ಸರ್ಕಲ್ (APMC Circle) ಬಳಿ ಚಲಿಸುತ್ತಿದ್ದ ಬೈಕ್‌ನ (Bike) ಸೈಡ್ ಪ್ಯಾಕೆಟ್‌ನಿಂದ ಖದೀಮರು 10 ಲಕ್ಷ ರೂಪಾಯಿ ದೋಚಿದ್ದಾರೆ. ಪಟ್ಟಣದ ಎಪಿಎಮ್‌ಸಿ ಬಳಿ ಇರುವ ಎಸ್‌ಬಿಐ ಬ್ಯಾಂಕ್‌ನಿಂದ (SBI Bank) ರಾಮನಗೌಡ ಪಾಟೀಲ ಅನ್ನೋರು ಹಣ ಡ್ರಾ ಮಾಡ್ಕೊಂಡು ಹೊರಟಿದ್ರು. ಬ್ಯಾಂಕ್‌ನಿಂದಲೇ ಪಾಟೀಲರನ್ನ ಹಿಂಬಾಲಿಸಿದ ಖದೀಮರು ಸರ್ಕಲ್ ಬಳಿ ಹಣ ದೋಚಿದ್ದಾರೆ. ಎಪಿಎಮ್‌ಸಿ ಆವರಣದಲ್ಲಿ ಅವಳಡಿಸಿರುವ ಸಿಸಿ ಟಿವಿ ಕ್ಯಾಮೆರಾದಲ್ಲಿ (CCTV Camera) ಖದೀಮರ ಚಲನವಲನ ಸೆರೆಯಾಗಿದೆ.

Latest Videos

ಬ್ಯಾಂಕ್‌ನಿಂದ ರಾಮನಗೌಡ ಅವರು ಹೊರ ಬರೋದನ್ನು ಕಾಯುತ್ತಿದ್ದ ಅಪರಿಚಿತ ವ್ಯಕ್ತಿ ಬೈಕ್ ಏರಿ ಹೊರಟ ಬಳಿಕ ಹಿಂಬಾಲಿಸಿದ್ದಾನೆ. ಸರ್ಕಲ್‌ನಲ್ಲಿ ತುಸು ಟ್ರಾಫಿಕ್ ಜಮಾವಣೆ ಆಗುತ್ತಿದ್ದಂತೆ ರಾಮನಗೌಡ ಪಾಟೀಲರು ಬೈಕ್ ಸ್ಲೋ ಮಾಡಿದರು. ಇದೇ ಸಮಯಕ್ಕೆ ಕಾಯುತ್ತಿದ್ದ ಖದೀಮ ಬೈಕ್ ಬಳಿ ಬಂದು ಪ್ಯಾಕೆಟ್‌ನಿಂದ ಹಣ ಎಗರಿಸಿದ್ದಾನೆ. ಹಣದ ಬ್ಯಾಗ್ ಕೈಗೆ ಬರುತ್ತಿದ್ದಂತೆ ಅಲ್ಲೇ ಕಾಯುತ್ತಿದ್ದ ಸಾಥೀದಾರರ ಬೈಕ್ ಏರಿ ಸ್ಥಳದಿಂದ ಪರಾರಿಯಾಗಿದ್ದಾನೆ.‌

ಅನುಮಾನಾಸ್ಪದ ರೀತಿಯಲ್ಲಿ ಬ್ಯಾಂಕ್‌ನಲ್ಲಿ ಮಾತನಾಡಿಸಿದ್ದರು: ಬ್ಯಾಂಕ್‌ನಲ್ಲಿ ಹಣ ಡ್ರಾ ಮಾಡಲು ನಿಂತಾಗ ಕೆಲವರು ರಾಮನಗೌಡರನ್ನ ಮಾತನಾಡಿದ್ದಾರೆ. ಹತ್ತಿ ಖರೀದಿ ವ್ಯಾಪಾರ ಮಾಡುವವರ ಬಳಿ ಕೆಲಸ ಮಾಡುವ ರಾಮನಗೌಡರನ್ನ ವ್ಯಾಪಾರ ವಿಚಾರವಾಗಿ ಕೆಲವರು ಮಾತ್ನಾಡಿಸಿದ್ದಾರೆ. ಖರೀದಿ ಕೆಲಸ ನಾನು ಮಾಡಲ್ಲ. ನೀವು ಲಕ್ಷ್ಮೀ ನಗರದ ರಾಜೇಂದ್ರ ಕಾಟನ್ ಇಂಡಸ್ಟ್ರಿಗೆ ಹೋಗಿ ನಮ್ಮ ಸಿಬ್ಬಂದಿಗೆ ವಿಚಾರಿಸಬಹುದು ಅಂತಾ ಅವ್ರು ಹೇಳಿದಾರೆ. ಅಲ್ಲಿಂದಲೇ ಖದೀಮರು ರಾಮನಗೌಡ ಅವರನ್ನು ಫಾಲೋ ಮಾಡಿದ್ರಾ ಅನ್ನೋ ಅನುಮಾನವೂ ಇದೆ.

Gadag: ಜೈಲಲ್ಲಿ ಫೋನ್ ಸಮಸ್ಯೆ: ಜಾಮೀನು ಸಿಕ್ಕ ವಿಷಯ ತಿಳಿಯದೆ ಕೈದಿ ಆತ್ಮಹತ್ಯೆ..!

ರೈತರ ಬಿಲ್ ಪಾವತಿಸಲು ಡ್ರಾ ಮಾಡಿದ್ದ ಹಣ: ದಲಾಲಿ ವರ್ತಕ ಆಗಿರುವ ಪ್ರಕಾಶ್ ಜೈನ್ ಅನ್ನೋರ ಬಳಿ ರಾಮನಗೌಡ ಪಾಟೀಲ ಕೆಲಸ ಮಾಡ್ತಾರೆ. ಜೈನ್ ಅವರು ರೈತರಿಂದ ಹತ್ತಿ ಖರೀದಿ ಮಾಡಿ ಹಣ ಸಂದಾಯ ಮಾಡಬೇಕಾಗಿತ್ತು. ಪ್ರಕಾಶ್ ಅವರ ಸೂಚನೆಯಂತೆ 10 ಲಕ್ಷ ರೂಪಾಯಿ ಹಣ ಡ್ರಾ ಮಾಡಿಕೊಂಡು ಬರಲು ರಾಮನಗೌಡರು ಬ್ಯಾಂಕ್‌ಗೆ ಹೋಗಿದ್ರು. ಹೀಗೆ ವಾಪಾಸ್ ಬರುವಾಗ ಹಣ ಕಳ್ಳತನವಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಿಪಿಐ ವಿಕಾಸ್ ಲಮಾಣಿ ಆ್ಯಂಡ್ ಟೀಮ್ ಸಿಸಿ ಟಿವಿ ತಪಾಸಣೆ ಮಾಡಿದ್ದಾರೆ. ಅಲ್ಲದೇ ಖದೀಮರ ಪತ್ತೆಗಾಗಿ ಬಲೆ ಬೀಸಿದ್ದಾರೆ.

click me!