Bengaluru Crime: ಮೊಬೈಲ್‌ ಜಗಳ ಗೆಳೆಯನ ಕೊಲೆಯಲ್ಲಿ ಅಂತ್ಯ

Kannadaprabha News   | Asianet News
Published : Feb 16, 2022, 04:29 AM IST
Bengaluru Crime: ಮೊಬೈಲ್‌ ಜಗಳ ಗೆಳೆಯನ ಕೊಲೆಯಲ್ಲಿ ಅಂತ್ಯ

ಸಾರಾಂಶ

*   ಕೋಣನಕುಂಟೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ *  ಜಂಬೂ ಸವಾರಿ ದಿಣ್ಣೆ ಬಳಿ ಕ್ಷುಲ್ಲಕ ಕಾರಣಕ್ಕೆ ಇಬ್ಬರ ಮಧ್ಯೆ ಜಗಳ *  ಮಂಜುನಾಥ್‌ ತಲೆಗೆ ಸಿಮೆಂಟ್‌ ಇಟ್ಟಿಗೆಯಿಂದ ಹಲ್ಲೆ ನಡೆಸಿದ ಆರೋಪಿ 

ಬೆಂಗಳೂರು(ಫೆ.16): ಮೊಬೈಲ್‌(Mobile) ವಿಚಾರವಾಗಿ ಬಾರ್‌ ಕೆಲಸಗಾರರ ನಡುವೆ ಉಂಟಾದ ಜಗಳ ಕೊಲೆಯಲ್ಲಿ(Murder) ಅಂತ್ಯವಾಗಿರುವ ಘಟನೆ ಕೋಣನಕುಂಟೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಜಂಬೂ ಸವಾರಿ ದಿಣ್ಣೆ ಸಮೀಪದ ನಿವಾಸಿ ಮಂಜುನಾಥ್‌(36) ಮೃತ(Death) ದುರ್ದೈವಿ. ಪ್ರಕರಣ ಸಂಬಂಧ ಮೃತನ ಗೆಳೆಯ ಶರತ್‌ಕುಮಾರ್‌ನನ್ನು ಕೋಣನಕುಂಟೆ ಠಾಣೆ ಪೊಲೀಸರು(Police)ಬಂಧಿಸಿದ್ದಾರೆ(Arrest). ಮದ್ಯದ ಅಮಲಿನಲ್ಲಿ ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ಜಂಬೂ ಸವಾರಿ ದಿಣ್ಣೆ ಬಳಿ ಕ್ಷುಲ್ಲಕ ಕಾರಣಕ್ಕೆ ಇಬ್ಬರ ಮಧ್ಯೆ ಜಗಳವಾಗಿದೆ. ಆಗ ಕೆರಳಿದ ಆರೋಪಿ, ಮಂಜುನಾಥ್‌ ತಲೆಗೆ ಸಿಮೆಂಟ್‌ ಇಟ್ಟಿಗೆಯಿಂದ ಹಲ್ಲೆ ನಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡು ಆತ ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಈ ಘಟನೆ ಬಗ್ಗೆ ಮಾಹಿತಿ ತಿಳಿದ ಕೂಡಲೇ ಆರೋಪಿ ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

Murder in Vijayapura: ಪ್ರೀತಿಸಿ ಮದುವೆಯಾಗಿದ್ದೇ ತಪ್ಪಾಯ್ತು...ಬೈಕ್ ನಲ್ಲಿ ತೆರಳುತ್ತಿದ್ದವನ ಹತ್ಯೆ!

ಬನಶಂಕರಿ ಸಮೀಪ ಜಮುನಾ ಬಾರ್‌ ಅಂಡ್‌ ರೆಸ್ಟೋರೆಂಟ್‌ನಲ್ಲಿ ಮಂಜುನಾಥ್‌ ಹಾಗೂ ಶರತ್‌ ಕೆಲಸ ಮಾಡುತ್ತಿದ್ದರು. ಎಂದಿನಂತೆ ರಾತ್ರಿ ಬಾರ್‌ ವಹಿವಾಟು ಮುಗಿದ ಬಳಿಕ ತಮ್ಮ ಸ್ನೇಹಿತರ ಜತೆ ಅವರು ಮನೆಗೆ ಮರಳುತ್ತಿದ್ದರು. ಆಗ ಮಾರ್ಗ ಮಧ್ಯೆ ಮೊಬೈಲ್‌ ಕೊಡುವಂತೆ ಶರತ್‌ಗೆ ಮಂಜುನಾಥ ಕೇಳಿದ್ದಾನೆ. ಇದಕ್ಕೆ ಆತ ಆಕ್ಷೇಪಿಸಿದ್ದಾನೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಕೋಪಗೊಂಡ ಶರತ್‌, ಮಂಜುನಾಥ್‌ ತಲೆಗೆ ಸಿಮೆಂಟ್‌ ಇಟ್ಟಿಗೆಯಿಂದ ಹಲ್ಲೆ(Assault) ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಡಿದ ಮತ್ತಿನಲ್ಲಿ ತಾಯಿಯನ್ನೇ ಕೊಂದ ಮಗ; ಪತ್ನಿ ಮೇಲೆಯೂ ಮಾರಣಾಂತಿಕ ಹಲ್ಲೆ

ಹಾಸನ(Hassan): ಕುಡಿದ ಮತ್ತಿನಲ್ಲಿ ಮಗನೇ ತಾಯಿಯನ್ನು(Mother) ಬರ್ಬರವಾಗಿ ಹತ್ಯೆಗೈದು ಪತ್ನಿ ಮೇಲೆಯೂ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಸಂಕಲಾಪುರ ಗ್ರಾಮದಲ್ಲಿ ನಡೆದಿದೆ. 
ಜಿಲ್ಲೆಯ ಸಂಕಲಾಪುರ ಗ್ರಾಮದ ಸಣ್ಣಮ್ಮ( 68) ಹತ್ಯೆಯಾದ ಮಹಿಳೆ. ಆರೋಪಿ ಪತ್ನಿ ರೂಪ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿದ್ದಾರೆ. ಭಾನುವಾರ ರಾತ್ರಿ ಕಂಠಪೂರ್ತಿ ಕುಡಿದು ಬಂದ ಪುತ್ರ ನಂಜೇಶ್‌ ಗೌಡ ಹೆತ್ತಮ್ಮನನ್ನು ಕೊಲೆ ಮಾಡಿದ್ದಾನೆ. 

ತಾಯಿಯನ್ನು ಕೊಂದ ಬಳಿಕ ಪತ್ನಿಯ ಕ್ಯಾಂಟೀನ್‌ ಬಳಿ ಬಂದು ಆಕೆಯ ಮೇಲೆಯೂ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಸಣ್ಣಮ್ಮ ಮೂಲತಃ ಹಾಸನ ತಾಲೂಕಿನ ಗೋಳೇನಹಳ್ಳಿಯವರಾಗಿದ್ದು, ಸದ್ಯ ಸಣ್ಣಮ್ಮ ಕುಟುಂಬ ಸಂಕಲಾಪುರದಲ್ಲಿ ನೆಲೆಸಿತ್ತು. ರೂಪಾ ಹಾಸನದ ಜಿಲ್ಲಾಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಹಾಸನ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ನೇಹಿತನ ಹತ್ಯೆ ಮಾಡಿದ್ದ ಆಟೋ ಚಾಲಕನ ಬಂಧನ

ವೈಯಕ್ತಿಕ ವಿಚಾರವಾಗಿ ಮನಸ್ತಾಪ ಹಿನ್ನೆಲೆಯಲ್ಲಿ ಸ್ನೇಹಿತನನ್ನು ತನ್ನ ಮನೆಗೆ ಕರೆಸಿಕೊಂಡು ಹತ್ಯೆಗೈದು(Murder) ಪರಾರಿಯಾಗಿದ್ದ ಆಟೋ ಚಾಲಕನನ್ನು ನಂದಿನಿ ಲೇಔಟ್‌ ಠಾಣೆ ಪೊಲೀಸರು(Police) ತಿಳಿಸಿದ್ದಾರೆ.

Bengaluru Crime: ಹೆಂಡ್ತಿ ಜತೆ ಅಕ್ರಮ ಸಂಬಂಧ?: ಹಾಡಹಗಲೇ ಸ್ನೇಹಿತನ ಕತ್ತು ಕೊಯ್ದು ಬರ್ಬರ ಹತ್ಯೆ

ನರಸಿಂಹಸ್ವಾಮಿ ಬಡಾವಣೆ ನಿವಾಸಿ ಆಟೋ ಚಾಲಕ ರವಿಕುಮಾರ್‌ (42) ಬಂಧಿತ(Accused). ತನ್ನ ಮನೆಗೆ ಬುಧವಾರ ಕರೆಸಿಕೊಂಡು ತನ್ನ ಗೆಳೆಯ ವಿದ್ಯಾರಣ್ಯಪುರದ ವಿಶ್ವನಾಥ್‌ನನ್ನು ಆರೋಪಿ ಕೊಂದಿದ್ದ. ಈ ಘಟನೆ ಬಳಿಕ ತುಮಕೂರಿನಲ್ಲಿ(Tumakuru) ತಲೆಮರೆಸಿಕೊಂಡಿದ್ದ ಆರೋಪಿಯನ್ನು ತಾಂತ್ರಿಕ ಮಾಹಿತಿ ಆಧರಿಸಿ ಪತ್ತೆ ಹಚ್ಚಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ರವಿ ಹಾಗೂ ವಿಶ್ವನಾಥ್‌ ಬಹಳ ವರ್ಷಗಳಿಂದ ಸ್ನೇಹಿತರಾಗಿದ್ದರು. ಇದೇ ಗೆಳೆತನದಲ್ಲೇ ವಿಶ್ವನಾಥ್‌ಗೆ ರವಿ ಆಟೋ ಬಾಡಿಗೆಗೆ ಕೊಡಿಸಿದ್ದ. ಆದರೆ ಇತ್ತೀಚಿಗೆ ವೈಯಕ್ತಿಕ ವಿಷಯವಾಗಿ ಅವರಿಬ್ಬರಲ್ಲಿ ಮನಸ್ತಾಪ ಮೂಡಿತ್ತು. ಆಗ ತನ್ನ ಪತ್ನಿ ಮತ್ತು ಮಗಳ ಬಗ್ಗೆ ವಿಶ್ವನಾಥ್‌ ಕೆಟ್ಟದಾಗಿ ಮಾತನಾಡಿದ ಎಂದು ಕೆರಳಿದ ರವಿ, ಸ್ನೇಹಿತನ ಹತ್ಯೆಗೆ ನಿರ್ಧರಿಸಿದ್ದ. ಅಂತೆಯೇ ಬುಧವಾರ ಮಾತುಕತೆ ನೆಪದಲ್ಲಿ ಮನೆಗೆ ಕರೆಸಿಕೊಂಡು ಆರೋಪಿ ಈ ಸ್ನೇಹಿತನ ಹತ್ಯೆ ಎಸಗಿದ್ದ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ